AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ವಂಚನೆ ಪ್ರಕರಣ: ಚೈತ್ರಾ ಕುಂದಾಪುರಳ ಮತ್ತೊಂದು ಆಡಿಯೋ ಬಹಿರಂಗ

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಮತ್ತಾಕೆಯ ಗ್ಯಾಂಗ್ ಸಂಬಂಧ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತಿವೆ. ಇದೀಗ ಚೈತ್ರಾ ಹಾಗೂ ಪ್ರಸಾದ್ ನಡುವೆ ನಡೆದಿರುವ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಮಾಡುತ್ತಿರುದು ಮೋಸ, ದೇವರ ಪ್ರಾರ್ಥನೆ ಮಾಡಬೇಕಂತೆ.

ಟಿಕೆಟ್ ವಂಚನೆ ಪ್ರಕರಣ: ಚೈತ್ರಾ ಕುಂದಾಪುರಳ ಮತ್ತೊಂದು ಆಡಿಯೋ ಬಹಿರಂಗ
ಚೈತ್ರಾ ಕುಂದಾಪುರ, ಗೋವಿಂದ ಬಾಬು ಆಪ್ತ ಪ್ರಸಾದ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 17, 2023 | 3:58 PM

Share

ಚಿಕ್ಕಮಗಳೂರು, ಸೆಪ್ಟೆಂಬರ್​​ 17: ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ (Chaitra Kundapura) ಮತ್ತಾಕೆಯ ಗ್ಯಾಂಗ್ ಸಂಬಂಧ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತಿವೆ. ಇತ್ತೀಚೆಗೆ ಚೈತ್ರಾ ಕುಂದಾಪುರ ಮತ್ತು ಗೋವಿಂದ ಬಾಬು ಆಪ್ತ ಪ್ರಸಾದ್​​ ನಡುವೆ ನಡೆದಿದ್ದ ಸಂಭಾಷಣೆಯ ಆಡಿಯೋ ವೈರಲ್​ ಆಗಿತ್ತು. ಇದೀಗ ಚೈತ್ರಾ ಹಾಗೂ ಪ್ರಸಾದ್ ನಡುವೆ ನಡೆದಿರುವ ಮತ್ತೊಂದು ಆಡಿಯೋ ಬಹಿರಂಗವಾಗಿದೆ.

ಪ್ರಸಾದ್​ ಜೊತೆ ಚೈತ್ರಾ ಕುಂದಾಪುರ ಮಾತನಾಡಿರುವ ಸಂಭಾಷಣೆ

ಅಣ್ಣಾ ಬೆಳಿಗ್ಗೆ ಫೋನ್ ಮಾಡಿದ್ದರು, ಗಗನ ಹತ್ತಿರವು ಮಾತನಾಡಿದ್ದಾರೆ. ಟಿಕೆಟ್ ವಿಚಾರವಾಗಿ ಡೆಲ್ಲಿಯಿಂದ ಮಾತುಕತೆ ಪೂರ್ಣಗೊಂಡಿದೆ. ಡೆಲ್ಲಿಯಿಂದ ಫೋನ್ ಬಂದಿದೆ ಅಂದರೆ ಕೆಲಸ ಆಗಿದೆ ಎಂದರ್ಥ. ಡೆಲ್ಲಿಯಿಂದ ಫೋನ್ ಮಾಡಿದರೆ ಗೋವಿಂದ ಪೂಜಾರಿಗೆ ಪಿಕ್ ಮಾಡಲು ಹೇಳು. ಸ್ವಾಮೀಜಿ ಪೂಜೆಯಲ್ಲಿದ್ದಾರೆ ಮತ್ತೆ ಮಾತನಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುವ ಸರ್ವೇ ಕಾರ್ಯವನ್ನು ನಾವು ನೋಡಿಕೊಂಡರೆ ಸಾಕು. ದೇವರ ಮೇಲೆ ಭಾರ ಹಾಕಿ ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ ಎಂದಿದ್ದಾರೆ.

ಚೈತ್ರಾ ಕಾರು ಬಾಗಲಕೋಟೆಯಲ್ಲಿ ಪತ್ತೆ

ಚೈತ್ರಾ ಡೀಲ್ ಲಿಂಕ್ ಈಗ ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯ ಮುಧೋಳ ನಗರದಲ್ಲಿ ಕಿಯಾ ಕಾರನ್ಸ್ ಕಾರು ಪತ್ತೆಯಾಗಿದೆ. ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿ ಕಾರು ಇದ್ದು, 2023 ರಲ್ಲೇ ಖರೀದಿ ಮಾಡಲಾಗಿದೆ. ಕಿಯಾ ಕಾರು ಮುಧೋಳ‌ ನಗರದ ಹಿಂದು ಕಾರ್ಯಕರ್ತ ಕಿರಣ ಗಣಪ್ಪಗೋಳ ಡ್ರೈವಿಂಗ್ ಸ್ಕೂಲ್​ ನಲ್ಲಿ ಪತ್ತೆಯಾಗಿದೆ. ಕಿರಣ ಮುಧೋಳ ನಗರದ ‌ಮಲ್ಲಮ್ಮ ನಗರ ನಿವಾಸಿಯಾಗಿದ್ದಾನೆ. ನಗರದಲ್ಲಿ ತಿಲಕ್ ಪೌಂಡೇಶನ್​ನ ಸದಸ್ಯ ಕೂಡ ಆಗಿದ್ದಾನೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಹಣವೇ ಪ್ರಧಾನ ಆಗಿದ್ದರೆ ಬೈಂದೂರು, ಸುಳ್ಯದಲ್ಲಿ ಬಡ ಕಾರ್ಯಕರ್ತರಿಗೆ ಟಿಕೆಟ್ ಸಿಗುತ್ತಿರಲಿಲ್ಲ: ಸಿಟಿ ರವಿ

ಆ ಮೂಲಕ ಸಾಮಾಜಿಕ‌ ಕಾರ್ಯ ಮಾಡುತ್ತಾನೆ. ಹಿಂದುಪರ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದು, ಹಿಂದೆ‌‌ ಮುಧೋಳ ನಗರ ಹಾಗೂ‌ ಮುಧೋಳ ತಾಲ್ಲೂಕಿನ ಬರಗಿ ಗ್ರಾಮಕ್ಕೆ ಚೈತ್ರಾ ಕುಂದಾಪುರ ಅವರನ್ನು ಕರೆಸಿದ್ದ. ಇದರಿಂದ ಇಬ್ಬರ ಮಧ್ಯೆ ಪರಿಚಯ ಸಂಪರ್ಕ ಏರ್ಪಟ್ಟಿತು. ಸೆಪ್ಟೆಂಬರ್ 9 ರಂದು ಚೈತ್ರಾಳ ಪಿಎ ಶ್ರೀಕಾಂತ್ ಕಿರಣಗೆ ಕರೆ ಮಾಡಿ ಕಾರು ತೆಗೆದುಕೊಂಡು ಹೋಗಲು ತಿಳಿಸಿದ್ದ. ಆ ಪ್ರಕಾರ‌‌ ಮಹಾರಾಷ್ಟ್ರದ ಸೊಲ್ಲಾಪುರ ‌ನಗರದ ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದ್ದ ಕಾರನ್ನು ಕಿರಣ ತಂದು ಮುಧೋಳ ನಗರದಲ್ಲಿ ಇಟ್ಕೊಂಡಿದ್ದ. ಕರೆ ಆಧಾರದ ಮೇಲೆ ಈ ಬಗ್ಗೆ ತಿಳಿದುಕೊಂಡ ಸಿಸಿಬಿ ಪೊಲೀಸರು ನಿನ್ನೆಯೇ ಬಂದು ಕಾರು ಜಪ್ತಿ‌ ಮಾಡಿಕೊಂಡು ಕಿರಣನನ್ನು‌ ವಶಕ್ಕೆ ಪಡೆದು ವಿಚಾರಣೆ ‌ನಡೆಸಿದ್ದಾರೆ.

ಇದನ್ನೂ ಓದಿ: ಕೋಟಿ-ಕೋಟಿ ಒಡತಿ ಚೈತ್ರಾ ಕುಂದಾಪುರ, ಈಕೆಯ ಖಜಾನೆ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್

ಈ ಬಗ್ಗೆ ಮಾತಾಡಿದ ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ, ಚೈತ್ರಾ ಕುಂದಾಪುರ ಡೀಲ್ ಬರೀ ಒಂದು ಜಾಗಕ್ಕೆ ಸೀಮಿತ ಅಲ್ಲ. ಇದರಲ್ಲಿ ಬರೀ ಚೈತ್ರಾ ಮಾತ್ರ ಇಲ್ಲ. ಬಿಜೆಪಿಯ ನಾಯಕರೊಬ್ಬರು ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಎಲ್ಲಿ, ಮುಧೋಳ ಎಲ್ಲಿ. ಆಕೆಯ ಸಲಹೆ‌ ಮೇರೆಗೆ ಮುಧೋಳದಲ್ಲಿ ಕಾರು ತಂದಿಟ್ಟುಕೊಂಡಿದ್ದಾನೆ.

ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಚೈತ್ರಾ ಮಾಡಿದ್ದಾಳೆ. ಇದರಲ್ಲಿ ಒಂದು ಗ್ಯಾಂಗ್ ಇದೆ. ಕಿರಣ ಕಾರು ತಂದಿದ್ದಾನೆಂದರೆ ಚೈತ್ರಾ ಜೊತೆ ಲಿಂಕ್ ಇದ್ದೆ ಇರುತ್ತೆ. ಇದರಲ್ಲಿ ಬಿಜೆಪಿಯ ಒಬ್ಬ ವ್ಯಕ್ತಿಯೂ ಹಿಂದೆ ಇದ್ದಾನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:45 pm, Sun, 17 September 23