AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಿತ್ರ ರೋಗಕ್ಕೆ ತುತ್ತಾದ ಮಕ್ಕಳ ಮನೆಗೆ ಆರೋಗ್ಯ ಸಚಿವ ಭೇಟಿ: ಕುಟುಂಬಸ್ಥರಿಗೆ ಧೈರ್ಯ ತುಂಬಿದ ದಿನೇಶ್ ಗುಂಡುರಾವ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಭದ್ರಯ್ಯನಹಳ್ಳಿ,ಕುರಟ್ಟಿ ಹೊಸೂರು ಗ್ರಾಮದಲ್ಲಿ ವಿಚಿತ್ರ ಚರ್ಮ ಕಪ್ಪು ಚುಕ್ಕೆ ರೋಗಕ್ಕೆ ತುತ್ತಾದ ಮಕ್ಕಳನ್ನು ಆರೋಗ್ಯ ಸಚಿವ ದಿನೇಶ್ ಗುಂಡುರಾವ್​​ ಇಂದು ಭೇಟಿ ಮಾಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಇದರಿಂದ ಕುಟುಂಬದವರಿಗೂ ಕೂಡ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

ವಿಚಿತ್ರ ರೋಗಕ್ಕೆ ತುತ್ತಾದ ಮಕ್ಕಳ ಮನೆಗೆ ಆರೋಗ್ಯ ಸಚಿವ ಭೇಟಿ: ಕುಟುಂಬಸ್ಥರಿಗೆ ಧೈರ್ಯ ತುಂಬಿದ ದಿನೇಶ್ ಗುಂಡುರಾವ್
ಕುಟುಂಬಸ್ಥರೊಂದಿಗೆ ಸಚಿವ ದಿನೇಶ್ ಗುಂಡುರಾವ್ ಮಾತು
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 22, 2023 | 4:30 PM

Share

ಚಾಮರಾಜನಗರ, ಸೆಪ್ಟೆಂಬರ್​ 22: ಜಿಲ್ಲೆಯ ಹನೂರು ತಾಲೂಕಿನ ಭದ್ರಯ್ಯನಹಳ್ಳಿ,ಕುರಟ್ಟಿ ಹೊಸೂರು ಗ್ರಾಮದಲ್ಲಿ ವಿಚಿತ್ರ ಚರ್ಮ ಕಪ್ಪು ಚುಕ್ಕೆ ರೋಗಕ್ಕೆ ತುತ್ತಾದ ಮಕ್ಕಳನ್ನು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ (Dinesh Gundu Rao)​​ ಭೇಟಿ ಮಾಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ರೋಗದ ತೀವ್ರತೆ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಈ ರೋಗಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಇದರಿಂದ ಕುಟುಂಬದವರಿಗೂ ಕೂಡ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

ಹನೂರು ತಾಲೂಕಿನ ಎರಡು, ಮೂರು ಗ್ರಾಮದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಮಕ್ಕಳು ಮನೆಯಿಂದ ಬೆಳಕಿಗೆ ಬರುವ ಹಾಗಿಲ್ಲ. ಸೂರ್ಯನ ಕಿರಣಗಳು ಕೂಡ ತಾಗುವ ಹಾಗಿಲ್ಲ. ಮಕ್ಕಳಿಗೆ ವಿಶೇಷ ಕ್ರೀಮ್, ಬಟ್ಟೆ ಕೊಡಲಾಗಿದೆ. ಇದು ಚಾಮರಾಜನಗರ ಅಷ್ಟೇ ಅಲ್ಲ ಮೈಸೂರು, ಹಾಸನದ ಕೆಲವೆಡೆ ಕೂಡ ಪತ್ತೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಮತ್ತೊಂದು ರೋಗ ಪತ್ತೆ: ಒಂದೇ ಕುಟುಂಬದ ನಾಲ್ವರಲ್ಲಿ ಕಾಣಿಸಿಕೊಂಡ ವಿಚಿತ್ರ ರೋಗ

ವಿದೇಶದಲ್ಲೂ ಕೂಡ ಈ ರೋಗಕ್ಕೆ ಔಷಧಿ ಕಂಡು ಹಿಡಿಯುವ ಕೆಲಸ ನಡೆಯುತ್ತಿದೆ. ಇಂತ ಅಪರೂಪದ ಪ್ರಕರಣಗಳಲ್ಲಿರುವ ಕೇಸ್​ಗಳಿಗೆ ಪರಿಹಾರದ ಅವಶ್ಯಕತೆಯಿದೆ. ವಿಶೇಷ ಚೇತನ ಮಕ್ಕಳಿಗೆ ಕೊಡುವ ರೀತಿಯಲ್ಲಿ ಪೆನ್ಷನ್ ಕೊಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಸರ್ಕಾರ, ಇಲಾಖೆಯಿಂದ ಏನೂ ಕೊಡಬಹುದೆಂದು ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ವರ್ಕೌಟ್ ಆಗಲ್ಲ

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇದು ವರ್ಕೌಟ್ ಆಗಲ್ಲ. ಕಳೆದ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ನಾವು ಅನುಭವಿಸಿದ್ದೇವೆ. ಈ ಬಾರಿ ಬಿಜೆಪಿಯವರು ಮೈತ್ರಿ ಮಾಡಿ ಕೊಳ್ಳುತ್ತಿದ್ದಾರೆ ಇದು ನಮಗೆ ಅನುಕೂಲ ಎಂದು ಹೇಳಿದ್ದಾರೆ.

ಸುಪ್ರೀಂ ತೀರ್ಪು ಖಂಡಿಸಿ ನಾಳೆ ಮಂಡ್ಯ ಬಂದ್​ಗೆ ಕರೆ ಹಿನ್ನೆಲೆ ಇಂದು ಸಂಜೆ ಕ್ಯಾಬಿನೆಟ್ ಸಭೆ ಇದೆ. ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಧ್ಯೆ ಇಂದು ದೇವೇಗೌಡ ಸುದ್ದಿಗೋಷ್ಠಿ, ಕುತೂಹಲ ಕೆರಳಿಸಿದ ದಳಪತಿಗಳ ನಡೆ

ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಸುಗ್ರೀವಾಜ್ಞೆ ತಂದ ವಿಚಾರವಾಗಿ ಮಾತನಾಡಿದ ಅವರು, ಈಗ ಅದೆಲ್ಲಾ ನಡೆಯುವುದಿಲ್ಲ. ಸರ್ವ ಪಕ್ಷ ಸಭೆ ಕೂಡ ಇದೆ. ರೈತರ ಪರ ಏನು ನಿಲುವು ತರಬೇಕು ತರುತ್ತೇವೆ. ನಮಗೆ ನೀರಿನ ಸಮಸ್ಯೆ ಇರುವ ಕುರಿತು ಸುಪ್ರೀಂ ಕೋರ್ಟ್​​ಗೆ ಕಾವೇರಿ ಪ್ರಾಧಿಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಸಿಸಿಬಿ ಅಧಿಕಾರಿಗಳ ಮುಂದೆ ಚೈತ್ರಾ ಕುಂದಾಪುರ ತಪ್ಪೊಪ್ಪಿಗೆ ಈ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಯಾರೆಲ್ಲಾ ಇದ್ದಾರೆಂಬುದು ಬೆಳಕಿಗೆ ಬರಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:28 pm, Fri, 22 September 23