ಚಾಮರಾಜನಗರದಲ್ಲಿ ಸ್ಮಶಾನ ಸಮಸ್ಯೆಯಿಂದ ಅಂತ್ಯಕ್ರಿಯೆಗೆ ತೊಂದರೆ ಹಿನ್ನೆಲೆ ಕುಟುಂಬದವರ ಮನವಿಗೆ ಸ್ಪಂದಿಸಿ ಅಂತ್ಯಕ್ರಿಯೆಗೆ ಅವಕಾಶ ನೀಡುವ ಮೂಲಕ ಜಮೀನಿನ ಮಾಲೀಕ ಹರೀಶ್ ಮಾನವೀಯತೆ ಮೆರೆದಿದ್ದಾರೆ. ಬೆಳೆದಿದ್ದ ಜೋಳದ ಫಸಲು ಕಿತ್ತು ಹಾಕಿ ಅಂತ್ಯಕ್ರಿಯೆಗೆ ಜಾಗ ಮಾಡಿಕೊಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಿ.ಎಸ್.ದೊಡ್ಡಿಯಲ್ಲಿ ಗ್ರಾಮದ ರಾಚಶೆಟ್ಟಿ(75) ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರ ಅಂತ್ಯಕ್ರಿಯೆಗೆ ಸ್ಮಶಾನವೇ ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಕೊನೆಗೆ ಜಮೀನು ಮಾಲೀಕನನ್ನು ಗೋಗರೆದು ರಾಚಶೆಟ್ಟಿ ಕುಟುಂಬ ಕಣ್ಣಿರು ಹಾಕಿದೆ. ಕೊನೆಗೆ ತಮ್ಮ ಜಮೀನಿನಲ್ಲೆ ಅಂತ್ಯಕ್ರಿಯೆ ಮಾಡಲು ಹರೀಶ್ ಒಪ್ಪಿಗೆ ನೀಡಿದ್ದು ಜಾಗ ಮಾಡಿಕೊಟ್ಟಿದ್ದಾರೆ.
ಈ ಗ್ರಾಮದಲ್ಲಿ 400 ಕುಟುಂಬಗಳಿದ್ದರೂ ಸ್ಮಶಾನವೇ ಇಲ್ಲ. ಸ್ಥಳೀಯ ಶಾಸಕರಿಗೆ, ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜವಾಗಿಲ್ಲವೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇನ್ನು ಸರ್ಕಾರಿ ಭೂಮಿ ಇದ್ದರೂ ಜಿಲ್ಲಾಡಳಿತ ಮಂಜೂರು ಮಾಡಿಲ್ಲ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಹೂಳಲು ಅಥವಾ ದಹನ ಮಾಡಲು ಜಾಗವೇ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ತಮಿಳುನಾಡು: ರೈಲಿನಲ್ಲಿ ಮಚ್ಚುಗಳಿಂದ ಹುಚ್ಚಾಟ ಪ್ರದರ್ಶಿಸಿದ ಥ್ರೀ ಈಡಿಯಟ್ಗಳಿಗೆ ಈಗ ಪೊಲೀಸರ ಆತಿಥ್ಯ!
ಬಸ್ ನಲ್ಲಿ ಸಿಕ್ಕ ಒಡವೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದ ಕಂಡಕ್ಟರ್
ತುಮಕೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಚಿನ್ನಾಭರಣ ತುಂಬಿದ್ದ ಬ್ಯಾಗನ್ನ ಮೆರೆತಿದ್ದ ಮಹಿಳೆಗೆ ಹಿಂತಿರುಗಿಸುವ ಮೂಲಕ ಕಂಡೆಕ್ಟರ್ ಮಾನವೀಯತೆ ಮೆರೆದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿಯಿಂದ ಬೆಂಗಳೂರಿಗೆ ಹೋಗುವಾಗ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಮಹಿಳೆಯೊಬ್ಬರು ಬಸ್ ನಲ್ಲಿ ಚಿನ್ನಾಭರಣ ಬ್ಯಾಗನ್ನು ಮರೆತು ಹೋಗಿದ್ದಾರೆ. ಇದನ್ನ ಗಮನಿಸಿದ ಬಸ್ ಕಂಡಕ್ಟರ್ ಶ್ರೀಧರ್ ಎಂಬಾತ ಮಹಿಳೆಗೆ ಬ್ಯಾಗ್ ಹಸ್ತಾಂತರ ಮಾಡಿದ್ದಾರೆ.
ಬ್ಯಾಗ್ನಲ್ಲಿ ಒಂದು ಜೊತೆ ಕಿವಿಯೋಲೆ, ಕಾಲ್ಗೆಜ್ಜೆ ಇದ್ದವು. ಸದ್ಯ ಶ್ರೀಧರ್ ಬೆಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗನ್ನು ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಡವೆ ಇದ್ದ ಕಾರಣ ಮಹಿಳೆ ಬ್ಯಾಗ್ ಕಳೆದುಕೊಂಡು ಕಂಗಾಲಾಗಿದ್ದರು. ಕೂಡಲೇ ಬಸ್ ನವರನ್ನ ಸಂಪರ್ಕಮಾಡಿ ಒಡವೆ ಬ್ಯಾಗ್ ನ್ನ ಪಡೆದುಕೊಂಡು ಧನ್ಯವಾದ ಹೇಳಿದ್ದಾರೆ. ಅತ್ತ ಕೆಎಸ್ ಆರ್ ಟಿಸಿ ಅಧಿಕಾರಿಗಳು ಕಂಡಕ್ಟರ್ ನ ಪ್ರಾಮಾಣಿಕತೆಗೆ ಶಹಬಾಸ್ ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ