ನಿಮ್ಮ ಜಾಗ ಏನೂ ಆಗಲ್ಲ, ಭಯ ಬೇಡ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ರಾಜಮಾತೆ ಪ್ರಮೋದಾ ದೇವಿ ಅಭಯ

ಚಾಮರಾಜನಗರ ಜಿಲ್ಲೆಯ ಸಿದ್ದಯ್ಯನಪುರ ಗ್ರಾಮದ ಭೂಮಿ ವಿಚಾರವಾಗಿ ರಾಜಮಾತೆ ಪ್ರಮೋದದೇವಿ ಅವರು ಬರೆದ ಪತ್ರ ಸಾಕಷ್ಟು ಸಂಚಲನ ಮೂಡಿಸಿತ್ತು. ಸಿದ್ದಯ್ಯನಪುರ ಗ್ರಾಮಸ್ಥರು ರಾಜಮಾತೆಯ ಪತ್ರಕ್ಕೆ ಬೆದರಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದರು. ಈ ಬೆನ್ನಲ್ಲೇ ಪ್ರಮೋದದೇವಿ ಪತ್ರಿಕಾಗೋಷ್ಠಿ ನಡೆಸಿ ಅಭಯ ನೀಡಿದ್ದರೇ, ಇದಕ್ಕೆ ಗ್ರಾಮಸ್ಥರು ತಮ್ಮದೆಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಜಾಗ ಏನೂ ಆಗಲ್ಲ, ಭಯ ಬೇಡ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ರಾಜಮಾತೆ ಪ್ರಮೋದಾ ದೇವಿ ಅಭಯ
ರಾಜಮಾತೆ ಪ್ರಮೋದಾದೇವಿ
Updated By: ವಿವೇಕ ಬಿರಾದಾರ

Updated on: Apr 15, 2025 | 5:56 PM

ಚಾಮರಾಜನಗರ, ಮೈಸೂರು, ಏಪ್ರಿಲ್​ 15: ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿ ಖಾತೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದಾದೇವಿ (Rajamatha Pramoda Devi) ಯವರು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಬರೆದಿದ್ದ ಪತ್ರ ಚಾಮರಾಜನಗರ (Chmarajanagar) ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಜನರು ಆತಂಕಗೊಳ್ಳುವಂತೆ ಮಾಡಿತ್ತು. ಇದಕ್ಕೆ, ಸ್ವತಃ ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಸಿದ್ದಯ್ಯಪುರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ 4500 ಎಕರೆ ಜಮೀನನ್ನು ಪರಭಾರೆ ಮಾಡುತ್ತಿದೆ. ಅದರ ಬದಲಿಗೆ ರಾಜಮನೆತನದ ಹೆಸರಿನಲ್ಲೇ ಗ್ರಾಮವಿರಲಿ. ಜನರು ಅದೇ ಗ್ರಾಮದಲ್ಲಿ ವಾಸಿಸಲಿ ಎಂದಿದ್ದಾರೆ.

ರಾಜಮಾತೆ ಪ್ರಮೋದಾದೇವಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದಯ್ಯನಪುರ ಗ್ರಾಮಸ್ಥರು, ನಾವು ತಾತ-ಮುತ್ತಾತ ಕಾಲದಿಂದಲೂ ಇದೇ ಸಿದ್ದಯ್ಯನಪುರ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದೇವೆ. ಕಂದಾಯ ಗ್ರಾಮವಾದರೆ ಸಾಕಷ್ಟು ಅನುಕೂಲವಾಗಲಿದೆ. ನಮ್ಮ ಹೆಸರಿಗೆ ಅಧಿಕೃತವಾಗಿ ಜಮೀನು ಮಂಜೂರಾಗುತ್ತೆ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ
ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಚಾಮರಾಜನಗರದ 4500 ಎಕರೆ ಭೂಮಿ ನಮ್ಮ ಸ್ವತ್ತು, ಪ್ರಮೋದಾದೇವಿ ಪತ್ರ
ಬಂಡೀಪುರ ರಸ್ತೆ ಗದ್ದಲ, ರಾಹುಲ್​ ಗಾಂಧಿ ಲಾಬಿಗೆ ಮಣಿಯಬೇಡಿ: ಲಹರ್‌ ಸಿಂಗ್​

ಇದನ್ನೂ ಓದಿ: ಸಿದ್ದಯ್ಯನಪುರ: ಊರೇ ಖಾಲಿ ಮಾಡಬೇಕಾದ ಭೀತಿಯಲ್ಲಿ ಗ್ರಾಮಸ್ಥರು, ಆಸ್ತಿ ಖಾತೆ ಮಾಡುವಂತೆ ಪ್ರಮೋದಾದೇವಿ ಪತ್ರದ ಬೆನ್ನಲ್ಲೇ ಆತಂಕ

ಇನ್ನು, ರಾಜಮನೆತನದ ಮೇಲೆ ನಮಗೆ ಯಾವುದೇ ರೀತಿಯಾದಂತ ಕೋಪವಿಲ್ಲ. ಆಗ ಅವರ ಮೇಲೆ ಎಷ್ಟು ಅಭಿಮಾನವಿತ್ತೊ ಈಗಲು ಅಷ್ಟೇ ಗೌರವವಿದೆ. ಆದರೆ, ಜಯಚಾಮರಾಜೇಂದ್ರ ಒಡೆಯರ್ ಅವರು ದಾನವಾಗಿ ನೀಡಿದ ಸಿದ್ದಯ್ಯನಪುರ ಗ್ರಾಮವನ್ನು ಮತ್ತೆ ವಾಪಸ್ಸು ಕೇಳಬೇಡಿ ಎಂದು ಮನವಿ ಮಾಡಿದರು. ಕಂದಾಯ ಗ್ರಾಮವಾದರೆ ಮೂಲಭೂತ ಸೌಕರ್ಯ ಸಿಗಲಿದೆ. ಅಧಿಕೃತವಾಗಿ ನಮ್ಮ ಹೆಸರಿಗೆ ಖಾತೆ ಆಗಲಿದೆ ಸಾಲ-ಸೌಲಭ್ಯ ದೊರಕಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯವನ್ನ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ