ವೇಗವಾಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಯುವಕರ ಬೈಕ್ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕ್ ಸವಾರರಾದ ಗೌತಮ್ ಮತ್ತು ಶ್ರೀಕಾಂತ್ ಮರಣ ಹೊಂದಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿಯಲ್ಲಿ ಅಪಘಾತ:
ರಸ್ತೆ ಪಕ್ಕದಲ್ಲಿದ್ದ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇದೇ ತಿಂಗಳ 16 ನೇ ತಾರೀಕಿನಂದು ನಡೆದಿದೆ. ನಗರದ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೂರೂವರೆ ವರ್ಷದ ನಯನಾ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದೆ. ಬೈಕ್ನಲ್ಲಿದ್ದ ನಯನಾಳ ತಾಯಿ ಯಶೋಧಾ(21), ತಮ್ಮ ಸಾಯಿರಾಮ(1.5 ವರ್ಷ) ಹಾಗೂ ಮಾವ ಅಣ್ಣಪ್ಪ ಲಮಾಣಿಗೆ(25) ಗಾಯಗಳಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದರು. ಬೈಕ್ನಲ್ಲಿದ್ದವರು ಶಿಗ್ಗಾಂವಿಯಿಂದ ಮೊಟೇಬೆನ್ನೂರು ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಬೈಕ್ಗೆ ಹಿಂದಿನಿಂದ ಕಾರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು