ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್

ಚಿಕ್ಕಬಳ್ಳಾಪುರದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ರೌಡಿಶೀಟರ್‌ಗಳಿಗೆ ಮನೆ ದರೋಡೆಗೆ ತರಬೇತಿ ನೀಡಿ, ಅವರನ್ನು ಅಪರಾಧಕ್ಕೆ ಉತ್ತೇಜಿಸಿದ್ದಾನೆ. ಗೌರಿಬಿದನೂರಿನಲ್ಲಿ ನಡೆದ ದರೋಡೆಯಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಗೌರಿಬಿದನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್
ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್
Updated By: ವಿವೇಕ ಬಿರಾದಾರ

Updated on: Mar 05, 2025 | 3:02 PM

ಚಿಕ್ಕಬಳ್ಳಾಪುರ, ಮಾರ್ಚ್​ 05: ಈ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ದರೋಡೆಕೋರರನ್ನು ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸ್​​ ದರೋಡೆಗೆ ತರಬೇತಿ ನೀಡುತ್ತಿದ್ದನು ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣೂರು (Hennur) ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ (Police Head Constable) ರೌಡಿಶೀಟರ್ ಹಾಗೂ ಇತರರಿಗೆ ಮನೆ ದರೋಡೆಗೆ ತರಬೇತಿ ನೀಡುತ್ತಿದ್ದನು. ತರಬೇತಿ ನೀಡಿದ ಬಳಿಕ ಅವರನ್ನು ಮನೆ ದರೋಡಗೆ ಕಳುಹಿಸುತ್ತಿದ್ದನು.

ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಶ್ರೀನಿವಾಸ್ ಎಂಬುವರ ಮನೆಯಲ್ಲಿ 2 ಕೋಟಿ ಹಣ ಕೆಜಿಗಟ್ಟಲೇ ಚಿನ್ನ ಇರುವ ಮಾಹಿತಿಯನ್ನು ದರೋಡೆಕೋರರು ಕಲೆಹಾಕಿದ್ದರು. ಫೆಬ್ರವರಿ 17 ರಂದು ದರೋಡಗೆ ಪ್ಲಾನ್ ಮಾಡಿದ್ದಾರೆ. ಬಳಿಕ, ಫೆಬ್ರವರಿ 20 ರಂದು ಮನೆಗೆ ನುಗ್ಗಿ ಮನೆಯವರನ್ನ ಬೆದರಿಸಿ ದರೋಡಗೆ ಪ್ರಯತ್ನಿಸಿದ್ದಾರೆ.

ಆದರೆ, ಶ್ರೀನಿವಾಸ್​ ಅವರ ಮನೆಯಲ್ಲಿ ಸಿಕ್ಕಿದ್ದು ಕೇವಲ ಒಂದು ಉಂಗುರ, 14 ಹರಳುಗಳು, ಎರಡು ಹರಳದ ಕಲ್ಲುಗಳು. ದರೋಡೆ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಪೊಲೀಸರು ತನಿಖೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ದರೋಡೆಕೋರರಿಗೆ ತರಬೇತಿ ನೀಡುತ್ತಿದ್ದು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ಎಂದು ತಿಳಿದು ಬಂದಿದೆ.

ಇದನ್ನೂ ಓದಿ
ಅನೈತಿಕ ಸಂಬಂಧ ಆರೋಪ: ಎರಡನೇ ಹೆಂಡತಿಯನ್ನ ಕೂಡಿಹಾಕಿ ಹಲ್ಲೆ
ಚಿಕ್ಕಬಳ್ಳಾಪುರ: ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ 5 ಬಂಧನ
ಚಿಕ್ಕಬಳ್ಳಾಪುರ: ಮೋಸ್ಟ್​ ವಾಟೆಂಡ್​​​ ಕಿಡ್ನ್ಯಾಪರ್​ ಬಾಂಬೆ ಸಲೀಂ ಬಂಧನ
ಅಪ್ರಾಪ್ತೆ ಜತೆ ಲವ್, ಪ್ರೇಯಸಿಯ ಸಾಕಲು ಕಳ್ಳತನ ಮಾಡ್ತಿದ್ದ ಯುವಕ ಲಾಕ್

ಹೆಣ್ಣೂರು ಸಂಚಾರಿ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಇಲಿಯಾಜ್, ಡಿಜೆಹಳ್ಳಿ ಪೊಲೀಸ್ ಠಾಣೆಯ ನಟೋರಿಯಸ್ ರೌಡಿಶೀಟರ್ ತನ್ವಿರ್ ಆಲಿಯಾಸ್ ಮೆಂಟಲ್ ತನು, ಸಾಬೀರ್, ಫೈರೋಜ್,ಬಷೀರ್ ಅಹಮದ್, ಇರ್ಫಾನ್ ಪಾಷಾ, ಬಾಬಾಜಾನ್, ಅಮೀನ್ ಬಂಧಿತರು.

ಇದನ್ನೂ ಓದಿ: ಸಾಲ ತೀರಿಸೋಕೆ ಬುರ್ಖಾ ತೊಟ್ಟು ವೃದ್ದೆಯ ಚಿನ್ನಾಭರಣ ಕದ್ದ ಖತರ್ನಾಕ್​ ಮಹಿಳೆಯರು

ಮನೆ ಬಾಗಿಲು ಮುರಿದು ಚಿನ್ನ ಕದ್ದ ಖದೀಮರು

ಬೆಳಗಾವಿ: ರಾಮದುರ್ಗ ಪಟ್ಟಣದ ಚಿನ್ನದ ವ್ಯಾಪಾರಿ ವಿರೇಶ್​ ಫತ್ತೇಪುರ ಎಂಬುವರ ಮನೆಯಲ್ಲಿನ ಸುಮಾರು 1 ಕೋಟಿ ರೂ. ಮೌಲ್ಯದ 1.200 ಕೆಜಿ ಚಿನ್ನಾಭರಣ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕದ್ದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಮತ್ತು ಶ್ವಾನದಳದ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Wed, 5 March 25