ಪ್ರಲ್ಹಾದ್​ ಜೋಶಿರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ರು: ಬಿಎಸ್​​ವೈ, ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 7:02 PM

ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ವಕ್ಫ್ ವಿರೋಧಿ ಜಾಗೃತಿ ಅಭಿಯಾನಕ್ಕೆ ಹೈಕಮಾಂಡ್ ಬೆಂಬಲವಿದೆ ಎಂದು ಹೇಳಿದ್ದಾರೆ.

ಪ್ರಲ್ಹಾದ್​ ಜೋಶಿರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ರು: ಬಿಎಸ್​​ವೈ, ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ
ಪ್ರಲ್ಹಾದ್​ ಜೋಶಿರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ರು: ಬಿಎಸ್​​ವೈ, ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ
Follow us on

ಹುಬ್ಬಳ್ಳಿ, ನವೆಂಬರ್​ 16: ಈ ಬಾರಿ ಪ್ರಲ್ಹಾದ್​ ಜೋಶಿರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ದರು ಎಂದು ಬಿಎಸ್​ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Yatnal) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ಸೋಲಿಸಲು ಪ್ರಯತ್ನಿಸಿದ್ದರು ಎಂದು ಹೊಸ ಬಾಂಬ್​ ಹಾಕಿದ್ದಾರೆ.

ಇದು ಅವರ ರಕ್ತಗತವಾಗಿದೆ

ನಮ್ಮಲ್ಲಿ ಒಡಕು ತರುವ ಪ್ರಯತ್ನ ಸನ್ಮಾನ್ಯ ವಿಜಯೇಂದ್ರ ಮಾಡುತ್ತಿದ್ದಾರೆ. ವಿಜಯೇಂದ್ರ ತಂದೆ ಯಡಿಯೂರಪ್ಪನವರು ಸಹ ಹೀಗೆ ಮಾಡಿದ್ದಾರೆ. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ರು, ಇದು ಅವರ ರಕ್ತಗತವಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜಮೀರ್​​ಗೆ ತಾಕತ್ತಿದ್ರೆ ರಾಜಕೀಯದ ಬಗ್ಗೆ ಮಾತಾಡಲಿ, ಕರಿಯ, ಬಿಳಿಯ ಬೇಡ: ಬಸನಗೌಡ ಯತ್ನಾಳ್

ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಹೈಕಮಾಂಡ್ ಬೆಂಬಲ ಇದೆ. ನಮ್ಮ ಅಭಿಯಾನಕ್ಕೆ ಹೈಕಮಾಂಡ್ ಬೆಂಬಲ ಇದೆ. ಹೈಕಮಾಂಡ್ ಬೆಂಬಲ ಇದಿದ್ದರಿಂದಲೇ ಜೆಪಿಸಿ ಕಮಿಟಿ ಬಂದಿರೋದು. ನಾವು ಡಿಸೆಂಬರ್​ 25ರಿಂದ ಜನಜಾಗೃತಿ ಅಭಿಯಾನ ಆರಂಭಿಸುತ್ತೇನೆ. ಮೂರು ತಂಡಗಳಿಗೆ ತಂದೆ ಇಲ್ಲ, ತಾಯಿನೂ ಇಲ್ಲ ಅಂತಾ ವ್ಯಂಗ್ಯವಾಡಿದ್ದಾರೆ. ನಮ್ಮನ್ನು ನೋಡಿ ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ವಿಜಯೇಂದ್ರಗೆ ವಕ್ಫ್​ ವಿರುದ್ಧ ಹೋರಾಟದ ಬಗ್ಗೆ ಕಾಳಜಿ ಇಲ್ಲ. ಅಪ್ಪನ ತರಹ ಲೂಟಿ ಮಾಡೋದಷ್ಟೇ ಗುರಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್​ನ 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್​ ಆರೋಪ ವಿಚಾರವಾಗಿ ಮಾತನಾಡಿದ್ದು, ದೇವರಾಣೆ ಬಿಜೆಪಿಗೆ ಸರ್ಕಾರ ರಚನೆ ಮಾಡೋ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಳಿಸಲು ಪ್ರಯತ್ನ ಮಾಡ್ತಿದ್ದಾರೆ. ನಾವು ಸರ್ಕಾರ ರಚನೆ ಮಾಡಿದರೆ 100 ಭ್ರಷ್ಟಾಚಾರ ಮಾಡುತ್ತೇವೆ. ಕುದುರೆ ವ್ಯಾಪಾರ ಡಿಕೆ ಶಿವಕುಮಾರ್​ ಮತ್ತು ವಿಜಯೇಂದ್ರ ಇಬ್ಬರಿಗೆ ಮಾತ್ರ ಗೊತ್ತಿದೆ ಎಂದಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿಗೆ ಕರಿಯ ಎಂದು ಜಮೀರ್ ಮಾತನಾಡಿದ್ದು ಸರಿಯಲ್ಲ. ರಾಜಕೀಯವಾಗಿ ಮಾತಾಡಿ, ವೈಯಕ್ತಿಕ ಟೀಕೆ ಮಾಡಬಾರದು. ಧಮ್ ಇದ್ದರೆ ನಿನ್ನ ಕೆಲಸ ಹೇಳಿ. ಜಮೀರ್ ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದಾರೆ. ವರ್ಣ, ಜಾತಿ ನಿಂದನೆ ಮಾತಾಡಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಪ್ರೀತಂಗೌಡಗೆ ಬಸನಗೌಡ ಯತ್ನಾಳ್ ಹೆಸರು ಹೇಳಲೂ ಇಷ್ಟವಿಲ್ಲ

ವಕ್ಫ್​ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಬಣಗಳ ವಿಚಾರವಾಗಿ ಮಾತನಾಡಿದ್ದು, ಅವರಿಗೆ ಯಾವ ವಕ್ಫ್​ ಹೋರಾಟ ಬೇಕಾಗಿಲ್ಲ. ಜಾಗೃತಿ ಜಾಥಾ ಪಟ್ಟಿಯಲ್ಲಿ ಪ್ರತಾಪ್ ಸಿಂಹ ಕೈಬಿಟ್ಟಿದ್ದಕ್ಕೆ ಗರಂ ಆದರು. ಇದು ಅಪ್ಪ-ಮಕ್ಕಳ ದಂಧೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.