AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢ: ಸಾಕು ಕೋಳಿಗಳ ಸಾಮೂಹಿಕ‌ ಹತ್ಯೆ

ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ನೂರಾರು ಕೋಳಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗಿದೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕೆಲವರು ತಮ್ಮ ಕೋಳಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹಕ್ಕಿ ಜ್ವರ ಕಡಿವಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.

ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ದೃಢ: ಸಾಕು ಕೋಳಿಗಳ ಸಾಮೂಹಿಕ‌ ಹತ್ಯೆ
ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಧೃಡ: ಸಾಕು ಕೋಳಿಗಳ ಸಾಮೂಹಿಕ‌ ಹತ್ಯೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 28, 2025 | 6:48 PM

Share

ಚಿಕ್ಕಬಳ್ಳಾಪುರ, ಫೆಬ್ರವರಿ 28: ಮಹಾರಾಷ್ಟ್ರ ಆಂಧ್ರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರ (Bird Flu), ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಚಿಕನ್ ಪ್ರಿಯರು ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನೂ ನಿನ್ನೆ ಚಿಕ್ಕಬಳ್ಳಾಪುರ ದಲ್ಲಿ ಹಕ್ಕಿ ಜ್ವರ ದೃಢವಾದ ಕಾರಣ ಇಂದು ಗ್ರಾಮವೊಂದರಲ್ಲಿದ್ದ ಕೋಳಿಗಳನ್ನು ಹಿಡಿದು ಸಾಮೂಹಿಕವಾಗಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.

ಸಾಕು ಕೋಳಿಗಳ ಸಾಮೂಹಿಕ ಹತ್ಯೆ

ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಗ್ರಾಮದಲ್ಲಿ ಎಲ್ಲಂದರಲ್ಲಿ ದಿನೇ ದಿನೇ ಕೋಳಿಗಳು ಸಾವನ್ನಪ್ಪುತ್ತಿವೆ. ಇಂದು ಸಹ ಗ್ರಾಮದ ಮುನಿಕುಮಾರ್ ಎಂಬುವವರ ಮನೆಯಲ್ಲಿ 8 ಕೋಳಿಗಳು ಸಾವನ್ನಪ್ಪಿವೆ. ಉಳಿದ ಕೋಳಿಗಳು ತೂಕಡಿಸಿ ಸಾಯುವ ಸ್ಥಿತಿಯಲ್ಲಿವೆ. ಇದ್ರಿಂದ ಗ್ರಾಮದಲ್ಲಿ ಹಕ್ಕಿ ಜ್ವರ ಕಡಿವಾಣ ಹಾಕಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂದಾಗಿದ್ದು, ಇಂದು ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿರುವ ಸಾಕು ಕೋಳಿಗಳನ್ನು ಹಿಡಿದು ಸಾಮೂಹಿಕ ಹತ್ಯೆ ಮಾಡುವುದರ ಮೂಲಕ ಹಕ್ಕಿ ಜ್ವರ ಕಡಿವಾಣಕ್ಕೆ ಮುಂದಾದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆ: ಕೋಳಿಗಳ ಸಾವು, ಚಿಕನ್ ತಿನ್ನದಂತೆ ಡಿಸಿ ಮನವಿ

ಇದನ್ನೂ ಓದಿ
Image
ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆ: ಕೋಳಿಗಳ ಸಾವು
Image
ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರ, ರಾಜ್ಯದಲ್ಲಿ ಅಲರ್ಟ್: ಕೋಳಿ ಆಮದು ನಿರ್ಬಂಧ
Image
ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹೆಚ್ಚಳ; ಬೀದರ್ ಗಡಿಭಾಗದಲ್ಲಿ ಹೈಅಲರ್ಟ್
Image
Bird Flu: ಹಕ್ಕಿಜ್ವರದಿಂದ ವಿಶ್ವದಲ್ಲೇ ಮೊದಲ ಸಾವು, ಭಾರತದ 4 ರಾಜ್ಯಗಳಿಗೆ

ಗ್ರಾಮದಲ್ಲಿ 90 ಮನೆಗಳಿದ್ದು 400 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅದರಲ್ಲೂ 400 ಕ್ಕೂ ಹೆಚ್ಚು ಕೋಳಿಗಳಿದ್ದವು. ಬಹುತೇಕ ಕೋಳಿಗಳು ರೋಗಗ್ರಸ್ಥವಾಗಿದ್ದು, ಸಿಕ್ಕ ಸಿಕ್ಕ ಕೋಳಿಗಳನ್ನ ಹಿಡಿದು ಕೊಲ್ಲಲಾಗಿದೆ. ಸಾಮೂಹಿಕವಾಗಿ ಕೋಳಿಗಳನ್ನ ‌ಹಿಡಿದು ಭೂಮಿಯಲ್ಲಿ ಹೂಳಲಾಗ್ತಿದೆ.

ಗುಂಡಿಯಲ್ಲಿ ಸುಣ್ಣದಕಲ್ಲು, ಬ್ಲೀಚಿಂಗ್ ಪೌಡರ್ ಹಾಕಿ ಗುಂಡಿಯ ಮೇಲೆ ಡೇಂಜರ್ ಝೋನ್ ಬೋರ್ಡ್ ಹಾಕಲಾಗುತ್ತಿದೆ. ಮತ್ತೊಂದೆಡೆ ಗ್ರಾಮಸ್ಥರು ಕೋಳಿಗಳನ್ನು ಸುಲಭವಾಗಿ ಕೊಡದೆ ಸಾಕಿರುವ ಕೋಳಿಗಳಿಗೆ ಏನಾದ್ರು ಪರಿಹಾರ ಕೊಡುವಂತೆ ಮನವಿಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bird Flu Death: ಹಕ್ಕಿಜ್ವರದಿಂದ ವಿಶ್ವದಲ್ಲೇ ಮೊದಲ ಸಾವು, ಭಾರತದ 4 ರಾಜ್ಯಗಳಿಗೆ ಎಚ್ಚರಿಕೆ

ಇನ್ನೂ ಗ್ರಾಮದಲ್ಲಿ ಕೆಲ ಗ್ರಾಮಸ್ಥರು ಕೋಳಿಗಳನ್ನ ಕೊಡದೆ ಹಿಂದೇಟು ಹಾಕಿದ್ದು ನಾಳೆಯೂ ಸಹ ಗ್ರಾಮಸ್ಥರ ಮನವೊಲಿಸಿ ಅಳಿದುಳಿದ ಕೋಳಿಗಳನ್ನ ಸಹ ಕೊಲ್ಲುವುದಾಗಿ ತಿಳಿಸಿದ್ದಾರೆ. ವರದಹಳ್ಳಿ ಗ್ರಾಮದ ಮುಂಭಾಗ ನಾಕಾಬಂಧಿ ಹಾಗೆ ಮುಂದುವರೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:47 pm, Fri, 28 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ