AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐವರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

ಐದು ಜನ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆರು ಜನ ಅಸ್ವಸ್ಥರಿಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇವರು ಆಂಧ್ರದ ಚಿಲಮತ್ತೂರು ಬಳಿಯ ಮರ್ಕತ್ ಪಲ್ಲಿ ನಿವಾಸಿಗಳಾಗಿದ್ದಾರೆ. ಇನ್ನು ಘಟನೆಗೆ ಗಂಡ ಗೋಪಾಲ ಎಂಬಾತನಿಂದ ಕಿರುಕುಳ ಆರೋಪ ಕೇಳಿಬಂದಿದೆ.

ಐವರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ
ಪ್ರಾತಿನಿಧಿಕ ಚಿತ್ರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 27, 2024 | 9:01 PM

Share

ಚಿಕ್ಕಬಳ್ಳಾಪುರ, ಮಾ.27: ಐದು ಜನ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆರು ಜನ ಅಸ್ವಸ್ಥರಿಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇವರು ಆಂಧ್ರದ ಚಿಲಮತ್ತೂರು ಬಳಿಯ ಮರ್ಕತ್ ಪಲ್ಲಿ ನಿವಾಸಿಗಳಾಗಿದ್ದಾರೆ. ತಾಯಿ ಅನಿತಾ ಹಾಗೂ ಆಕೆಯ ಐದು ಜನ ಹೆಣ್ಣು ಮಕ್ಕಳಾದ ಲಾವಣ್ಯ (11), ಧರಣಿ (9), ಕಾವ್ಯ (8), ರಕ್ಷಿತಾ (5), ಶ್ರೀವಲ್ಲಿ (2) ಅವರನ್ನು ಮೊದಲು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಗರ್ಭಿಣಿಯಾಗಿರುವ ತಾಯಿ ಅನಿತಾ ಅವರಿಗೆ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಡ ಗೋಪಾಲ ಎಂಬಾತನಿಂದ ಕಿರುಕುಳ ಆರೋಪ ಕೇಳಿಬಂದಿದೆ.

ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ತುಮಕೂರು: ಜಿಲ್ಲೆಯ ಶಿರಾದ ಸರ್ಕಾರಿ ITI ಕಾಲೇಜು ಬಳಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಮನು(17)ಕೊನೆಯುಸಿರೆಳೆದಿದ್ದಾರೆ. ಶಿರಾ ತಾಲೂಕಿನ ಮದಲೂರು ಬಳಿಯ ದಾಸರಹಳ್ಳಿ ನಿವಾಸಿಯಾದ ಮನು, ಶಿರಾದ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಇದೀಗ ಶಿರಾದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮೃತ ದೇಹ ರವಾನೆ ಮಾಡಲಾಗಿದೆ. ಘಟನೆ ಕುರಿತು ಕಾಲೇಜು ಪ್ರಾಂಶುಪಾಲರ ನಿರ್ಲಕ್ಷವೇ ಕಾರಣವೆಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಹೆಣ್ಣುಮಕ್ಕಳ ಹೆತ್ತಿದ್ದಕ್ಕೆ ನಿತ್ಯ ಚಿತ್ರಹಿಂಸೆ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ

ಎಣ್ಣೆ ಪಾರ್ಟಿ ಮಧ್ಯೆ ಶುರುವಾದ ಜಗಳದಲ್ಲಿ ವ್ಯಕ್ತಿಯನ್ನು ಕೊಂದ ಗೆಳೆಯರು

ಬೆಂಗಳೂರು: ಎಣ್ಣೆ ಪಾರ್ಟಿ ಮಧ್ಯೆ ಶುರುವಾದ ಜಗಳದಲ್ಲಿ ವ್ಯಕ್ತಿಯೋರ್ವನನ್ನ ಗೆಳೆಯರೇ ಕೊಲೆ ಮಾಡಿ, ಪೊಲೀಸ್ ಠಾಣೆಗೆ ಬಂದು ಯಾರೋ ಕೊಲೆ ಮಾಡಿದ್ದಾರೆಂದು ದೂರು ನೀಡಿದ ಘಟನೆ ನಡೆದಿದೆ. ಸ್ಥಳಕ್ಕೆ ಬಂದು ಪರಿಶೀಲನೆ ವೇಳೆ ಗೆಳೆಯರ ನಾಟಕ ಬಯಲಾಗಿದೆ. ರಾಜ್ ಕುಮಾರ್ (೩೬) ಕೊಲೆಯಾದ ವ್ಯಕ್ತಿ. ನಾಗವಾರದ ಮನೆಯಲ್ಲಿ ನಿನ್ನೆ ಸಂಜೆ ನಡೆದಿದೆ. ನಿನ್ನೆ ರಾಜ್ ಕುಮಾರ್ ತನ್ನ ಇಬ್ಬರು ಗೆಳೆಯರ ಜೊತೆ ಪಾರ್ಟಿ ಮಾಡಿದ್ದ. ಸಂಜೆವರೆಗೂ ಪಾರ್ಟಿ ಮಾಡಿದವರ ನಡುವೆ ಗಲಾಟೆ ನಡೆದು, ರಾಡ್ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬಳಿಕ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ವೇಳೆ ಕೊಲೆಯ ಅಸಲಿ ಸಂಗತಿ ಬಯಲಾಗಿದೆ. ಕೊಲೆ ಸಂಬಂಧ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Wed, 27 March 24