ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣ ಆರೋಪ: ಭವಾನಿ ರೇವಣ್ಣ ಕಾರು ಚಾಲಕನಿಗೆ ಮತ್ತೆ ಸಮನ್ಸ್​

ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಪ್ರಕರಣದಿಂದಾಗಿ, ಭವಾನಿಗೂ ಸಂಕಷ್ಟ ತಪ್ಪಿದ್ದಲ್ಲ. ಲೈಂಗಿಕ ಕಿರುಕುಳ, ಕಿಡ್ನ್ಯಾಪ್ ಎರಡೂ ಕೇಸ್​ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಲಾಗಿದೆ. ಹೀಗಾಗಿ ಪತ್ನಿ ಭವಾನಿ ಕಾರು ಚಾಲಕ ಅಜಿತ್​ಗೆ ಎಸ್ಐಟಿ ಪೊಲೀಸರಿಂದ ಸಮನ್ಸ್ ಜಾರಿ ಮಾಡಲಾಗಿದೆ. ಆದರೆ ಕಿಡ್ನ್ಯಾಪ್ ಪ್ರಕರಣ ದಾಖಲಾದ ಬಳಿಕ ಅಜಿತ್ ತಲೆಮರೆಸಿಕೊಂಡಿದ್ದಾರೆ. 

ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣ ಆರೋಪ: ಭವಾನಿ ರೇವಣ್ಣ ಕಾರು ಚಾಲಕನಿಗೆ ಮತ್ತೆ ಸಮನ್ಸ್​
ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣ ಆರೋಪ: ಭವಾನಿ ರೇವಣ್ಣ ಕಾರು ಚಾಲಕನಿಗೆ ಮತ್ತೆ ಸಮನ್ಸ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: May 22, 2024 | 6:31 PM

ಬೆಂಗಳೂರು, ಮೇ 22: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್​​.ಡಿ ರೇವಣ್ಣಗೆ (HD Revanna) ಸದ್ಯ ಜಾಮೀನು ನೀಡಲಾಗಿದೆ. ಆದರೆ ಇದುವರೆಗೂ ಪ್ರಜ್ವಲ್ ರೇವಣ್ಣ ಸುಳಿವೇ ಇಲ್ಲದಾಗಿದೆ. ಇದರ ಮಧ್ಯೆ ರೇವಣ್ಣ ಪತ್ನಿ ಭವಾನಿ (Bhavani Revanna) ಕಾರು ಚಾಲಕ ಅಜಿತ್​ಗೆ ಎಸ್ಐಟಿ ಪೊಲೀಸರಿಂದ ಸಮನ್ಸ್ ಜಾರಿ ಮಾಡಲಾಗಿದೆ. ಸಂತ್ರಸ್ತೆಯನ್ನು ಚಾಲಕ ಅಜಿತ್ ಕಾರಿನಲ್ಲಿ ಕರೆದೊಯ್ದಿದ್ದ ಆರೋಪ ಕೇಳಿಬಂದಿದ್ದು ಹೀಗಾಗಿ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣ ಸಂಬಂಧ ಎಸ್ಐಟಿ ಈಗಾಗಲೇ 2 ಬಾರಿ ಸಮನ್ಸ್​ ನೀಡಲಾಗಿದೆ. ಆದರೆ ಕಿಡ್ನ್ಯಾಪ್ ಪ್ರಕರಣ ದಾಖಲಾದ ಬಳಿಕ ಅಜಿತ್ ತಲೆಮರೆಸಿಕೊಂಡಿದ್ದಾರೆ.

ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಪ್ರಕರಣದಿಂದಾಗಿ, ಭವಾನಿಗೂ ಸಂಕಷ್ಟ ತಪ್ಪಿದ್ದಲ್ಲ. ಲೈಂಗಿಕ ಕಿರುಕುಳ, ಕಿಡ್ನ್ಯಾಪ್ ಎರಡೂ ಕೇಸ್​ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಲಾಗಿದೆ. ಹೀಗಾಗಿ ಭವಾನಿ ಕರೆದರು ಅಂತಾ ಹೇಳಿಯೇ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿರುವ ಆರೋಪ ಮಾಡಲಾಗಿದೆ. ಒಂದು ವೇಳೆ ತನಿಖೆ ವೇಳೆ ಭವಾನಿ ವಿರುದ್ಧ ಸಾಕ್ಷಿ ಸಿಕ್ಕರೆ ಅವರಿಗೂ ಸಂಕಷ್ಟ ತಪ್ಪಿದ್ದಲ್ಲ. ಇದೆಲ್ಲದರ ಮಧ್ಯೆ ಇತ್ತೀಚೆಗೆ ಹೊಳೆನರಸೀಪುರದ ಜೆಡಿಎಸ್ ನಾಯಕರು ಭವಾನಿ ರೇವಣ್ಣರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು.

ಇದನ್ನೂ ಓದಿ: ನನಗೆ ದೇವರ ಆಶೀರ್ವಾದ ಇದೆ, ಜಿಲ್ಲೆಯ ಜನರು ಆತಂಕಪಡುವ ಅವಶ್ಯಕತೆ ಇಲ್ಲ; ಹೆಚ್​ಡಿ ರೇವಣ್ಣ

ಕಿಡ್ನ್ಯಾಪ್‌ ಕೇಸ್, ಲೈಂಗಿಕ ದೌರ್ಜನ್ಯ ಕೇಸ್‌ ದಾಖಲಾಗುತ್ತಿದ್ದಂತೆ ಮಂಕಾಗಿರುವ ಹೆಚ್.ಡಿ. ರೇವಣ್ಣ ಇಷ್ಟು ದಿನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ನಿನ್ನೆ ಹೊಳೆನರಸೀಪುರದತ್ತ ಹೊರಟಿದ್ದ ರೇವಣ್ಣ ದಿಢೀರನೆ ಚನ್ನರಾಯಪಟ್ಟಣದಲ್ಲಿ ಮೈಸೂರಿನ ಕಡೆ ಗಾಡಿ ತಿರುಗಿಸಿದ್ದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿವೇಕಾನಂದ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೇಲ್‌ ಸಿಕ್ಕಿದ್ರೂ ರೇವಣ್ಣಗೆ ಹೊಸ ಸಂಕಷ್ಟ? 

ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಕೇಸ್​ನಲ್ಲಿ ಜಾಮೀನು ಸಿಕ್ಕಿದ್ರೂ ಶಾಸಕ ಹೆಚ್‌ ಡಿ ರೇವಣ್ಣಗೆ ಗಂಡಾಂತರ ತಪ್ಪಿಲ್ಲ. 42ನೇ ACMM ಕೋರ್ಟ್ ನೀಡಿದ ಬೇಲ್‌ ರದ್ದು ಕೋರಿ ಹೈಕೋರ್ಟ್​ಗೆ SIT ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕಿಡ್ನ್ಯಾಪ್‌ಕೇಸ್‌ನಲ್ಲಿ ತನಿಖೆ ಚುರುಕುಗೊಳಿಸಿರುವ SIT, ರೇವಣ್ಣ ವಿರುದ್ಧ ಬಲವಾದ ಸಾಕ್ಷ್ಯ ಕಲೆ ಹಾಕ್ತಿದೆ. ಅಲ್ಲದೇ SIT ಎಸ್​ಪಿಪಿಯಾಗಿ ರವಿವರ್ಮ ಕುಮಾರ್ ನೇಮಕ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು