AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಬ್ರೇಕ್: ಅರಣ್ಯ ಇಲಾಖೆಯ ಮೆಗಾ ಪ್ಲ್ಯಾನ್ ಏನು ಗೊತ್ತಾ?

Chamarajanagar Wildlife Conflict: ಚಾಮರಾಜನಗರದಲ್ಲಿ ಹೆಚ್ಚಿರುವ ಮಾನವ ಮತ್ತು ಆನೆ ಸಂಘರ್ಷಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಕಾಡಾನೆಗಳಿಂದ ಬೆಳೆ ಹಾನಿ ಮತ್ತು ಪ್ರಾಣಾಪಾಯ ತಪ್ಪಿಸಲು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮುಂದಾಗಿದೆ. ಸದ್ಯ ಈ ವಿಚಾರ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಬ್ರೇಕ್: ಅರಣ್ಯ ಇಲಾಖೆಯ ಮೆಗಾ ಪ್ಲ್ಯಾನ್ ಏನು ಗೊತ್ತಾ?
ರೈಲ್ವೆ ಬ್ಯಾರಿಕೇಡ್Image Credit source: tv9 kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Jul 25, 2026 | 6:32 PM

Share

ಮುಖ್ಯಾಂಶಗಳು

  • ಕಾಡಾನೆಗಳಿಗೆ ರೈಲ್ವೆ ಬ್ಯಾರಿಕೇಡ್ ಚೆಕ್‌ಮೇಟ್ ನೀಡಿದ ಅರಣ್ಯ ಇಲಾಖೆ
  • ಚಾಮರಾಜನಗರದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಮಾಸ್ಟರ್​ ಪ್ಲ್ಯಾನ್​
  • ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ಚಾಮರಾಜನಗರ, ಜುಲೈ 25: ಸದಾ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷದ (wildlife conflict) ಸುದ್ದಿಯಿಂದ ಸದ್ದು ಮಾಡುತ್ತಿದ್ದ ಚಾಮರಾಜನಗರ (chamarajanagar) ಜಿಲ್ಲೆಗೆ ಅರಣ್ಯಾಧಿಕಾರಿಗಳು ಮದ್ದು ಅರೆಯಲು ಮುಂದಾಗಿದ್ದಾರೆ. ಕಾಡು ಪ್ರಾಣಿಗಳಿಂದ ರೈತರಿಗೆ ಶಾಶ್ವತ ಪರಿಹಾರ ನೀಡಲು ಪಣ ತೊಟ್ಟಿದ್ದಾರೆ. ಬರೋಬ್ಬರಿ 314 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಸಿದ್ದತೆ ನಡೆಸಿದ್ದಾರೆ. ಆ ಮೂಲಕ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಮುಂದಾಗಿದ್ದಾರೆ.

ಕಾಡು ಪ್ರಾಣಿಗಳು, ಮಾನವ ನಡುವಿನ ಸಂಘರ್ಷಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್

ಅತೀ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಅದೆ ರೀತಿ ಅತೀ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಸಾಕ್ಷಿಯಾದ ಜಿಲ್ಲೆ ಎಂಬ ಅಪಖ್ಯಾತಿ ಕೂಡ ಚಾಮರಾಜನಗರ ಜಿಲ್ಲೆಗೆ ಸಲ್ಲುತ್ತೆ. ಶತಾಯ ಗತಾಯ ಕಾಡು ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷಕ್ಕೆ ಬ್ರೇಕ್ ಹಾಕಲೇಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆ ಹೊಸದೊಂದು ಮಾಸ್ಟರ್ ಪ್ಲ್ಯಾನ್​​ ಮಾಡಿದ್ದಾರೆ.

ಇದನ್ನೂ ಓದಿ: ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ, ಬೆಚ್ಚಿಬಿದ್ದ ಪ್ರಯಾಣಿಕರು: ವಿಡಿಯೋ ವೈರಲ್

ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನ ಅರಣ್ಯಾಧಿಕಾರಿಗಳು ಕಂಡು ಹಿಡಿದಿದ್ದಾರೆ. ರೈಲ್ವೆ ಬ್ಯಾರಿಗೇಡ್​ ಅಳವಡಿಸುವ ಮೂಲಕ ಕಾಡಾನೆ ದಾಳಿ, ಬೆಳೆ ಹಾನಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದಾರೆ. ಇನ್ನು ಕಾಡಂಚಿನ ಪ್ರದೇಶಗಳಲ್ಲಿ ಆಗಾಗ್ಗೆ ಕಾಡು ಬಿಟ್ಟು ನಾಡಿಗೆ ಬರುವ ಆನೆಗಳು ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತವೆ. ಅಲ್ಲದೆ ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿ ಸಾವನ್ನಪ್ಪಿರುವ ಸಾಕಷ್ಟು ನಿದರ್ಶನಗಳಿವೆ. ರೈತರು ಕೂಡ ಅಕ್ರಮವಾಗಿ ವಿದ್ಯುತ್ ಹರಿಸಿ ವನ್ಯಪ್ರಾಣಿಗಳ ಸಾವಿಗೆ ಕಾರಣವಾಗಿರುವ ಉದಾಹರಣೆಗಳಿವೆ. ಹೀಗಾಗಿ ಆನೆಗಳು ಹೆಚ್ಚಾಗಿ ಕಾಡಿನಿಂದ ಆಚೆ ಬರುವ ಪ್ರದೇಶಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಿ ಅಂತಹ ಜಾಗದಲ್ಲಿ ರೈಲ್ವೆ ಬ್ಯಾರಿಗೇಡ್‌ಗಳನ್ನು ಅಳವಡಿಸಲು ಮುಂದಾಗಿದ್ದಾರೆ.

ಒಂದೂವರೆ ಕೋಟಿ ರೂ ವೆಚ್ಚ

ಬಂಡೀಪುರದಲ್ಲಿ ಇಲ್ಲಿಯವರೆಗೂ 60 ಕಿ.ಮೀ ರೈಲ್ವೆ ಬ್ಯಾರಿಕೇಡ್ ಸಿದ್ಧಪಡಿಸಲಾಗಿದ್ದು, ಈ ವರ್ಷ ಮತ್ತೆ 27 ಕಿ.ಮೀ ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದ ಕಾಡಂಚಿನ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮತ್ತಷ್ಟು ತಪ್ಪಲಿದೆ. ಇನ್ನೂ ಈ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚು ದುಬಾರಿ ವೆಚ್ಚ ತಗುಲುತ್ತದೆ. ಒಂದು ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ಹಾಕಲು ಅಂದಾಜು ಒಂದೂವರೆ ಕೋಟಿ ರೂ. ಖರ್ಚಾಗುತ್ತದೆ. ಹೀಗಾಗಿ ಆನೆಗಳು ಹೆಚ್ಚಾಗಿ ಹೊರಗೆ ಬರುವ ಪ್ರದೇಶಗಳನ್ನು ಗುರುತಿಸಿ ಅಂತಹ ಜಾಗಗಳಲ್ಲಿ ಅಧಿಕಾರಿಗಳು ಬ್ಯಾರಿಕೇಡ್​ ಅಳವಡಿಸುವ ಕೆಲಸ ನಡೆದಿದೆ.

ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ಇನ್ನು ಬಂಡೀಪುರ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆನೆ ಉಪಟಳ ಹೆಚ್ಚಾಗಿರುವ ಪ್ರದೇಶದಲ್ಲಿ ಕೂಡ ಮುಂದಿನ ದಿನಗಳಲ್ಲಿ ಈ ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪುತ್ತದೆ. ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದು, ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ
ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ 'ಜಿರಲೆ
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
'ಪೇಪರ್ ಲೀಕ್' ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ
'ಪೇಪರ್ ಲೀಕ್' ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ