AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಡೀಲ್ ವಿಷಯ ಸಿಟಿ ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಜೊತೆ ನಡೆದಿತ್ತಾ ಮಾತುಕತೆ?

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೆಸರಿನ ಬೆನ್ನಲ್ಲೇ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೆಸರು ಕೇಳಿಬಂದಿದೆ. ಆದರೆ, ವಂಚನೆ ವಿಚಾರ ತಿಳಿದ ಸುಲಿಬೆಲೆ ಅವರು ಚುನಾವಣೆ ನಂತರ ಅದನ್ನು ಸಿಟಿ ರವಿ ಗಮನಕ್ಕೆ ತಂದಿದ್ದರು. ಈ ವೇಳೆ ಸಿಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಇದ್ದರು.

ಚೈತ್ರಾ ಕುಂದಾಪುರ ಡೀಲ್ ವಿಷಯ ಸಿಟಿ ರವಿಗೆ ಮೊದಲೇ ಗೊತ್ತಿತ್ತಾ? ಸೂಲಿಬೆಲೆ ಜೊತೆ ನಡೆದಿತ್ತಾ ಮಾತುಕತೆ?
ಸಿಟಿ ರವಿ ಮತ್ತು ಚಕ್ರವರ್ತಿ ಸೂಲಿಬೆಲೆ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Rakesh Nayak Manchi|

Updated on:Sep 18, 2023 | 2:58 PM

Share

ಚಿಕ್ಕಮಗಳೂರು, ಸೆ.18: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ (Chaitra Kundapur) ಮತ್ತು ಗ್ಯಾಂಗ್ ವಂಚನೆ ಎಸಗಿದ ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೆಸರಿನ ಬೆನ್ನಲ್ಲೇ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೆಸರು ಕೇಳಿಬಂದಿದೆ. ಆದರೆ, ವಂಚನೆ ವಿಚಾರ ತಿಳಿದ ಸುಲಿಬೆಲೆ ಅವರು ಚುನಾವಣೆ ನಂತರ ಅದನ್ನು ಸಿಟಿ ರವಿ ಗಮನಕ್ಕೆ ತಂದಿದ್ದರು. ಇದನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಹೇಳುವಂತೆ ಸಿಟಿ ರವಿ ಚಕ್ರವರ್ತಿ ಅವರಿಗೆ ತಿಳಿಸಿದ್ದಾಗಿ ತಿಳಿದುಬಂದಿದೆ. ಸಿಟಿ ರವಿ (CT Ravi) ಅವರು ಆಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಇದ್ದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಚುನಾವಣೆ ಮುಗಿದ ಮೇಲೆ ಪೋನ್​ನಲ್ಲಿ ಮಾತನಾಡಿದ್ದರು. ಹಣ ಕೊಡುವುದು ನಿಮಗೆ ಗೊತ್ತಿತ್ತಾ ಎಂದು ಚರ್ಕವರ್ತಿ ಅವರನ್ನು ಕೇಳಿದಾಗ ಗೊತ್ತಿಲ್ಲ ಅಂತ ಹೇಳಿದ್ದರು. ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಕ್ರವರ್ತಿ ಸೂಲಿಬೆಲೆಯವರಿಗೆ ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದ ಚೈತ್ರಾ ಕುಂದಾಪುರ

ಹಣಕ್ಕಾಗಿ ಟಿಕೆಟ್ ಕೊಡುತ್ತಾರೆ ಅಂತಾ ಭಾವಿಸಿದ್ದು ತಪ್ಪು. ಒಂದನ್ನ ಮುಚ್ಚಿಟ್ಟರೆ ನಾಳೆ ಸ್ವಭಾವವಾಗಿ ಬೆಳೆಯಬಹುದು. ಮೋಸ ಹೋಗುವವರಿಗೂ ಪಾಠ ಅಗಬೇಕು. ಮೋಸ ಮಾಡುವವರಿಗೂ ಪಾಠ ಅಗಬೇಕು ಎಂದರು.

ಗಗನ್ ಕಡೂರು ಯಾವುದೇ ದೂರು ನೀಡಿಲ್ಲ

ಉದ್ಯಮಿ ಗೋವಿಂದಬಾಬು ವಿರುದ್ಧ ಗಗನ್​ ಕಡೂರು ದೂರು ವಿಚಾರವಾಗಿ ಸ್ಪಷ್ಟನೆ ನೀಡಿದ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ, ಪೊಲೀಸರಿಗೆ ಗಗನ್ ಕಡೂರು ಯಾವುದೇ ದೂರು ನೀಡಿಲ್ಲ ಎಂದರು. ಟಿವಿ9 ಜೊತೆ ಮಾತನಾಡಿದ ಅವರು, ಇಲ್ಲಿಯವರೆಗೆ ಯಾವುದೇ ದೂರು ಬಂದಿಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 18 September 23

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ