ದೇವರ ಕೋಣ ನಾಪತ್ತೆ: ಗ್ರಾಮಸ್ಥರಲ್ಲಿ ಆಂತಕ, ಹುಡುಕಿಕೊಡುವಂತೆ ಪೊಲೀಸ್​ ಮೊರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2024 | 9:54 PM

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದ ದುರ್ಗಾದೇವಿಯ ನಾಲ್ಕು ವರ್ಷದ ಕೋಣ ಕಳೆದ ಎರಡು ತಿಂಗಳಿಂದ ಕಾಣೆಯಾಗಿದೆ. ಗ್ರಾಮಸ್ಥರು ಹಾಗೂ ದೇವಸ್ಥಾನದ ಸಿಬ್ಬಂದಿ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಕೋಣ ಗ್ರಾಮದಲ್ಲೇ ಇರಬೇಕೆಂಬ ನಂಬಿಕೆಯಿಂದ ಹುಡುಕಾಟ ಮುಂದುವರೆಸಿದ್ದು, ಈಗ ಪೊಲೀಸರ ಸಹಾಯಕ್ಕಾಗಿ ಮನವಿ ಮಾಡಲಾಗಿದೆ.

ದೇವರ ಕೋಣ ನಾಪತ್ತೆ: ಗ್ರಾಮಸ್ಥರಲ್ಲಿ ಆಂತಕ, ಹುಡುಕಿಕೊಡುವಂತೆ ಪೊಲೀಸ್​ ಮೊರೆ
ದೇವರ ಕೋಣ ನಾಪತ್ತೆ: ಗ್ರಾಮಸ್ಥರಲ್ಲಿ ಆಂತಕ, ಹುಡುಕಿಕೊಡುವಂತೆ ಪೊಲೀಸ್​ ಮೊರೆ
Follow us on

ಹಾವೇರಿ, ಡಿಸೆಂಬರ್​ 16: ಆ ಗ್ರಾಮದ ಆರಾಧ್ಯದೈವ ದುರ್ಗಾದೇವಿ. ದುರ್ಗಾದೇವಿಗೆ ದೇವರ ಕೋಣವನ್ನ (Buffalo) ಬಿಡಲಾಗಿತ್ತು. ಈಗ ಎರಡು ತಿಂಗಳ ಹಿಂದೆ ದೇವರ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಹಾಗೂ ಸಮಿತಿ ಸದಸ್ಯರು ಹುಡುಕಾಟ ನಡೆಸಿದರೂ ಕೋಣ ಮಾತ್ರ ಪತ್ತೆಯಾಗಿಲ್ಲ. ಇದೀಗ ಗ್ರಾಮಸ್ಥರು ಪೊಲೀಸರಿಗೆ ದೇವರ ಕೋಣ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದ ದುರ್ಗಾದೇವಿಯ 4 ವರ್ಷದ ದೇವರ ಕೋಣ ಕಾಣೆಯಾಗಿದೆ. ಕಳೆದ ಎರಡು-ಮೂರು ತಿಂಗಳ ಹಿಂದೆಯೇ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ಮಾಡಿದ್ದಾರೆ. ಅದರೂ ಸಹ ದೇವರ ಕೋಣ ಸಿಕ್ಕಿಲ್ಲ.

ಇದನ್ನೂ ಓದಿ: ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಾಸ್ಪದ ಬ್ಯಾಲೆಟ್​ ಬಾಕ್ಸ್ ಪತ್ತೆ ಕೇಸ್: ಐವರ ಬಂಧನ

ಗ್ರಾಮದ ಆರಾಧ್ಯದೈವ ಗ್ರಾಮದ ದೇವಿಯ ಕೋಣ ಗ್ರಾಮದಲ್ಲಿಯೇ ಓಡಾಡುಕೊಂಡು ಇರಬೇಕು. ಅದು ಗ್ರಾಮದಲ್ಲಿಯೇ ಇದ್ದರೆ ಗ್ರಾಮದಲ್ಲಿ ಜನರಿಗೆ ಹಾಗೂ ಗ್ರಾಮಕ್ಕೆ ಒಳಿತು ಆಗುತ್ತೆ ಅನ್ನೋ ನಂಬಿಕೆ ಗ್ರಾಮದ ಜನರದ್ದು, ಹೀಗಾಗಿ ಕೋಣ ಹುಡುಕಾಟ ನಡೆಸಿದ್ದಾರೆ.

ಎರಡು ತಿಂಗಳಿನಿಂದ ಕೋಣ ನಾಪತ್ತೆ

ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿಯ ಹೆಸರಿನಲ್ಲಿ ಕೋಣವನ್ನ ಬಿಡಲಾಯಿತ್ತು. ಗ್ರಾಮದಲ್ಲಿಯೇ ಕೋಣ ಓಡಾಡಿಕೊಂಡು ಮೇವು ತಿಂದುಕೊಂಡು ಇತ್ತು. ಈಗ ಕಳೆದ ಎರಡು ತಿಂಗಳಿನಿಂದ ಕೋಣ ಕಾಣುತ್ತಿಲ್ಲ. ದೇವಿಯ ಟ್ರಸ್ಟ್ ಸಿಬ್ಬಂದಿ ಹಾಗೂ ಗ್ರಾಮದ ಜನರು ಹುಡುಕಾಟ ನಡೆಸಿದ್ದಾರೆ. ಅದರೂ ಕೋಣ ಮಾತ್ರ ಸಿಕ್ಕಿಲ್ಲ. ಹೀಗಾಗಿ ದೇವರ ಕೋಣ ಹುಡುಕಿಕೊಡುವಂತೆ ಪೊಲೀಸರಿಗೆ ರಟ್ಟಿಹಳ್ಳಿ ಗ್ರಾಮದ ಜನರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಕಿಟಿಕಿಯಿಂದ ಲಕ್ಷ ಲಕ್ಷ ಹಣ ಎಸೆದರು! ವಿಡಿಯೋ ನೋಡಿ

ಒಟ್ನಲ್ಲಿ ಎರಡು ತಿಂಗಳಿನಿಂದ ದೇವರ ಕೋಣ ನಾಪತ್ತೆಯಾಗಿದೆ. ಇದು ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದ್ದು, ಅಲ್ಲದೆ ಈಗ ಗ್ರಾಮಸ್ಥರು ದೇವರ ಕೋಣ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.