ಹೊಸ ವರ್ಷಾಚರಣೆಗೂ ಮುನ್ನ 4 ಡ್ರಗ್ ಪೆಡ್ಲರ್ಗಳ ಮೇಲೆ ದಾಳಿ
ಸಿಸಿಬಿ ಹೊಸ ವರ್ಷದಂದು ವಿತರಿಸಲು ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ವಶಪಡಿಸಿಕೊಂಡಿದ್ದು, ದಂಧೆ ನಡೆಸುತ್ತಿದ್ದವರಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ರಾಜಧಾನಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ದಂಧೆಯನ್ನು ನಿಗ್ರಹಿಸುವಲ್ಲಿ ಸಿಸಿಬಿ ಭಾರಿ ಶ್ರಮ ಹಾಕುತ್ತಿದೆ. ಈಗಾಗಲೇ ನೂರಾರು ಪೆಡ್ಲರ್ಗಳನ್ನು ಬಲೆಗೆ ಕೆಡವಿದೆ. ಮತ್ತೊದಷ್ಟು ಖದೀಮರಿಗಾಗಿ ಬಲೆ ಹಿಡಿದು ಕಣ್ಗಾವಲು ಹಾಕಿದೆ. ಸದ್ಯ ಈ ಕುರಿತು ಮತ್ತೊಂದು ದಾಳಿ ನಡೆದಿದ್ದು, ಡ್ರಗ್ಸ್ ವಿತರಿಸುತ್ತಿದ್ದ ಪೆಡ್ಲರ್ಗಳನ್ನು ಬಂಧಿಸಿದ್ದಾಗಿ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಟ್ವೀಟ್ drug peddlerಮಾಡಿದ್ದಾರೆ.
ಹೌದು ಸಿಸಿಬಿ ಡ್ರಗ್ಸ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಹೊಸ ವರ್ಷದಂದು ವಿತರಿಸುವ ನಿಟ್ಟಿನಲ್ಲಿ ಸಂಗ್ರಹಿಸಿಟ್ಟಿದ್ದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 4 ಪೆಡ್ಲರ್ಗಳನ್ನು ಬಂಧಿಸಿದ್ದೇವೆ ಎಂದು ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.
Important crackdown on drugs by CCB.. drugs brought & stocked up for distribution during NEW YEAR seized.. narcotics worth 1 cr seized .. 4 peddlers arrested.. @CPBlr @BlrCityPolice pic.twitter.com/YZhSppEH6F
— Sandeep Patil IPS (@ips_patil) December 16, 2020
Published On - 12:06 pm, Wed, 16 December 20