Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ: ಪತ್ತೆ ಮಾಡಿದ್ದೇ ರೋಚಕ

ಚಾರ್ಮಾಡಿ ಘಾಟ್​ನಲ್ಲಿ 20 ವರ್ಷದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸುವ ಮೂಲಕ ಯುವಕನನ್ನು ರಕ್ಷಿಸಿದ್ದಾರೆ. ಕುಟುಂಬ ಕಲಹದಿಂದ ಬೇಸತ್ತು ಈ ಯತ್ನಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನಿಗೆ ಬಣಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ.

ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ: ಪತ್ತೆ ಮಾಡಿದ್ದೇ ರೋಚಕ
ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ: ಪತ್ತೆ ಮಾಡಿದ್ದೇ ರೋಚಕ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2024 | 9:31 PM

ಚಿಕ್ಕಮಗಳೂರು, ಡಿಸೆಂಬರ್​ 16: ಚಾರ್ಮಾಡಿ ಘಾಟ್​​​ನಲ್ಲಿ (Charmadi Ghat) ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾರ್ಮಾಡಿ ಘಾಟ್​​ನ ಏಕಲವ್ಯ ಶಾಲೆಯ ಬಳಿ ನಡೆದಿದೆ. ಬ್ಲೇಡ್​​​ನಿಂದ ಕುತ್ತಿಗೆ ಕುಯ್ದುಕೊಂಡು ಮನು(20) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಟುಂಬ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಹಾಸನ ಮೂಲದ ಮನು ಮುಂದಾಗಿದ್ದಾ ಎಂದು ತಿಳಿಬಂದಿದೆ.

ಇನ್ನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಾಟ್ಸಾಪ್​ನಲ್ಲಿ ಪೋಷಕರು, ಸ್ನೇಹಿತರಿಗೆ ಮನು ಲೊಕೇಶನ್ ಕಳಿಸಿದ್ದ. ಕೊಡಲೇ 112ಗೆ ಕರೆ ಮಾಡಿ ಯುವಕನನ್ನ ರಕ್ಷಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಪೋಷಕರು ಮನವಿ ಮಾಡಿದ್ದಾರೆ. ಹೀಗಾಗಿ ಯುವಕನನ್ನು ರಕ್ಷಿಸಿ ಬಣಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ 

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ. ಬಡವರನ್ನ ಟಾರ್ಗೆಟ್ ಮಾಡಿ ಸಾಲ ಕೊಡುವುದು, ಬಳಿಕ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಅಂತ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಂತೆ ಸಾಲಗಾರರ ಕಾಟ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ವ್ಯಾಪಾರಕ್ಕೆಂದು ದೂರದ ಊರಿನಿಂದ ದಾವಣಗೆರೆಗೆ ಬಂದಿದ್ದ ದಂಪತಿಯ ಮಗು ಕಿಡ್ನ್ಯಾಪ್

ರಾಯಲ್ಪಾಡು ಗ್ರಾಮದ ಕೋಮಲದೇವಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಮಗಳ ವಿದ್ಯಾಭಾಸ್ಯ ಮತ್ತು ಕುಟುಂಬ ನಿರ್ವಹಣೆಗೆ ಸಾಲ ಮಾಡಿದ್ದ ಕೋಮಲದೇವಿ, ಇತ್ತೀಚೆಗೆ ಬಡ್ಡಿಕೋರರ ಕಾಟ ಹೆಚ್ಚಾಗಿದೆ. ಹಾಗಾಗಿ ಸಾಲ ಕೊಟ್ಟಿರುವವರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು.

ಅಪರಿಚಿತ ವಾಹನ ಡಿಕ್ಕಿ: ಕರಡಿ ಸಾವು

ಮತ್ತೊಂದು ಪ್ರಕರಣದಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದಿದ ಪರಿಣಾಮ, ಮೂರು ವರ್ಷದ ಕರಡಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಬಳಿ ನಸುಕಿನ ಜಾವ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಪತ್ನಿ ಕಾಟಕ್ಕೆ ಬೆಂಗಳೂರಿನಲ್ಲಿ ಮತ್ತೋರ್ವ ವ್ಯಕ್ತಿ ಬಲಿ: ಡೆತ್​ನೋಟ್ ಬರೆದಿಟ್ಟು ಬಾಲರಾಜ್ ಆತ್ಮಹತ್ಯೆ

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕರಡಿ ಧಾಮ ಇಲ್ಲದೇ ಇರೋದರಿಂದ ಆಹಾರ ಅರಿಸಿಕೊಂಡು ಹೋಗುತ್ತಿರುವ ಕರಡಿಗಳು, ವಾಹನಗಳಿಗೆ ಸಿಕ್ಕು ಸಾಯುತ್ತಿದ್ದು, ಕೂಡಲೇ ಕರಡಿ ಧಾಮ ಆರಂಭಿಸಬೇಕು ಅಂತ ಜನರು ಆಗ್ರಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್