ಶಿಡ್ಲಘಟ್ಟ: ಗ್ರಾ.ಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಆರೋಪಿಯ ಸಂಬಂಧಿ ಮನೆ ಮೇಲೆ ಕಲ್ಲು ತೂರಾಟ

ಹತ್ಯೆಗೀಡಾದ ನಾರಾಯಣಸ್ವಾಮಿಯ ಸಂಬಂಧಿ ದೇವರಾಜು ಪತ್ನಿ ಮಂಜುಳ ಎನ್ನುವವರು ಸಾದಹಳ್ಳಿ ಗ್ರಾಮದ ವಾಸಿ ಪ್ರಮೋದ್ ಎನ್ನುವವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಇತ್ತೀಚಿಗೆ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಇದರಿಂದ ಪ್ರಮೋದ್ ಮಂಜುಳರವರ ಮನೆ ಬಳಿ ಆಗಮಿಸಿ ಗಲಾಟೆ ಮಾಡಿದ್ದನಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ  ದಿಬ್ಬೂರಹಳ್ಳಿ ಪೊಲೀಸ್‌ಠಾಣೆಗೆ ದೂರು ಕೊಡಿಸಿದ್ದನಂತೆ.

ಶಿಡ್ಲಘಟ್ಟ: ಗ್ರಾ.ಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಆರೋಪಿಯ ಸಂಬಂಧಿ ಮನೆ ಮೇಲೆ ಕಲ್ಲು ತೂರಾಟ
ಕಾಂಗ್ರೆಸ್ ಮುಖಂಡ ಹಾಗೂ ದಲಿತ ನಾಯಕ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನಾರಾಯಣಸ್ವಾಮಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Aug 25, 2023 | 4:45 PM

ಚಿಕ್ಕಬಳ್ಳಾಪುರ, ಆಗಸ್ಟ್​​ 25: ಕಾಂಗ್ರೆಸ್ ಮುಖಂಡ ಹಾಗೂ ದಲಿತ ನಾಯಕ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯನನ್ನು (Gram Panchayat ex-member, Congress leader) ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ (murder) ಮಾಡಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ (Sidlaghatta) ತಾಲ್ಲೂಕಿನ ಭೈರಗಾನಹಳ್ಳಿ ( Byraganahalli) ಗ್ರಾಮದ ನಿವಾಸಿ ನಾರಾಯಣಸ್ವಾಮಿ ಕೊಲೆಯಾದ ವ್ಯಕ್ತಿ. ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ನಾರಾಯಣಸ್ವಾಮಿ, ರಿಯಲ್ ಎಸ್ಟೆಟ್ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯನಿಮಿತ್ತ ನಿನ್ನೆ ಗುರುವಾರ ಶಿಡ್ಲಘಟ್ಟ ನಗರಕ್ಕೆ ಹೋಗಿ, ವಾಪಸ್ಸು ಸಂಜೆ 7-40ರ ಸಮಯದಲ್ಲಿ ಸ್ವಗ್ರಾಮ ಭೈರನಾಯಕನಹಳ್ಳಿ ಗ್ರಾಮಕ್ಕೆ ಹೊರಟಿದ್ದರು. ತನ್ನದೇ ಓಮಿನಿ ಕಾರಿನಲ್ಲಿ ಹೊರಟಿದ್ದ ನಾರಾಯಣಸ್ವಾಮಿ ಗ್ರಾಮದ ಹೊರವಲಯದಲ್ಲಿ ಕಾರು ನಿಲ್ಲಿಸಿ ಪೋನಿನಲ್ಲಿ ಮಾತನಾಡುತ್ತಿದ್ದ, ಆಗ ಕಾರಿನ ಹಿಂದೆ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರೆಚಿದ್ದಾರೆ. ಆಗ ತಪ್ಪಿಸಿಕೊಂಡು ಹೋಗುತ್ತಿದ್ದ ನಾರಾಯಣಸ್ವಾಮಿಯನ್ನು ಅಟ್ಟಾಡಿಸಿ ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆಗೆ ಹಳೆ ವೈಷಮ್ಯ ಕಾರಣವಾಯಿತ? ನಾರಾಯಣಸ್ವಾಮಿಯ ಸಂಬಂಧಿ ದೇವರಾಜು ಪತ್ನಿ ಮಂಜುಳ ಎನ್ನುವವರು ಸಾದಹಳ್ಳಿ ಗ್ರಾಮದ ವಾಸಿ ಪ್ರಮೋದ್ ಎನ್ನುವವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಇತ್ತೀಚಿಗೆ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಇದರಿಂದ ಪ್ರಮೋದ್ ಮಂಜುಳರವರ ಮನೆ ಬಳಿ ಆಗಮಿಸಿ ಗಲಾಟೆ ಮಾಡಿದ್ದನಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾರಾಯಣಸ್ವಾಮಿ ಪ್ರಮೋದ್‌ಗೆ ಬುದ್ಧಿ ಹೇಳಿ ಆತನ ವಿರುದ್ಧ ದಿಬ್ಬೂರಹಳ್ಳಿ ಪೊಲೀಸ್‌ಠಾಣೆಗೆ ದೂರು ಕೊಡಿಸಿದ್ದನಂತೆ. ಪೊಲೀಸರು ರಾಜಿ-ಪಂಚಾಯ್ತಿ ಮಾಡಿ ಕಳುಹಿಸಿದ್ದರು. ಆಗ ಪ್ರಮೋದ್ ನಾರಾಯಣಸ್ವಾಮಿಗೆ ಅವಾಜ್ ಹಾಕಿ, ಕೊಲೆ ಬೆದರಿಕೆ ಹಾಕಿದ್ದನಂತೆ. ಅದೇ ವಿಚಾರದಲ್ಲಿ ಪ್ರಮೋದ್ ಮತ್ತು ಆತನ ಸಂಗಡಿಗರು ಕೊಲೆ ಮಾಡಿದ್ದಾರೆಂದು ದೂರು ನೀಡಲಾಗಿದೆ.

ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ: ನಾರಾಯಣಸ್ವಾಮಿ ಕೊಲೆ ಪ್ರಕರಣದಲ್ಲಿ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಪ್ರಮೋದ್ ಹಾಗೂ ಆತನ ಸಹಚರ ವೇಣು ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆರೋಪಿ ಸಂಬಂಧಿ ಮನೆಯ ಮೇಲೆ ಕಲ್ಲು ತೂರಾಟ: ಇನ್ನು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮೋದ್ ದೊಡ್ಡಮ್ಮನ ಮಗ ಮಂಜುನಾಥ್ ಮನೆ ಭೈರಗಾನಹಳ್ಳಿ ಗ್ರಾಮದಲ್ಲಿದೆ. ಆದರೆ ಪ್ರಮೋದ್ ಮನೆ ಸಾದಹಳ್ಳಿಯಿದೆ. ಇದರಿಂದ ಮೃತ ನಾರಾಯಣಸ್ವಾಮಿ ಸಂಬಂಧಿಕರು ಮಂಜುನಾಥ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು, ಮನೆಯ ಕಿಟಕಿ, ಗಾಜುಗಳನ್ನು ಹೊಡೆದುಹಾಕಿದ್ದಾರೆ.

ಗ್ರಾಮದಲ್ಲಿ ಉದ್ವಿಗ್ಧ ಪರಿಸ್ಥಿತಿ: ದಲಿತ ಮುಖಂಡ, ಕಾಂಗ್ರೆಸ್ ಮುಖಂಡ, ಗ್ರಾಮಪಂಚಾಯ್ತಿ ಮಾಜಿ ಸದಸ್ಯ ನಾರಾಯಣಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಕಾರಣ ಹಾಗೂ ಕೊಲೆ ಆರೋಪಿತ ಸವರ್ಣೀಯ ಆದ ಕಾರಣ ಗ್ರಾಮದ ದಲಿತ ಸಮುದಾಯ ಹಾಗೂ ನಾರಾಯಣಸ್ವಾಮಿ ಸಂಬಂಧಿಗಳು ಆಕ್ರೋಶಗೊಂಡಿದ್ದು, ಆರೋಪಿತರ ಸಂಬಂಧಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ಧ ಪರಿಸ್ಥಿತಿ ಉಂಟಾಗಿದ್ದು, 4 ಜನ ಸಿಪಿಐ, ಡಿಎಆರ್, ಕೆಎಸ್‌ಆರ್‌ಪಿ ಸೇರಿದಂತೆ ನೂರಾರು ಜನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.

ಶಿಡ್ಲಘಟ್ಟ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ