ಮೋದಿ ಭೇಟಿ ಬಳಿಕ ಬಂಡೀಪುರ ಸಫಾರಿ ಕೇಂದ್ರದ ಚಿತ್ರಣ ಬದಲಾಯಿತಾದರೂ ಪ್ರವಾಸಿಗರಿಗಿನ್ನೂ ನಿರಾಸೆ: ಕಾರಣ ಇಲ್ಲಿದೆ
ದಿನ ಕಳೆದಂತೆ ಬಂಡೀಪುರದ ವರ್ಚಸ್ಸೇ ಬದಲಾಗುತ್ತಿದೆ. ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಸೇರಿದಂತೆ ಹೊರ ರಾಜ್ಯ ಅಷ್ಟೇ ಯಾಕೆ ವಿದೇಶದಿಂದಲೂ ಸಫಾರಿಗೆ ಆಗಮಿಸುತ್ತಿದ್ದಾರೆ. ಆದರೆ ಸಫಾರಿ ಮಾಡಲು ವಾಹನಗಳ ಕೊರತೆ ಕಾಡುತ್ತಿದೆ.
ಚಾಮರಾಜನಗರ, ಜನವರಿ 8: ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಬಳಿಕ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ಕೇಂದ್ರದ (Bandipur Tiger Safari Center) ಚಿತ್ರಣವೇ ಬದಲಾಗಿದೆ. ಸಫಾರಿ ಕೇಂದ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ ಎಂಬ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರಿಗೆ ನಿರಾಸೆಯೂ ಆಗುತ್ತಿದೆ! ರಾಜ್ಯದ ನಂಬರ್ ಓನ್ ಸಫಾರಿ ಕೇಂದ್ರದಲ್ಲಿ ಈಗಿರುವ ಸಫಾರಿ ವಾಹನಗಳು ಸಾಲದೆ ಮತ್ತೆ ಹೆಚ್ಚುವರಿಯಾಗಿ 20 ರಿಂದ 30 ವಾಹನಗಳನ್ನು ಖರೀದಿಸುವ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೆ ಸಫಾರಿಯನ್ನ ಮಾಡಿ ಹೋದ ಬಳಿಕ ಈಗ ಆ ಸಫಾರಿ ಕೇಂದ್ರದ ಚಿತ್ರಣವೇ ಬದಲಾಗಿ ಹೋಗಿದೆ. ಇದೀಗ ಬಂಡೀಪುರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದೆಷ್ಟರ ಮಟ್ಟಿಗೆ ಪ್ರವಾಸಿಗರು ಬರ್ತಾ ಇದ್ದಾರೆ ಅಂದ್ರೆ ಸಫಾರಿಗೆ ವಾಹನಗಳ ಕೊರತೆ ಎದುರಾಗಿದೆ. ಈಗಾಗ್ಲೆ 30 ಕ್ಕೂ ಹೆಚ್ಚು ಸಫಾರಿ ವಾಹನಗಳಿದ್ದು ಈಗ ಇದರ ಜೊತೆ ಮತ್ತೆ 20 ರಿಂದ ಮೂವತ್ತು ಸಫಾರಿ ವಾಹನಗಳನ್ನ ಖರೀದಿ ಮಾಡಲೇ ಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ದಿನ ಕಳೆದಂತೆ ಬಂಡೀಪುರದ ವರ್ಚಸ್ಸೇ ಬದಲಾಗುತ್ತಿದೆ. ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಸೇರಿದಂತೆ ಹೊರ ರಾಜ್ಯ ಅಷ್ಟೇ ಯಾಕೆ ವಿದೇಶದಿಂದಲೂ ಸಫಾರಿಗೆ ಆಗಮಿಸುತ್ತಿದ್ದಾರೆ. ಆದರೆ ಸಫಾರಿ ಮಾಡಲು ವಾಹನಗಳ ಕೊರತೆ ಕಾಡುತ್ತಿದೆ. ವಾಹನಗಳ ಕೊರತೆಯಿಂದ ದಿನನಿತ್ಯ ಅರಣ್ಯ ಇಲಾಖಾ ಸಿಬ್ಬಂದಿ ಜೊತೆ ಪ್ರವಾಸಿಗರು ವಾಗ್ವಾದ ನಡೆಸುವ ಸಂದರ್ಭ ಎದುರಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಂದೋದ ಬಳಿಕ ಬದಲಾಯ್ತು ಬಂಡೀಪುರದ ಚಿತ್ರಣ, ಪ್ರವಾಸಿಗರ ಹೆಚ್ಚಳ, ಆದಾಯ ದ್ವಿಗುಣ
ರಾಜ್ಯದಲ್ಲೇ ಅತಿ ಹೆಚ್ಚು ಹುಲಿ, ಆನೆ ಚಿರತೆ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಕಾರಣ ಬಂಡೀಪುರದ ಚಿತ್ರಣವೇ ಈಗ ಬದಲಾಗಿ ಹೋಗಿದಂತೂ ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ