Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ

ಕಳೆದ ಎರಡು ವರ್ಷಗಳಿಂದ ರೈತರ ಪಾಲಿಗೆ ಬಿಟ್ಟು ಬಿಡದೆ ಕಾಡುತ್ತಿದ್ದ ಪುಂಡಾನೆ ಇದೀಗ ಅರಣ್ಯಾಧಿಕಾರಿಗಳ ಖೆಡ್ಡಾಗೆ ಬಿದ್ದಿದೆ. ಮೂರು ರಾಜ್ಯಗಳಿಗೆ ಬೇಕಾಗಿದ್ದ ಒಂಟಿ ಸಲಗವನ್ನ ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ.

Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ
ಚಾಮರಾಜನಗರದಲ್ಲಿ ಕೊನೆಗೂ ಸೆರೆ ಸಿಕ್ಕ ಕಾಡಾನೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Jul 22, 2023 | 11:43 AM

ಚಾಮರಾಜನಗರ, ಜು.22: ಕಳೆದ ಎರಡು ವರ್ಷಗಳಿಂದ ರೈತರ ಪಾಲಿಗೆ ಬಿಟ್ಟು ಬಿಡದೆ ಕಾಡುತ್ತಿದ್ದ ಪುಂಡಾನೆ ಇದೀಗ ಅರಣ್ಯಾಧಿಕಾರಿಗಳ ಖೆಡ್ಡಾಗೆ ಬಿದ್ದಿದೆ. ಹೌದು ಈ ಕಾಡಾನೆ(Elephant)ಯನ್ನ ಬಂದಿಸಿದ್ದೆ ಬಲು ರೋಚಕವಾಗಿದೆ. ಕಳೆದ 2 ವರ್ಷಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯದ ರೈತರಿಗೆ ತಲೆ ನೋವಾಗಿದ್ದ ಈ ಒಂಟಿ ಸಲಗ, ಅಕ್ಕಿ ದಾಸ್ತಾನು ಗೋಧಾಮುಗಳಿಗೆ ನುಗ್ಗಿ ರೈತರು ಬೆಳೆದ ಅಕ್ಕಿ ತರಕಾರಿಗಳನ್ನ ತಿಂದು ತೇಗುತ್ತಿತ್ತು. ಈ ಹಿನ್ನಲೆ ಮೂರು ರಾಜ್ಯಗಳ ಅರಣ್ಯಾಧಿಕಾರಿಗಳು ಎಷ್ಟೇ ತಡಕಾಡಿದ್ರು, ಕೈಗೆ ಸಿಗದೆ ಎಸ್ಕೇಪ್ ಆಗುತ್ತಿತ್ತು. ಕಳೆದ ಒಂದು ತಿಂಗಳ ಹಿಂದೆ ಈ ಪುಂಡಾನೆಯನ್ನ ಬಂಡಿಪುರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು

ಇನ್ನು ಕೂಂಬಿಂಗ್ ಕಿಂಗ್ ಜೆಪಿ ನೇತೃತ್ವದಲ್ಲಿ ಸತತ 6 ತಾಸುಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಸತತ ಮೂರು ಅರವಳಿಕೆ ಮದ್ದು ನೀಡಿ ಪುಂಡಾನೆಯನ್ನ ಸೆರೆ ಹಿಡಿಯಲಾಯಿತು. ಅದಕ್ಕೂ ಮುಂಚೆ ಈ ಒಂಟಿ ಸಲಗ ಕೂಂಬಿಂಗ್​ಗೆ ಕರೆದೊಯ್ಯಲಾಗಿದ್ದ ಆನೆಗಳ ಮೇಲೆ ರಿವರ್ಸ್ ಅಟ್ಯಾಕ್ ಮಾಡಿತ್ತು. ಈ ವೇಳೆ ಆನೆಯ ದಂತ ಮುರಿದು ಹೋಗಿ, ಬಳಿಕ ಎರಡು ಬಾರಿ ಅರವಳಿಕೆ ಮದ್ದು ನೀಡಲಾಯಿತು. ಆದರೂ, ಬಗ್ಗದ ಈ ಆನೆ ಮತ್ತೆ ದಾಳಿ ನಡೆಸಿತು.

ಇದನ್ನೂ ಓದಿ:Viral Video: ಕಾಡಾನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆಯಲು ಹೋದ ಯುವಕರು, ಮುಂದೇನಾಯಿತು?; ವಿಡಿಯೋ ವೈರಲ್​​

ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಅರವಳಿಕೆ ಮದ್ದು ನೀಡಿದ ವೈದ್ಯರು

ಇನ್ನು ಈ ಒಂಟಿ ಸಲಗವನ್ನ ಸೆರೆ ಹಿಡಿಯಲು, ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಬಳಿಕ ವೈದ್ಯರು ಅರವಳಿಕೆ ಮದ್ದು ನೀಡಿದರು. ಸದ್ಯ ರಾಮಪುರ ಆನೆ ಬಿಡಾರದ ಬೃಹತ್ ಮರದ ದಿಂಬೆಯ ಖೆಡ್ಡಾದಲ್ಲಿ ಇತನನ್ನ ಬಂಧಿಸಲಾಗಿದೆ. ಈಗಲೂ ಕೂಡ ಈ ಪುಂಡಾನೆ ಬಂಧನದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದೆ. ಊಟ ನೀಡಲು ತೆರಳುವ ಕಾವಾಡಿ ಮಾವುತರ ಮೇಲೆ ಎಗರಿ ಬೀಳುತ್ತಿದೆ.

ಒಂಟಿ ಸಲಗಕ್ಕೆ ಟ್ರೈನಿಂಗ್ ನೀಡುತ್ತಿರುವ ಅರಣ್ಯಾಧಿಕಾರಿಗಳು

ನಿಧಾನವಾಗಿ ಸೆರೆಯಾದ ಈ ಒಂಟಿ ಸಲಗಕ್ಕೆ ಅರಣ್ಯಾಧಿಕಾರಿಗಳು ಟ್ರೈನಿಂಗ್ ನೀಡುತ್ತಿದ್ದಾರೆ. ಇನ್ನು 90 ದಿನಗಳ ಕಾಲ ಟ್ರೈ ಜಂಕ್ಷನ್ ಕಿಂಗ್​ ಎಂದೇ ಕರೆಯುವ ಈ ಆನೆಗೆ ಸೆರೆವಾಸದಲ್ಲಿಡಲಾಗಿದೆ. ಅಲ್ಲಿಯೇ ಇದಕ್ಕೆ ಅರಣ್ಯಾಧಿಕಾರಿಗಳು ತರಭೇತಿ ನೀಡಲಿದ್ದಾರೆ. ಇನ್ನು ಈ ಸಲಗಕ್ಕೆ ನಿಖರ ತರಭೇತಿ ನೀಡಿದ್ರೆ, ಅಭಿಮನ್ಯು ರೀತಿ ದಸರಾ ಜಂಬೂ ಸವಾರಿಗೆ ಸನ್ನದನಾಗಲಿದ್ದಾನೆ. ಹೌದು ಬೃಹತ್ ಸದೃಡ ದೇಹ ಅಜಾನು ಬಾಹುವಾಗಿರುವ ಈ ಸಲಗ ನೋಡುವುದಕ್ಕೆ ಬಲು ಸುಂದರವಾಗಿದೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರದ ರಾಮಪುರ ಆನೆ ಬಿಡಾರದಲ್ಲಿ ತರಭೇತಿ ಕಾರ್ಯ ನಡೆಯುತ್ತಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:42 am, Sat, 22 July 23

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us