AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ವಾಡಿ ವಿಷ ಪ್ರಸಾದ ಕೇಸ್​ನ ಎ1 ಆರೋಪಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧ

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಇಡೀ ರಾಜವನ್ನೇ ಬೆಚ್ಚಿಬೀಳಿಸಿತ್ತು. ಈ ದುರಂತದಲ್ಲಿ ಬರೋಬ್ಬರಿ 17 ಜನರು ಸಾವನ್ನಪ್ಪಿದ್ದರು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹನೂರು ತಹಶೀಲ್ದಾರ್​​ ಆದೇಶ ಹೊರಡಿಸಿದ್ದಾರೆ.

ಸುಳ್ವಾಡಿ ವಿಷ ಪ್ರಸಾದ ಕೇಸ್​ನ ಎ1 ಆರೋಪಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧ
ಇಮ್ಮಡಿ ಮಹದೇವಸ್ವಾಮಿ
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Jan 29, 2026 | 3:33 PM

Share

ಚಾಮರಾಜನಗರ, ಜನವರಿ 29: 2018ರಲ್ಲಿ ನಡೆದಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ (sulvadi Poison Case) ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ (immadi mahadevaswamy) ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಹನೂರು ತಹಶೀಲ್ದಾರ್​ ಚೈತ್ರಾ ಗುರುವಾರ ಆದೇಶ ಹೊರಡಿಸಿದ್ದಾರೆ. ಆರೋಪಿ ವಿರುದ್ಧ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸದ್ಯ ಪೊಲೀಸರು ಇಮ್ಮಡಿ ಮಹದೇವಸ್ವಾಮಿಯನ್ನ ಬೆಂಗಳೂರಿಗೆ ವಾಪಸ್​ ಕಳಿಸಿದ್ದಾರೆ.

ಘಟನೆ ಹಿನ್ನೆಲೆ 

2018ರಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದ ಆಯೋಜಿಸಲಾಗಿತ್ತು. ಈ ವೇಳೆ ದೇವಾಲಯದ ವಿಷ ಪ್ರಸಾದ ಸೇವನೆಯಿಂದ ಬರೋಬ್ಬರಿ 17 ಜನರು ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

ಇದನ್ನೂ ಓದಿ: ಸುಳ್ವಾಡಿ ದುರಂತದಲ್ಲಿ ಬದುಕಿದವರಿಗೆ ನರಕಯಾತನೆ: 6 ವರ್ಷ ಕಳೆದರೂ ಕಾಡುತ್ತಿದೆ ಅನಾರೋಗ್ಯ

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಡಿಎಸ್​ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಮೂರು ತಂಡಗಳನ್ನ ರಚನೆ ಮಾಡಲಾಗಿತ್ತು. ವಿಷಪ್ರಾಶನ ಮಾಡಿದ್ದ ರಾಜಮ್ಮ ಅವರ ಹೇಳಿಯ ಆಧಾರದ ಮೇಲೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿತ್ತು. ಒಟ್ಟು 6 ಜನರ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು. ದೇವಾಲಯದ ಟ್ರಸ್ಟಿಗಳಾದ ಚಿನ್ನಪ್ಪಿ,  ಮಹದೇವ್ ಅಲಿಯಾಸ್ ಮಾದೇಶ್ ಮತ್ತು ಇಮ್ಮಡಿ ಮಹಾದೇವಸ್ವಾಮಿ ಎಂಬುವರನ್ನ ಪೊಲೀಸರು ಬಂಧಿಸಿದ್ದರು.

ಸದ್ಯ ಇಮ್ಮಡಿ ಮಹಾದೇವಸ್ವಾಮಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹೀಗಾಗಿ ಹನೂರು ತಾಲೂಕಿ ಮಹದೇಶ್ವರಬೆಟ್ಟ ಗ್ರಾಮದ ಶ್ರೀ ಸಾಲೂರು ಬೃಹನ್ಮಠದ ಈ ಹಿಂದಿನ ಗುರುಗಳಾದ ಲಿಂಗೈಕ್ಯ ಶ್ರೀ ಮಹದೇವಸ್ವಾಮಿಗಳ ವಾರ್ಷಿಕ ಆರಾಧನೆ ಕಾರ್ಯಕ್ರಮವನ್ನು ಇಂದು ಸಾಲೂರು ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಮ್ಮಡಿ ಮಹಾದೇವಸ್ವಾಮಿ ಮುಂದಾಗಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.

ಇಮ್ಮಡಿ ಮಹಾದೇವಸ್ವಾಮಿಯನ್ನ ಮಠದ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು, ಒಂದು ವೇಳೆ ಪ್ರವೇಶ ಮಾಡಿದ್ದಲ್ಲಿ ಗಲಭೆ ಉಂಟಾಗುವುದು, ಇದರಿಂದ ಭಕ್ತಾಧಿಗಳಿಗೆ ಪ್ರಾಣಾಪಾಯ, ಮಠದ ಆಸ್ತಿಗಳಿಗೆ ಹಾನಿಯಾಗುವ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಸಂಭವವಿದ್ದು ಇದನ್ನು ತಪ್ಪಿಸುವಂತೆ ಸುಳ್ಳಾಡಿ ಪ್ರಕರಣದ ಸಂತ್ರಸ್ತರು, ಸ್ಥಳೀಯರು ಹಾಗೂ ಶ್ರೀ ಮಠದ ಭಕ್ತಾಧಿಗಳು ತಹಶೀಲ್ದಾರ್​​​ಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ವಿಶೇಷಚೇತನ ಮಗನಿಗೇ ವಿಷ ಹಾಕಿದ ತಂದೆ; ಕಾರಣ ಕೇಳಿದರೆ ಶಾಕ್ ಆಗ್ತೀರಾ!

ಹೀಗಾಗಿ ಇಮ್ಮಡಿ ಮಹದೇವಸ್ವಾಮಿಯನ್ನ ಶ್ರೀ ಮಠದ ಆವರಣದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿ ಶ್ರೀ ಮಠದ ಗುರುಗಳ ಭಕ್ತ ವೃಂದದ ಜೀವರಕ್ಷಣೆ, ಆಸ್ತಿರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕ್ರಮಜರುಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:29 pm, Thu, 29 January 26