ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಕೊಲೆ: ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿ ಕತ್ತಿಗೆ ಚೂರಿ ಹಾಕಿದ್ರು

ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಕೊಲೆ: ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿ ಕತ್ತಿಗೆ ಚೂರಿ ಹಾಕಿದ್ರು
ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಕೊಲೆ: ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿ ಕತ್ತಿಗೆ ಚೂರಿ ಹಾಕುದ್ರು

ಗೆಳೆಯರು ಕಂಠಪೂರ್ತಿ ಎಣ್ಣೆ ಕುಡಿದು ನಂತರ ಜೊತೆಗಿದ್ದ 25 ವರ್ಷದ ಸ್ನೇಹಿತ ಮೋಹನ್ನ ಕತ್ತಿಗೆ ಚಾಕುವಿನಿಂದ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

TV9kannada Web Team

| Edited By: Apurva Kumar Balegere

Jan 19, 2022 | 10:45 AM

ಚಿಕ್ಕಬಳ್ಳಾಪುರ: ಹಗಲೆಲ್ಲ ತಮ್ಮ ಪಾಡಿಗೆ ತಮ್ಮ ತಮ್ಮ ಕೆಲಸ ಮಾಡಿಕೊಂಡು ಇರ್ತಿದ್ದವರು, ಸಂಜೆಯಾದ್ರೆ ಸಾಕು ಎಣ್ಣೆ ಹೊಡೆಯಲು ಜೊತೆಗೂಡ್ತಿದ್ರು. ಯಾವಾಗಲೂ ಎಣ್ಣೆ ಹೊಡೆಯೊಕೆ ಅಂತ ಊರ ಹೊರಗೆ ಹೊಗ್ತಿದ್ದ ಆ ಗ್ಯಾಂಗ್ ನಲ್ಲಿ, ಜ.18ರ ಸಂಜೆ ಅದೇನ್ ಆಯಿತೋ ಏನೊ.. ಎಣ್ಣೆಯ ನಶೆ ನೆತ್ತಿಗೇರುತ್ತಿದ್ದಂತೆ ಜೊತೆಗಿದ್ದ ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸೀಗೆಹಳ್ಳಿ ಗ್ರಾಮದ ಮೋಹನ್, ಪ್ರಭಾಕರ್, ಸುಮನ್, ನಂದನ್ ಎಂಬ ಆಪ್ತ ಸ್ನೇಹಿತರು ಎಣ್ಣೆ ಹೊಡೆಯಲು ಪಕ್ಕದ ಗ್ರಾಮ ಗೆಜ್ಜಿಗಾನಹಳ್ಳಿ ಬಳಿ ಇರುವ ನೀಲಗಿರಿ ತೋಪಿಗೆ ಹೋಗಿದ್ದರು. ಗೆಳೆಯರು ಕಂಠಪೂರ್ತಿ ಎಣ್ಣೆ ಕುಡಿದು ನಂತರ ಜೊತೆಗಿದ್ದ 25 ವರ್ಷದ ಸ್ನೇಹಿತ ಮೋಹನ್ನ ಕತ್ತಿಗೆ ಚಾಕುವಿನಿಂದ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಳೆದ ಎರಡು ಮೂರು ದಿನಗಳ ಹಿಂದೆ ಪ್ರಬಾಕರ್, ಮೋಹನ್ದು ತುಂಬಾ ಆಗಿದೆ ಅವನನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದ. ಅದನ್ನು ಮೋಹನ್ ತನ್ನ ಸಂಬಂಧಿ ಮನು ಬಳಿ ಹೇಳಿಕೊಂಡಿದ್ದಾನೆ, ಆದ್ರೆ ಈ ವೇಳೆ ಮನು ಸ್ನೇಹಿತರು ಎಣ್ಣೆ ಹೊಡೆದಾಗ ಒಂದು ರೀತಿ, ಎಣ್ಣೆ ಇಳಿದ ಮೇಲೆ ಇನ್ನೊಂದು ರೀತಿ ಇರ್ತಿರಿ. ಎಲ್ಲಾ ಸ್ನೇಹಿತರು ಏನೊ ತಮಾಷೆ ಮಾಡಿದ್ದಾರೆ ಅಂತ ದೈರ್ಯ ತುಂಬಿದ್ದಾನೆ. ಆದ್ರೆ ಇಂದು ಪ್ರಭಾಕರ್ ಮತ್ತವನ ಸ್ನೇಹಿತರು ಹೇಳಿದಂತೆ ಮೋಹನ್ ನ ಕೊಲೆ ಮಾಡಿದ್ದಾರೆ.

ಮೋಹನ್ ಕೊಲೆ ಮಾಡಲೆಂದೆ ಪ್ರಬಾಕರ್, ಸುಮನ್, ನಂದನ್ , ಮೋಹನ್ ನನ್ನು ನಂಬಿಸಿ ಎಣ್ಣೆ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಕಂಠಪೂರ್ತಿ ಎಣ್ಣೆ ಕುಡಿದ ಮೇಲೆ, ಮೊದಲೇ ಸ್ಕೇಚ್ ಹಾಕಿದಂತೆ ಮೋಹನ್ ನ ಕಥೆ ಮುಗಿಸಿದ್ದಾರೆ. ಇದ್ರಿಂದ ಮೋಹನ್ ಸ್ಥಳದಲ್ಲೇ ಸಾವಿನ ಮನೆ ಸೇರಿದ್ದಾನೆ. ಆರೋಪಿಗಳು ಮತ್ತೆ ಗ್ರಾಮಕ್ಕೆ ಬರಬಾರದು ಅವರಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಅಂತ ಮೋಹನ್ ಸಂಬಂಧಿ ಮನು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಯುವಕನ ಬರ್ಬರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇತ್ತ ಗ್ರಾಮದಲ್ಲಿ ಕಬಡ್ಡಿ ಕ್ರಿಕೆಟ್ ನಂಥಹ ಕ್ರೀಡೆಗಳನ್ನು ಆಯೋಜಿಸಿ, ಜನ ಮೆಚ್ಚುಗೆ ಪಡೆದಿದ್ದ ಮೋಹನ್, ಸ್ವತಃ ತನ್ನ ಆಪ್ತ ಸ್ನೇಹಿತರ ಕೈಯಿಂದಲೆ ಬರ್ಬರವಾಗಿ ಹತ್ಯೆಯಾಗಿದ್ದು ಮಾತ್ರ ವಿಪರ್ಯಾಸ.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

ಇದನ್ನೂ ಓದಿ: ಮಕ್ಕಳ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​

Follow us on

Related Stories

Most Read Stories

Click on your DTH Provider to Add TV9 Kannada