ಚಿಕ್ಕಬಳ್ಳಾಪುರ: ನಕಲಿ ಚಿನ್ನ, ನಕಲಿ ರೈಡ್​ಗೆ ಅಸಲಿ ಪೊಲೀಸರೇ ಸಾಥ್ ನೀಡಿರುವ ಶಂಕೆ

ಜೆಸಿಬಿಯಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಂಗಾರ ಸಿಕ್ಕಿದೆ, ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಹಣ ತೆಗೆದುಕೊಂಡ ಬಂದ ಆಸಾಮಿಗಳ ಮೇಲೆ ನಕಲಿ ಪೊಲೀಸ್ ದಾಳಿ ಮಾಡಿ, 4 ಲಕ್ಷ ರೂಪಾಯಿ ಹಣ ಕಿತ್ತುಕೊಂಡು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ನಡೆದಿದ್ದು, ನಕಲಿ ಪೊಲೀಸ್ ದಾಳಿಯ ಹಿಂದೆ ಅಸಲಿ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಚಿಕ್ಕಬಳ್ಳಾಪುರ: ನಕಲಿ ಚಿನ್ನ, ನಕಲಿ ರೈಡ್​ಗೆ ಅಸಲಿ ಪೊಲೀಸರೇ ಸಾಥ್ ನೀಡಿರುವ ಶಂಕೆ
ಚಿಕ್ಕಬಳ್ಳಾಪುರ: ನಕಲಿ ಚಿನ್ನ, ನಕಲಿ ರೈಡ್​ಗೆ ಅಸಲಿ ಪೊಲೀಸರೇ ಸಾಥ್ ನೀಡಿರುವ ಶಂಕೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 28, 2024 | 9:11 PM

ಚಿಕ್ಕಬಳ್ಳಾಪುರ, ಸೆ.28: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ನವೀನ್‌ಪ್ರದೀಪ್ ಎನ್ನುವವರನ್ನು ನಂಬಿಸಿದ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಬಾಗೇಪಲ್ಲಿ ಮೂಲದ ಕಿರಾತಕರ ತಂಡವೊಂದು, ಜೆಸಿಬಿಯಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಂಗಾರ ಸಿಕ್ಕಿದೆ, ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ನವೀನ್‌ಪ್ರದೀಪ್ ಹಾಗೂ ತಂಡವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಂಗನಹಳ್ಳಿ ಕ್ರಾಸ್ ಬಳಿ ಕರೆಸಿದ್ದಾರೆ. ಅಲ್ಲಿಗೆ ಬಂದ ಶ್ಯಾಮ್, ರಾಜು ಹಾಗೂ ಮತ್ತೊಬ್ಬರಿಗೆ ಅಸಲಿ ಬಂಗಾರದ ಶ್ಯಾಂಪಲ್ ತೋರಿಸಿ, ನಂತರ ನಕಲಿ ಚಿನ್ನದ ಚೀಲಕೊಟ್ಟು ಪರೀಕ್ಷಿಸಿಕೊಳ್ಳುವಂತೆ ಹೇಳಿದ್ದಾರೆ. ಅಷ್ಟೊತ್ತಿಗೆ ನಕಲಿ ಪೊಲೀಸ್ ರೈಡ್ ಆಗಿದೆ.

ಪೊಲೀಸರಿಂದ ನಕಲಿ ರೈಡ್

ಇನ್ನು ನವೀನ್‌ಪ್ರದೀಪ್ ಹಾಗೂ ತಂಡ ಚಿನ್ನದ ಚೀಲವನ್ನು ತೆಗೆದುಕೊಂಡು ಪರೀಕ್ಷಿಸುತ್ತಿದ್ದಾಗ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ತಾವುಗಳು ಪೊಲೀಸ್ ಎಂದು ಪರಿಚಯಿಸಿಕೊಂಡು ಅವರ ಮೇಲೆ ದಾಳಿ ಮಾಡಿ, ನವೀನ್‌ಪ್ರದೀಪ್ ಬಳಿ ಇದ್ದ 4 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ:ಜೆಡಿಎಸ್ ಮುಖಂಡನಿಂದ ಬಾಗಲಕೋಟೆ ರಾಮಾರೂಢ ಮಠ ಸ್ವಾಮೀಜಿಗೆ 1 ಕೋಟಿ ರೂ. ವಂಚನೆ

ಪ್ರಕರಣದ ಹಿಂದೆ ಅಸಲಿ ಪೊಲೀಸರ ಕೈವಾಡದ ಶಂಕೆ

ಇನ್ನು ದೂರುದಾರ ನವೀನ್‌ಪ್ರದೀಪ್ ಬಳಿ ಹಣ ಕಿತ್ತುಕೊಂಡು ಎಸ್ಕೇಪ್ ಆದವರನ್ನು ಬಿಟ್ಟು, ಹಣ ತೆಗೆದುಕೊಂಡು ಬಂದವರನ್ನು ಠಾಣೆಗೆ ಕರೆತಂದ ಚೇಳೂರು ಠಾಣೆ ಪೊಲೀಸರು, ಅವರಿಂದ ದೂರು ತೆಗೆದುಕೊಂಡಿದ್ದಾರೆ. ಆದರೆ, ನಕಲಿ ಪೊಲೀಸ್ ರೈಡ್ ಹಿಂದೆ ಮೂವರು ಅಸಲಿ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದೆ. ಚೇಳೂರು ಹಾಗೂ ಬಾಗೇಪಲ್ಲಿ ಠಾಣೆಗೆ ಸೇರಿದ ಮೂವರು ಪೊಲೀಸ್ ಸಿಬ್ಬಂದಿಗಳೇ ಆರೋಪಿಗಳ ಜೊತೆ ಶಾಮೀಲಾಗಿ ಕೃತ್ಯ ನಡೆಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಇದರಿಂದ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:09 pm, Sat, 28 September 24

ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು