AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಬಿಕೆ ಹರಿಪ್ರಸಾದ್

‘ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’: ಬಿಕೆ ಹರಿಪ್ರಸಾದ್

ಪ್ರಸನ್ನ ಗಾಂವ್ಕರ್​
| Edited By: |

Updated on: Jul 22, 2026 | 7:48 PM

Share

ಮುಖ್ಯಾಂಶಗಳು

  • ಕೆಪಿಸಿಸಿ ಕಚೇರಿ ಬಳಿ ಶಾಸಕ ಬಿ.ಪಿ.ಹರೀಶ್​ ಮೇಲೆ ಮೊಟ್ಟೆ ಎಸೆತ
  • ರಾಜ್ಯ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
  • ಮೊದಲು ಅವರು ಮೊಟ್ಟೆ ಹೊಡೆದಿದ್ದು ಎಂದ ಬಿ.ಕೆ.ಹರಿಪ್ರಸಾದ್

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೊಟ್ಟೆ ಎಸೆಯುವ ಪ್ರತಿಭಟನೆಗಳನ್ನು ಬಿಜೆಪಿಯೇ ಮೊದಲು ಪ್ರಾರಂಭಿಸಿತು ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬ್‌ಗಳಿವೆ ಎಂಬ ಬಿಜೆಪಿ ದೂರನ್ನು ಪ್ರಶ್ನಿಸಿದ ಹರಿಪ್ರಸಾದ್, ಬಿಜೆಪಿ ತನ್ನದೇ ರೌಡಿ ಮೋರ್ಚಾ ರಚಿಸಿ ಹಲ್ಲೆ ನಡೆಸುತ್ತಿದೆ ಎಂದು ಟೀಕಿಸಿದರು.

ಬೆಂಗಳೂರು, ಜುಲೈ 22: ಕೆಪಿಸಿಸಿ ಕಚೇರಿ ಬಳಿ ಶಾಸಕ ಬಿ.ಪಿ.ಹರೀಶ್​ ಮೇಲೆ ಮೊಟ್ಟೆ ಎಸೆತ ಪ್ರಕರಣ ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​​ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ‘ಕೆಪಿಸಿಸಿ ಕಚೇರಿ ಬಳಿ ಬಂದಾಗ ಬಿಜೆಪಿಯವರೇ ಮೊಟ್ಟೆ ಹೊಡೆದಿದ್ದಾರೆ. ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊದಲು ಅವರು ಹೊಡೆದಿದ್ದು, ಆನಂತರ ನಮ್ಮವರು ಹೊಡೆದಿದ್ದಾರೆ. ಬಿಜೆಪಿಯಲ್ಲೇ ರೌಡಿಗಳ ಮೋರ್ಚಾ ಇರೋದು. ಬಿಜೆಪಿ ಕಚೇರಿಗೆ ಪ್ರತಿಭಟನೆಗೆ ಹೋಗಿದ್ವಿ, ಆಗ ಮೊಟ್ಟೆ ಹೊಡೆದ್ರಾ? ಕಾಂಗ್ರೆಸ್ ಕಚೇರಿ ಅಂದರೆ ಒಂದು ದೇವಾಲಯ ಇದ್ದಂತೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸೆಲ್ಪ್ ಡಿಫೆನ್ಸ್ ಮಾಡಿದ್ದಾರೆ’ ಎಂದು ಸಮರ್ಥನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us