ಚಿಕ್ಕಬಳ್ಳಾಪುರ: ಐಷಾರಾಮಿ ಬಿಎಂಡಬ್ಲ್ಯೂ ಬೈಕ್ ಮತ್ತು ಮತ್ತೊಂದು ಬೈಕ್ ಮುಖಾಮುಖಿಯಾಗಿದ್ದು ಸವಾರನೋರ್ವ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಈಶಾ ಫೌಂಡೇಷನ್ ಆಶ್ರಮಕ್ಕೆ ತೆರಳುತ್ತಿದ್ದ ಸದ್ಗುರು ಜಗ್ಗಿ ವಾಸುದೇವನ್ ಭಕ್ತನೋರ್ವ ಬಿಎಂಡಬ್ಲ್ಯೂ ಬೈಕ್ನಲ್ಲಿ ಬರುತ್ತಿದ್ದರು. ಮತ್ತೊಂದು ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಮುಖಾಮುಖಿಯಾಗಿದೆ. ಘಟನೆಯಲ್ಲಿ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ ಅನೂಪ್ ಗುರುರಾಜ್ (31) ಮೃತಪಟ್ಟಿದ್ದಾರೆ.
ಅನೂಪ್ ಇಂದು ಮಧ್ಯಾಹ್ನ ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 44ರ ಬೆಂಗಳೂರು ಹೈದರಾಬಾದ್ ರಸ್ತೆಯ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ಅಲವಗುರ್ಕಿ ಗ್ರಾಮದ ಬಳಿ ಇರುವ ಸದ್ಗುರು ಜಗ್ಗಿ ವಾಸುದೇವ್ ಆಶ್ರಮಕ್ಕೆ ತೆರಳುತ್ತಿದ್ದರು. ಚಿಕ್ಕಬಳ್ಳಾಪುರದ ಬಳಿ ಇರುವ ಅಗಲಗುರ್ಕಿ ಗ್ರಾಮದ ಬಳಿ ಬೈಪಾಸ್ ರಸ್ತೆಯಲ್ಲಿ ಬಿಎಂಡಬ್ಲ್ಯೂ ಕೆ.ಎ 19 , ಬಿ 6666 ನಂಬರ್ ನ ಬೈಕ್ ನಲ್ಲಿ ಸಾಗುತ್ತಿದ್ದಾಗ ಅಗಲಗುರ್ಕಿ ಗ್ರಾಮದ ಬಳಿ ಅಮಾನಿ ಗೋಪಾಲಕೃಷ್ಣ ಕೆರೆ ಬಳಿ ಓನ್ ವೇ ನಲ್ಲಿ ಬಂದ ಹೋಂಡಾ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳೀಯ ವ್ಯಕ್ತಿಯೋರ್ವ ಬೈಕನ್ನು ಗಮನಿಸದೆ ಯೂ ಟರ್ನ್ ತೆಗೆದುಕೊಂಡಿದ್ದಾನೆ ಆಗ ಬಿಎಂಡಬ್ಲ್ಯೂ ಬೈಕ್ ಸವಾರ ನಿಯಂತ್ರಣ ತಪ್ಪಿ ಎದುರುಗಡೆ ಇದ್ದ ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ್ದಾನೆ.
ಘಟನೆಯಿಂದ ತಲೆಗೆ ಗಾಯಗಳಾಗಿ ಅನೂಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಸ್ಥಳೀಯ ಬೈಕ್ ಸವಾರನ ಗುರುತು ಪತ್ತೆಯಾಗಬೇಕಿದ್ದು ತಲೆಗೆ ಗಂಭೀರಗಾಯವಾಗಿದೆ ಇದ್ರಿಂದ ಹೆಚ್ಚಿನ ಚಿಕಿತ್ಸೆಗೆ ಗಾಯಾಳುವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ