ಪೂಜೆ, ದೇವರ ಹೆಸರಿನಲ್ಲಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ: ಮಹಿಳೆ ಪರಾರಿ

Cheating: ಒಡವೆಗಳನ್ನ ಜನರ ಹೆಸರಿನಲ್ಲೇ ಗಿರವಿ ಇಡಿಸಿ ಹಣ ಪಡೆದಿದ್ದಳಂತೆ. ಕೆಲವರಿಗೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಕೊಡಿಸಿ ಹಣ ಗುಳುಂ ಮಾಡಿರುವ ಪ್ರಸಂಗವೂ ಇದೆ. ಇದೀಗ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಹೇಮಲತಾ ಪರಾರಿಯಾಗಿದ್ದಾರೆ. 

ಪೂಜೆ, ದೇವರ ಹೆಸರಿನಲ್ಲಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ: ಮಹಿಳೆ ಪರಾರಿ
ಪೂಜೆ, ದೇವರ ಹೆಸರಿನಲ್ಲಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ: ಮಹಿಳೆ ಪರಾರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 02, 2021 | 3:27 PM

ಮೈಸೂರು: ಮಹಿಳೆಯೊಬ್ಬಳು ಪೂಜೆ, ದೇವರ ಹೆಸರಿನಲ್ಲಿ ಮಹಿಳೆಯರಿಗೆ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಪ್ರಕರಣ ಮೈಸೂರಲ್ಲಿ ವರದಿಯಾಗಿದೆ. ಸುಮಾರು  15ಕ್ಕೂ ಹೆಚ್ಚು ಮಹಿಳೆಯರಿಗೆ ಅಂದಾಜು 70 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಸ್ಥಳೀಯ ಮಹಿಳೆಯರ ವಿಶ್ವಾಸಗಳಿಸಿ, ಹಣ ಪಡೆದು ಹೇಮಲತಾ ಎಂಬವವರು ಪರಾರಿಯಾಗಿದ್ದಾರೆ. 

ಆರೋಪಿ ಹೇಮಲತಾ 5 ವರ್ಷಗಳ ಹಿಂದೆ ಸಾತಗಳ್ಳಿ ಬಳಿ ಮನೆ ಬಾಡಿಗೆಗೆ ಪಡೆದಿದ್ದರು. ಸಾಯಿಬಾಬಾ ದೇಗುಲ ಬಳಿ ವಾಸವಿದ್ದ ವಂಚಕಿ ಹೇಮಲತಾ ಹೋಮ, ಪೂಜೆ ಮಾಡುತ್ತಾ ಸ್ಥಳೀಯರ ವಿಶ್ವಾಸಗಳಿಸಿದ್ದರು.  ದೇವರ ಹೆಸರಲ್ಲಿ ಬಾಗಿನ, ಅರಿಶಿನ ಕುಂಕುಮ, ಗಿಫ್ಟ್ ಕೊಡ್ತಿದ್ದಳು ಎಂದು ತಿಳಿದುಬಂದಿದೆ.

ಒಡವೆಗಳನ್ನ ಅವರ ಹೆಸರಿನಲ್ಲೇ ಗಿರವಿ ಇಡಿಸಿ ಹಣ ಪಡೆದಿದ್ದಳಂತೆ. ಕೆಲವರಿಗೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಕೊಡಿಸಿ ಹಣ ಗುಳುಂ ಮಾಡಿರುವ ಪ್ರಸಂಗವೂ ಇದೆ. ಇದೀಗ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಹೇಮಲತಾ ಪರಾರಿಯಾಗಿದ್ದಾರೆ.  ಆರೋಪಿ ವಂಚಕಿ ಹೇಮಲತಾ ವಿರುದ್ಧ ಉದಯಗಿರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

(cheating in the name of gods fraud woman from mysuru absconding)

ಹನುಮಂತನಗರದ ವಸಿಷ್ಠ ಕ್ರೆಡಿಟ್ ಸೊಸೈಟಿಯಿಂದಲೂ ನಡೆದಿದೆ ಕೋಟ್ಯಂತರ ರೂ ವಂಚನೆ, ಆರೋಪಿಗಳಿಬ್ಬರು ಎಸ್ಕೇಪ್!

Published On - 3:26 pm, Fri, 2 July 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್