AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ತುಂಬಿ ಹರಿಯೊ ಜಲಾಶಯ ನೋಡಿ ಸಂತಸಗೊಂಡ ರಾಜಧಾನಿ ಜನ!!

ಅದು ಬಯಲು ಸೀಮೆಯ ಬರದ ನಾಡು. ಅಲ್ಲಿ ಮಳೆ ಇರಲಿ, ಅಂತರ್ಜಲಕ್ಕೂ ಬರ, ಇನ್ನೂ ಜೋರಾಗಿ ಮಳೆ ಬಂದು, ಅಲ್ಲಿರುವ ಜಲಾಶಯಗಳು ತುಂಬಿದ್ರೆ ಅಲ್ಲಿಯ ಜನರ ಸಂತಸ ಸಂಭ್ರಮ ನೋಡಬೇಕು, ಊರ ಜಾತ್ರೆ ಮಾಡಿದಷ್ಟು ಖುಷಿ ಪಡ್ತಾರೆ. ಮತ್ತೊಂದೆಡೆ  ಇಂದು ಕರ್ನಾಟಕ ಬಂದ್ ಹಿನ್ನಲೆ ರಾಜಧಾನಿ ಬೆಂಗಳೂರಿನ ಜನ  ನಿನ್ನೆಯೇ ಪ್ರವಾಸಿ ತಾಣಕ್ಕೆ ಲಗ್ಗೆ ಇಟ್ಟಿದ್ದು,  ಹರಿಯೋ ನೀರಿನಲ್ಲಿ ಬಿದ್ದು ಹೊದ್ದಾಡಿ ಸಂತಸ ಪಟ್ಟರು. ಈ ಕುರಿತು ಒಂದು ವರದಿ.

Karnataka Bandh: ತುಂಬಿ ಹರಿಯೊ ಜಲಾಶಯ ನೋಡಿ ಸಂತಸಗೊಂಡ ರಾಜಧಾನಿ ಜನ!!
ಚಿಕ್ಕಬಳ್ಳಾಪುರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 29, 2023 | 10:29 AM

ಚಿಕ್ಕಬಳ್ಳಾಪುರ, ಸೆ.29: ತಾಲೂಕಿನ ಶ್ರೀನಿವಾಸಸಾಗರ ಜಲಾಶಯ(Srinivasa Sagara Dam). ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಯಿಂದ, ಜಲಾಶಯ ತುಂಬಿ ಕೊಡಿ ಹರಿಯುತ್ತಿದೆ. ಭೂ ಮಟ್ಟದಿಂದ  80  ಅಡಿಗಳಷ್ಟು ಮೇಲಿನಿಂದ, ಜಲಾಶಯ ತುಂಬಿ ಹರಿಯುತ್ತಿರುವ ಕಾರಣ, ಮೇಲಿನಿಂದ ನೀರು ಕೆಳಗೆ ಸುರಿಯುವ ಸೌಂದರ್ಯ ನೋಡಲು ಎರಡು ಕಣ್ಣುಗಳೆ ಸಾಲದು,  ಇನ್ನು ಶ್ರೀನಿವಾಸಸಾಗರ ಸಾಗರ ಜಲಾಶಯ  ತುಂಬಿ ಕೊಡಿ ಹರಿಯುತ್ತಿರುವ  ಸುದ್ದಿ ಕೇಳಿದ ರಾಜಧಾನಿ ಬೆಂಗಳೂರಿನ ಜನರು ಇಂದು ಕರ್ನಾಟಕ ಬಂದ್ ಹಿನ್ನಲೆ ನಿನ್ನೆಯೇ ಶ್ರೀನಿವಾಸಸಾಗರ ಜಲಾಶಯಕ್ಕೆ ಲಗ್ಗೆ ಇಟ್ಟು ಜಲಾಶಯದ ನೀರಿನಲ್ಲಿ ಮಿಂದು ಬಿದ್ದು ಹೊದ್ದಾಡಿ ಸೇಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಸಂಭ್ರಮ ಪಟ್ಟರು.

ಇನ್ನೂ ಶ್ರೀನಿವಾಸ ಸಾಗರ ಜಲಾಶಯ ತುಂಬಿ ಕೋಡಿಯಾಗಿ ಹರಿಯುತ್ತೆ ಅನ್ನೊದನ್ನು ಅರಿತ ಸ್ಥಳಿಯರು ಹಾಗೂ ರಾಜಧಾನಿ ಬೆಂಗಳೂರಿನ ಜನ, ನಂದಿಗಿರಿಧಾಮ, ಇಶಾ ಪೌಂಢೇಷನ್ ನ ಆದಿಯೋಗಿ ಪ್ರತಿಮೆ ನೋಡಿಕೊಂಡು ನೇರವಾಗಿ ಶ್ರೀನಿವಾಸಸಾಗರ ಜಲಾಶಯದತ್ತ ಆಗಮಿಸುತ್ತಿದ್ದಾರೆ. ಇದ್ರಿಂದ ಜಲಾಶಯದ ಬಳಿ ಜನ ಜಾತ್ರೆ ಸೇರಿದೆ, ಜಲಾಶಯದಲ್ಲಿ ಕೋಡಿ ನೀರಿನಲ್ಲಿ  ಎಂಜಾಯ್ ಮಿಂದು ಸಂತಸ ಪಡ್ತಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಗ್ರಾಮಸ್ಥರು, ಸ್ಥಳೀಯ ವಕೀಲನ ಮದ್ಯೆ ಮಾರಾಮಾರಿ; ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಕಳೆದ ಭಾರಿ ಜಲಾಶಯ ತುಂಬಿ ಕೊಡಿ ಹರಿದಾಗ, ನೀರಿನಲ್ಲಿ ಬಿದ್ದು ಮೂವರು ಯುವಕರು ಜಲ ಸಮಾದಿಯಾಗಿದ್ರು. ಮುಂದೆ ಜಲಶಯದ ಬಳಿ ಕಹಿ ಘಟನೆಗಳು ನಡೆಯದ ಹಾಗೆ  ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:41 am, Fri, 29 September 23