ಕೊಪ್ಪಳ: ವಂಚಕರಿಗೆ ಅಡ್ಡೆಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್, ಸಿಸಿಬಿ ತನಿಖೆಗೆ ಒತ್ತಾಯಿಸಿದ ಸಚಿವ ತಂಗಡಗಿ

ಉದ್ಯಮಿ ಗೋವಿಂದ ಪೂಜಾರಿ ಅವರನ್ನು ವಂಚಿಸಿದ ರೀತಿಯಲ್ಲೇ ಕೊಪ್ಪಳದಲ್ಲೂ ಬಿಜೆಪಿ ಮುಖಂಡನಿಗೆ ವಿಶಾಲ್ ನಾಗ್ ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್​ನಲ್ಲಿ ಕುಳಿತುಕೊಂಡೇ ಡೀಲ್ ಮಾಡಿದ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ತನಿಖೆಗೆ ವಹಿಸುವಂತೆ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.

ಕೊಪ್ಪಳ: ವಂಚಕರಿಗೆ ಅಡ್ಡೆಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್, ಸಿಸಿಬಿ ತನಿಖೆಗೆ ಒತ್ತಾಯಿಸಿದ ಸಚಿವ ತಂಗಡಗಿ
ಸಚಿವ ಶಿವರಾಜ ತಂಗಡಗಿ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Rakesh Nayak Manchi

Updated on:Sep 17, 2023 | 12:41 PM

ಕೊಪ್ಪಳ, ಸೆ.17: ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಂಚನೆ ಎಸಗಿದ ರೀತಿಯಲ್ಲೇ ಕೊಪ್ಪಳದಲ್ಲೂ ಬಿಜೆಪಿ ಮುಖಂಡನಿಗೆ ವಿಶಾಲ್ ನಾಗ್ ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್​ನಲ್ಲಿ ಕುಳಿತುಕೊಂಡೇ ಡೀಲ್ ಮಾಡಿದ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸುವಂತೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಒತ್ತಾಯಿಸಿದ್ದಾರೆ.

ಪ್ರತಿಷ್ಠಿತ ರಿಚ್ ಕಾರ್ಲಟನ್ ಹೋಟೆಲ್​ನಲ್ಲಿ ಕುಳಿತುಕೊಂಡು ಡೀಲ್ ನಡೆಸಿದ ಶಂಕೆ ವ್ಯಕ್ತವಾಗಿದೆ. ರೂಂ ನಂಬರ್ 1132 ನಲ್ಲಿದ್ದ ಆರೋಪಿ ವಿಶಾಲ್ ನಾಗ್, ಅಲ್ಲಿಯೇ ಕುಳಿತು ಟಿಕೆಟ್ ಆಕಾಂಕ್ಷಿಗಳ ಜೊತೆ ಡೀಲ್ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟದವರನ್ನೆ ಟಾರ್ಗೇಟ್ ಮಾಡಿದ್ದ ವಿಶಾಲ್ ನಾಗ್ ಅಂಟ್ ಟೀಂ, ತಾನು ಬಿಜೆಪಿ ಕೇಂದ್ರ ಚುನಾವಣೆ ಸರ್ವೇ ಟೀಂ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ತನಗೆ ಕೇಂದ್ರ ಗೃಹಸಚಿವ ಅಮಿತ್ ಶಾ, ಅರುಣ್ ಸಿಂಗ್ ಪರಿಚಯ ಇದೆ. ಅವರ ಸೂಚನೆ ಮೇರೆಗೆ ಸರ್ವೆ ಮಾಡುತ್ತಿದ್ದೆನೆಂದು ಹೇಳಿಕೊಂಡಿದ್ದ. ಹೀಗಾಗಿ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಕೇಸ್​​ಗೆ ಸ್ಫೋಟಕ ತಿರುವು, ಕೊಟ್ಯಂತರ ರೂಪಾಯಿ ಡೀಲ್​ಗೆ ಬಿಜೆಪಿ ಕಚೇರಿ ಲಿಂಕ್

ಪ್ರಕರಣವನ್ನು ಸಿಸಿಬಿಗೆ ವಹಿಸಿದರೆ ಎಲ್ಲಾ ಡೀಲ್ ಬೆಳಕಿಗೆ ಬರುತ್ತದೆ ಎಂದು ಹೇಳಿದ ತಂಗಡಗಿ, ಬಿಜೆಪಿಯಲ್ಲಿ ಎಲ್ಲವೂ ಸೇಲ್ ಆಗಿವೆ. ಬಹುಶಃ ವಿಪಕ್ಷ ನಾಯಕ ಸ್ಥಾನ, ರಾಜ್ಯದ್ಯಕ್ಷ ಸ್ಥಾನಕ್ಕೆ ಇನ್ನು ಟೆಂಡರ್ ಆಗಿಲ್ಲ ಅನ್ಸುತ್ತದೆ. ಟೆಂಡರ್ ಯಾವಗ ಕರಿತಾರೋ ನೋಡಬೇಕು. ಟೆಂಡರ್​ನಲ್ಲಿ ಜೆಡಿಎಸ್​ನವರು ಭಾಗಹಿಸಬಹುದು. ಯಾರು ಹೆಚ್ಚು ದುಡ್ಡಿಗೆ ಬಿಡ್ ಮಾಡುತ್ತಾರೋ ಗೊತ್ತಿಲ್ಲ. ಮುಂದೆ ಎಂಪಿ ಟಿಕೆಟ್ ಕೂಡಾ ಇದೇ ರೀತಿ ಸೇಲ್ ಆಗುತ್ತದೆ. ಚಕ್ರವರ್ತಿ ಸುಲಿಬೆಲೆ ಹಾಗೂ ಚೈತ್ರಾ ಕುಂದಾಪುರ ಅಣ್ಣತಂಗಿ ಇದ್ದಂತೆ. ಬಿಜೆಪಿಯಲ್ಲಿ ಎಲ್ಲಾ ಹುದ್ದಗಳು ಮಾರಾಟಕ್ಕಿವೆ ಎಂದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದು ಇವಾಗ ನಿಜ ಆನಿಸುತ್ತಿದೆ. ಎಂಎಲ್​ಎ ಟಿಕೆಟ್​ಗೆ 5-7 ಕೋಟಿ, ಮಂತ್ರಿಗಿರಿಗೆ 50-70 ಕೋಟಿ, ಸಿಎಂ ಹುದ್ದೆಗೆ 2000 ಕೋಟಿಗೆ ಫಿಕ್ಸ್ ಆಗಿದೆ ಎಂದು ಬಿಜೆಪಿ ವಿರುದ್ಧ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sun, 17 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ