Gandhi Jayanti 2024: ಚಿಕ್ಕಬ್ಬಳ್ಳಾಪುರದ ನಂದಿ ಬೆಟ್ಟದಲ್ಲಿ 65 ದಿನ ತಂಗಿದ್ದರು ಮಹಾತ್ಮ ಗಾಂಧಿ

ಪ್ರಕೃತಿ ಸೌಂದರ್ಯವನ್ನು ಹೊದ್ದು ಮಲಗಿರುವ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಿಹರಿಸಿದರೆ ಅದೇನೋ ಮನಸ್ಸಿಗೆ ಅಲ್ಲಾದಕರವಾಗುತ್ತೆ. ಇನ್ನು ಬೆಳ್ಳಂಬೆಳಿಗ್ಗೆ ಗಿರಿಧಾಮದಲ್ಲಿ ಕೊರೆಯುವ ಚಳಿ, ತುಂತುರು ಮಳೆ, ಪ್ರಣಯ ಪಕ್ಷಿಗಳ ಕಲರ್ಪುಲ್ ಸೊಬಗು ಮನಸೊರೆಗೊಳ್ಳುತ್ತೆ. ಇಂತಹ ಪಕೃತಿ ಸೌಂದರ್ಯ ತಾಣದಲ್ಲಿ ಮಹಾತ್ಮ ಗಾಂಧೀಜಿ ತಂಗಿದ್ದರು ಎನ್ನುವುದೇ ವಿಶೇಷ.

Gandhi Jayanti 2024: ಚಿಕ್ಕಬ್ಬಳ್ಳಾಪುರದ ನಂದಿ ಬೆಟ್ಟದಲ್ಲಿ 65 ದಿನ ತಂಗಿದ್ದರು  ಮಹಾತ್ಮ ಗಾಂಧಿ
ನಂದಿ ಬೆಟ್ಟದಲ್ಲಿ ತಂಗಿದ್ದರು ಗಾಂಧೀಜಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ವಿವೇಕ ಬಿರಾದಾರ

Updated on:Oct 02, 2024 | 8:36 AM

ಚಿಕ್ಕಬಳ್ಳಾಪುರ, ಅಕ್ಟೋಬರ್​ 02: ಪ್ರಕೃತಿ ಸೊಬಗಿಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ (ನಂದಿ ಬೆಟ್ಟ) (Nandi Hills) ಕಂಡು ಸ್ವತಃ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೇ (Mahatma Gandhi) ಆನಂದ ಪಟ್ಟಿದ್ದರು. 65 ದಿನಗಳ ಕಾಲ ಗಾಂಧೀಜಿ ನಂದಿ ಗಿರಿಧಾಮದಲ್ಲಿ ತಂಗಿದ್ದರು ಎನ್ನುವುದೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಇಂದು (ಅ.02) ಮಹಾತ್ಮ ಗಾಂಧೀಜಿಯವರ ಜಯಂತಿ ಹಿನ್ನೆಲೆಯಲ್ಲಿ ಗಾಂಧೀಜಿ ಹಾಗೂ ನಂದಿಬೆಟ್ಟದ ನಂಟಿನ ಬಗ್ಗೆ ಒಂದು ವರದಿ ಇಲ್ಲಿದೆ.

ಪ್ರಕೃತಿ ಸೌಂದರ್ಯವನ್ನು ಹೊದ್ದು ಮಲಗಿರುವ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಿಹರಿಸಿದರೆ ಮನಸ್ಸಿಗೆ ಅಲ್ಲಾದಕರವಾಗುತ್ತೆ. ಬೆಳ್ಳಂಬೆಳಿಗ್ಗೆ ಗಿರಿಧಾಮದಲ್ಲಿ ಕೊರೆಯುವ ಚಳಿ, ತುಂತುರು ಮಳೆ, ಪ್ರಣಯ ಪಕ್ಷಿಗಳ ಕಲರ್​ಫುಲ್​ ಸೊಬಗು ಮನಸೊರೆಗೊಳಿಸುತ್ತದೆ. 1600 ಮೀಟರ್ ಎತ್ತರದಲ್ಲಿರುವ ಗಿರಿಧಾಮ ವಾತಾವರಣ ಅಹ್ಲಾದಕರವಾಗಿರುತ್ತೆ.

ಇದನ್ನೂ ಓದಿ: ಗಾಂಧಿ ಜಯಂತಿ: ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಮಹಾತ್ಮ ಗಾಂಧೀಜಿಯವರು ಆಯಾಸದಿಂದ ಬಳಲಿದ್ದರಂತೆ. ವೈದ್ಯರು ವಿಶ್ರಾಂತಿಗೆ ಮನವಿ ಮಾಡಿದ್ದರು. ಆಗ ಗಾಂಧೀಜಿಯವರು 1927ರಲ್ಲಿ 45 ದಿನ ಹಾಗೂ 1936ರಲ್ಲಿ 20 ದಿನ ಹೀಗೆ ಒಟ್ಟು 65 ದಿನಗಳ ಕಾಲ ನಂದಿಬೆಟ್ಟದಲ್ಲಿ ತಂಗಿದ್ದರು. ಅಂದಿನ ಸುಲ್ತಾನಪೇಟೆಯ ಕೆಲವು ಯುವಕರು ಗಾಂಧೀಜಿಯವರನ್ನು ಡೋಲಿಯಲ್ಲಿ ಹೊತ್ತುಕೊಂಡು ಹೋಗಲು ಮುಂದಾದರು. ಆದರೆ ಗಾಂಧೀಜಿಯವರು ಇದಕ್ಕೆ ನಿರಾಕರಿಸಿ ಬೆಟ್ಟದ ತುತ್ತತುದಿಯವರೆಗೂ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಕನ್ನಿಂಗ್‍ಹ್ಯಾಮ್ ಭವನದಲ್ಲಿ ತಂಗಿದರು. ಗಾಂಧೀಜಿಯವರು ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ತಂಗಿದ್ದ ಸ್ಮರಣಾರ್ಥ ಕನ್ನಿಂಗ್‍ಹ್ಯಾಮ್ ಭವನವನ್ನು ಗಾಂಧಿ ಭವನವೆಂದು ಮರುನಾಮಕರಣ ಮಾಡಲಾಗಿದೆ.

ಮಹಾತ್ಮ ಗಾಂಧೀಜಿಯವರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದಲ್ಲಿ 65 ದಿನಗಳ ಕಾಲ ತಂಗಿದ್ದರ ಸ್ಮರಣಾರ್ಥ ಗಿರಿಧಾಮದಲ್ಲಿ ಮಹಾತ್ಮಗಾಂಧಿಯವರ ಪ್ರತಿಮೆ ಸ್ಥಾಪಿಸಲಾಗಿದೆ. ನಡೆದುಕೊಂಡಯ ಹೋಗುತ್ತಿರುವ ರೀತಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:27 am, Wed, 2 October 24

ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ