ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್

ಗಡಿ ನಾಡು ಚಾಮರಾಜನಗರ ತಮಿಳುನಾಡು ಹಾಗೂ ಕರ್ನಾಟಕದ ಗಡಿಯನ್ನ ಹಂಚಿ ಕೊಂಡಿದೆ. ಆದ್ರೆ, ಈ ಕೇರಳ ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆಯಲ್ಲಂತೂ ದರೋಡೆಕೋರರ ಹಾವಳಿ ಮಿತಿ ಮೀರಿದೆ.ಚಿನ್ನದ ಉದ್ಯಮಿಗಳನ್ನೆ ಟಾರ್ಗೆಟ್ ಸಲಿಗೆ ಮಾಡುತ್ತಿದ್ದು, ಇದು ಪೊಲೀಸರಿಗೆ ದೊಡ್ಡ ತಲೆವನೋವಾಗಿದೆ. ಹೀಗಾಗಿ ಕೇರಳದ ಮಲ್ಲು ಗ್ಯಾಂಗ್ ನ ಹಾವಳಿಗೆ ಬ್ರೇಕ್ ಹಾಕಲು ಪೊಲೀಸರು, ಹೊಸ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಹದ್ದಿನ ಕಣ್ಣಿಟ್ಟಿದ್ದಾರೆ.

ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್
ಪೊಲೀಸ್ರು ಚಾಹನ ತಪಾಸೆ ಮಾಡುತ್ತಿರುವುದು
Edited By:

Updated on: Feb 01, 2026 | 8:12 PM

ಚಾಮರಾಜನಗರ, (ಫೆಬ್ರವರಿ 01): ಕರ್ನಾಟಕ (Karnataka) ಕೇರಳ  (Kerala) ಗಡಿಯಲ್ಲಿ ನಟೋರಿಯಸ್ ಕೇರಳದ ಮಲ್ಲು ಗ್ಯಾಂಗ್ ಉಪಟಳ ಹೆಚ್ಚಾಗಿದೆ. ಈ ದರೋಡೆಕೋರರ ಗ್ಯಾಂಗ್​​​ಗೆ ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿದ್ದು, ಗುಂಡ್ಲುಪೇಟೆ (Gundlupet) ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತದೆ. ಕಳೆದ ಎರೆಡು ತಿಂಗಳ ಹಿಂದಷ್ಟೆ ಒಂದು ಕಾಲು ಕೆಜಿ ಚಿನ್ನ ಊಟಿ ಮಾಡಿ ಗಾಯಬ್ ಆಗಿದ್ದ ಆರೋಪಿಗಳ ಪೈಕಿ ಈಗಾಗ್ಲೆ ಪೊಲೀಸರು 3 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಪ್ರಕರಣದ ಕಿಂಗ್ ಪಿನ್ ಗಾಗಿ ಶೋಧಕಾರ್ಯ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಚಿನ್ನದ ಉದ್ಯಮಿಯ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ಉದ್ಯಮಿಗಳಾದ ಜಮ್ಸಿದ್ ಹಾಗೂ ಫೈಸಲ್ ನ ಅಡ್ಡಗಟ್ಟಿ 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿದೆ. ಹೀಗಾಗಿ ಕೇರಳದ ಮಲ್ಲು ಗ್ಯಾಂಗ್ ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ.

ಇನ್ನು ಈ ಫೈಸಲ್ ಮತ್ತು ಜಮ್ಸಿದ್ ಇಬ್ಬರೂ ಕೇರಳದಿಂದ ಬಂದು ತಮ್ಮ ಚಿನ್ನವನ್ನ ಮಾರಾಟ ಮಾಡಿ 10 ಲಕ್ಷ ನಗದನ್ನ ತೆಗೆದು ಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕೇರಳ ಗಡಿ ಮಧ್ಯೆ ಬರುವ ಕಾಡಿನಲ್ಲಿ ಇನ್ನೋವಾ ಕಾರಿನಲ್ಲಿ ಬಂದು ಚಿನ್ನದ ಉದ್ಯಮಿಗಳನ್ನ ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ 10 ಲಕ್ಷ ದರೋಡೆ ಮಾಡಿ ಪರಾರಿಯಾಗಿದೆ. ದರೋಡೆ ಮಾಡಿದ ಸ್ಥಳದಲ್ಲಿ ನೆಟ್ವರ್ಕ್ ಸಿಗಲ್ಲ. ಯಾವ ಮೊಬೈಲ್ ನ ಸಿಮ್ ಕೂಡ ವರ್ಕ್ ಆಗಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ: ಮಾದಪ್ಪನ ಭಕ್ತರಿಗೆ ಮಹತ್ವದ ಸೂಚನೆ: ಮಲೆ ಮಹದೇಶ್ವರನ ದರ್ಶನಕ್ಕೆ ಹೊಸ ರೂಲ್ಸ್

ಇನ್ನು ಘಟನೆ ನಡೆದಿದ್ದು ಜನವರಿ 10ರರಂದು. ಆದ್ರೆ ದೂರುದಾರರು ಜನವರಿ 27ಕ್ಕೆ ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಕೈಗೆತ್ತಿಕೊಂಡ ಖಾಕಿ, ದರೋಡೆ ಗ್ಯಾಂಗ್ ಬಂಧನಕ್ಕಾಗಿ ಈಗ ಮದ್ದೂರು ಚೆಕ್ ಪೋಸ್ಟ್ ಟೋಲ್ ಗೇಟ್ ಜೊತೆ ಈಗ ಮತ್ತೊಂದು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದಾರೆ. ಕೇರಳದಿಂದ ಕರ್ನಾಟಕ, ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೇರಳದ ಮಲ್ಲು ಗ್ಯಾಂಗ್ ಬಾಲ ಬಿಚ್ಚದಂತೆ ಅಲರ್ಟ್ ಆಗಿದ್ದಾರೆ.

ಇನ್ನು ದೂರು ದಾರರ ಮೇಲೆಯು ಪೊಲೀಸರಿಗೆ ಸಂಶಯವಿದೆ. ಘಟನೆ ನಡೆದಿದ್ದು ಜನವರಿ 10ರಂದು. ಆದ್ರೆ ಬಂದು ದೂರು ನೀಡಿದ್ದು ಜನವರಿ 27ರಂದು. ಘಟನೆ ನಡೆದು 7 ದಿನ ಬಳಿಕ ತಡವಾಗಿ ಏಕೆ ದೂರು ನೀಡಿದ್ದಾರೆ? ಇನ್ನು ದರೋಡೆ ಮಾಡಿದ ಆರೋಪಿಗಳು ಕೂಡ ದೂರದಾರರ ಪರಿಚಯಸ್ಥರು ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us