ಚಾಮರಾಜನಗರದ ಹುರುಳಿನಂಜನಪುರಕ್ಕೆ ನಟೋರಿಯಸ್ ಗ್ಯಾಂಗ್ ಎಂಟ್ರಿ: ಮನೆ ಹೆಂಚು ಪುಡಿಪುಡಿ, ಶಾಲೆಯ ಛಾವಣಿಯೂ ಧ್ವಂಸ

ಚಾಮರಾಜನಗರದ ಹುರುಳಿನಂಜನಪುರ ಗ್ರಾಮದಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಮಂಗಗಳ ಗುಂಪು ಮನೆ, ಶಾಲೆಗಳಿಗೆ ದಾಳಿ ಮಾಡಿ, ಆಹಾರ ಕದ್ದು, ವಸ್ತುಗಳನ್ನು ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಭೀತರಾಗಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಮಂಗಗಳ ಕಾಟಕ್ಕೆ ಮುಕ್ತಿ ನೀಡುವಂತೆ ಜನರು ಒತ್ತಾಯಿಸಿದ್ದಾರೆ.

ಚಾಮರಾಜನಗರದ ಹುರುಳಿನಂಜನಪುರಕ್ಕೆ ನಟೋರಿಯಸ್ ಗ್ಯಾಂಗ್ ಎಂಟ್ರಿ: ಮನೆ ಹೆಂಚು ಪುಡಿಪುಡಿ, ಶಾಲೆಯ ಛಾವಣಿಯೂ ಧ್ವಂಸ
ಗ್ರಾಮಕ್ಕೆ ಮಂಗಗಳ ಹಿಂಡು ಎಂಟ್ರಿ
Image Credit source: Tv9 kannada
Edited By:

Updated on: Nov 29, 2026 | 9:14 PM

ಚಾಮರಾಜನಗರ, ನ.29: ಆ ಗ್ರಾಮಕ್ಕೆ ಒಂದು ನಟೋರಿಯಸ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಈ ಗ್ಯಾಂಗ್ ಹಾಡಹಗಲೇ ನಡೆಸುತ್ತಿರುವ ರಾಬರಿಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮನೆಯಿಂದ ಆಚೆ ಬರಲು ಗೃಹಿಣಿಯರು ಭಯಪಡುತ್ತಿದ್ದರೆ, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ. ಅಸಲಿಗೆ ಗ್ರಾಮಸ್ಥರ ನಿದ್ದೆಗೆಡಿಸಿರುವ ಆ ಗ್ಯಾಂಗ್ ಬೇರಾರೂ ಅಲ್ಲ, ಆಹಾರ ಅರಸಿ ಗ್ರಾಮಕ್ಕೆ ಲಗ್ಗೆ ಇಟ್ಟಿರುವ ಮಂಗಗಳ ಹಿಂಡು! ಚಾಮರಾಜನಗರ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಮನೆಗಳಷ್ಟೇ ಅಲ್ಲದೆ ಗ್ರಾಮದ ಶಾಲೆಯ ಮೇಲೂ ಮಂಗಗಳು ಮುಗಿಬಿದ್ದು ಛಾವಣಿಯನ್ನು ಒಡೆದು ಹಾಕಿವೆ. ಹಾಡಹಗಲೇ ಗುಂಪು ಗುಂಪಾಗಿ ದಾಳಿ ಮಾಡುವ ಕೋತಿಗಳಿಂದ ಭಯಭೀತರಾಗಿರುವ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದ ಹಲವು ಬಡಾವಣೆಗಳಿಗೆ ನುಗ್ಗುತ್ತಿರುವ ಕೋತಿಗಳು ಮನೆಗಳ ಮೇಲೆ, ಅಂಗಡಿಗಳ ಮುಂದೆ ಎಲ್ಲೆಂದರಲ್ಲಿ ಬೀಡುಬಿಟ್ಟಿವೆ. ಮನೆಗಳ ಹೆಂಚುಗಳನ್ನು ಒಡೆಯುವುದಲ್ಲದೆ, ಕಿಟಕಿ ಹಾಗೂ ಬಾಗಿಲುಗಳ ಮೂಲಕ ಒಳನುಗ್ಗಿ ಆಹಾರ ಪದಾರ್ಥ, ತರಕಾರಿ ಹಾಗೂ ಹಣ್ಣುಗಳನ್ನು ಹೊತ್ತೊಯ್ಯುತ್ತಿವೆ. ಕೈಗೆ ಸಿಕ್ಕ ವಸ್ತುಗಳನ್ನು ಪೀಸ್ ಪೀಸ್ ಮಾಡುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.

Loading...

ಇದನ್ನೂ ಓದಿ: ಎಲ್ಲಿತ್ತು ಸನಾತನ ಧರ್ಮ? 2029ಕ್ಕೆ ರಾಹುಲ್ ಗಾಂಧಿಯವರೇ ಪ್ರಧಾನಿಯಾಗುತ್ತಾರೆ, ಬರೆದಿಟ್ಟುಕೊಳ್ಳಿ ಎಂದ ಸಚಿವ ವಿಜಯಾನಂದ ಕಾಶಪ್ಪನವರ್

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಹುರುಳಿನಂಜನಪುರ ಗ್ರಾಮ ಒಳಪಡಲಿದೆ. ಕೋತಿಗಳ ಹಾವಳಿಯಿಂದ ಭಯಭೀತರಾಗಿ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು, ಮಂಗಗಳನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥ ನಾಗರಾಜ್ ಸೇರಿದಂತೆ ಸ್ಥಳೀಯರು ದೂರಿದ್ದಾರೆ. ಕೋತಿಗಳೊಂದಿಗೆ ನಿತ್ಯ ಹೋರಾಟ ನಡೆಸುತ್ತಾ ಬದುಕುವುದೇ ದೊಡ್ಡ ಸವಾಲಾಗಿದ್ದು, ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತು ಮಂಗಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us