ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ: ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್​ ಕಿಡಿ

ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ ಎಂದು ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಜೆಡಿಎಸ್​ ಕೆಂಡಕಾರಿದೆ. ಎಸ್​ಐಟಿ ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ ಎಂದಿದ್ದಾರೆ.

ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ: ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್​ ಕಿಡಿ
ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ: ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್​ ಕಿಡಿ
Updated By: ಗಂಗಾಧರ​ ಬ. ಸಾಬೋಜಿ

Updated on: May 23, 2024 | 6:59 PM

ಬೆಂಗಳೂರು, ಮೇ 23: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಲೆಮರೆಸಿಕೊಂಡು ಇವತ್ತಿಗೆ 26 ದಿನಗಳು ಕಳೆದಿವೆ. ಪ್ರಕರಣ ಬೆಳಕಿಗೆ ಬಂದು ತಿಂಗಳಾಗುತ್ತಾ ಬಂದ್ರೂ ಪ್ರಜ್ವಲ್​ ರೇವಣ್ಣ ಮಾತ್ರ ಇನ್ನು ವಿದೇಶದಿಂದ ವಾಪಸ್ ಆಗುತ್ತಿಲ್ಲ. ಈ ವಿಚಾರವಾಗಿ ಆರೋಪಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಪ್ರಜ್ವಲ್ ಎಲ್ಲಿರಬಹುದೆಂದು ಸಿಡಿ ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಜೆಡಿಎಸ್ ಕೆಂಡಕಾರಿದೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಜೆಡಿಎಸ್​, ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CDಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ ಎಂದು ಪ್ರಶ್ನಿಸಿದೆ.

ಜೆಡಿಎಸ್​ ಟ್ವೀಟ್​​

ಎಸ್​ಐಟಿ ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. ಡಿಕೆ ಶಿವಕುಮಾರ್​​ ತನಿಖಾ ತಂಡಕ್ಕೆ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕಷ್ಟೇ ಅಲ್ಲ, CDಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ! ಈ ಶತಮಾನ ಕಂಡು ಕೇಳರಿಯದ ಸೋಜಿಗ!!

ಇದನ್ನೂ ಓದಿ: ನೀನು ಎಲ್ಲೇ ಇದ್ದರೂ ಬಂದು ಪೊಲೀಸರ ಮುಂದೆ ಶರಣಾಗು: ಪ್ರಜ್ವಲ್​ಗೆ ದೇವೇಗೌಡ ವಾರ್ನಿಂಗ್

ಪೆನ್ ಡ್ರೈವ್ ಫ್ಯಾಕ್ಟರಿ ಒರಿಜಿನಲ್ ಓನರ್, CD ಸಂಚುಕೋರ CDಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್ ಡ್ರೈವ್ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? ಎಫ್​ಐಆರ್​ ಆದ ಮೇಲೆ ಕಾಲ್ಕಿತ್ತ ಪೆನ್ ಡ್ರೈವ್ ಪಿಶಾಚಿಗಳು; ಕೋರ್ಟ್ ಜಾಮೀನು ನಿರಾಕರಿಸಿದ ಮೇಲೆಯೂ ಎಸ್​ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಾ CD ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ?

ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣ ಪಾಸ್​ಪೋರ್ಟ್​ ರದ್ದು ಮಾಡುವವರ್ಯಾರು? ನಿಯಮಗಳೇನು? ಇಲ್ಲಿದೆ ವಿವರ

ಅಸಲಿ ಎಸ್​ಐಟಿ, ಸಿಡಿ ಶಿವು ನೇತೃತ್ವದ ಎಸ್​ಐಟಿ ತಂಟೆಗೇ ಹೋಗುತ್ತಿಲ್ಲ. ವಿಧಾನಸೌಧದ ಗಾಡ್ ಫಾದರ್​​ಗಳ ಕಚೇರಿಗಳಲ್ಲಿಯೇ ಪೆನ್ ಡ್ರೈವ್ ಪಿಶಾಚಿಗಳು ಕಳ್ಳರಂತೆ ಆವಿತಿದ್ದರೂ ಕೂಗಳತೆ ದೂರಲ್ಲಿರುವ ಎಸ್​ಐಟಿಗೆ ಸೊಳ್ಳೆ ಕಚ್ಚಿದ ಹಾಗೆಯೂ ಆಗುತ್ತಿಲ್ಲ. ಅವರು ಎಲ್ಲಿದ್ದಾರೆ? ಇವರು ಎಲ್ಲಿದ್ದಾರೆ? ಎನ್ನುವುದನ್ನು ನಿಮ್ಮ ಸಿಡಿ ಶಿವುಗೇ ಕೇಳ್ರಪ್ಪಾ!! ರಾಜ್ಯದ ಜನ ಶೀಘ್ರದಲ್ಲಿಯೇ ‘CD ಶಿವು ಎಲ್ಲಿದ್ದಿಯಪ್ಪ?’ ಎಂದು ಕೇಳುವ ದಿನವೂ ದೂರವಿಲ್ಲ ಎಂದು ವಾಗ್ದಾಳಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.