ಆಸ್ತಿ ಆಸೆಗೆ ನಕಲಿ ದಾಖಲೆ ಸೃಷ್ಟಿ; ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿ ಯಡವಟ್ಟು ಮಾಡಿದ ಅಧಿಕಾರಿಗಳು

| Updated By: preethi shettigar

Updated on: Feb 04, 2022 | 8:59 AM

ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಸಂಬಂಧಿಕರು ಯತ್ನಿಸಿದ್ದು, ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.

ಆಸ್ತಿ ಆಸೆಗೆ ನಕಲಿ ದಾಖಲೆ ಸೃಷ್ಟಿ; ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿ ಯಡವಟ್ಟು ಮಾಡಿದ ಅಧಿಕಾರಿಗಳು
ಸಾರಮ್ಮ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ
Follow us on

ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಸಂಬಂಧಿಕರು ಮರಣ ಪತ್ರ ಸೃಷ್ಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ. ವೃದ್ಧೆಯ ಮರಣ ಪತ್ರ(Death certificate) ಸೃಷ್ಟಿಗೆ ಮುಂದಾದ ಸಂಬಂಧಿಕರನ್ನು(Relatives) ವಿಚಾರಿಸದೆ ಹಾಗೂ ವೃದ್ಧೆ ಬದುಕಿದ್ದಾರಾ ಅಥವಾ ಸಾವನ್ನಪ್ಪಿದ್ದಾರಾ ಎಂದು ಪರಿಶೀಲಿಸದೆ ತಾಲೂಕು ಅಧಿಕಾರಿಗಳು( Taluk officers) ಕೂಡ ಯಡವಟ್ಟು ಮಾಡಿದ್ದಾರೆ. ಬದುಕಿರುವಾಗಲೇ ವೃದ್ಧೆ ಹೆಸರಿಗೆ ಮರಣ ಪತ್ರ, ವಂಶವೃಕ್ಷ ನೀಡಿದ್ದಾರೆ.

ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಸಂಬಂಧಿಕರು ಯತ್ನಿಸಿದ್ದು, ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.

ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ ಒಂದು ಎಕರೆ 16 ಗುಂಟೆ ಜಮೀನಿಗಾಗಿ ಸಾರಮ್ಮ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಜಮೀನು ಕೊಡುವುದಿಲ್ಲ ಎಂದು ಇ.ಟಿ.ಬಾಬು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ನ್ಯಾಯ ಒದಗಿಸುವಂತೆ ಟಿವಿ9 ಡಿಜಿಟಲ್​ ಬಳಿ ವೃದ್ಧೆ ತಮ್ಮ ಆಳಲು ತೋಡಿಕೊಂಡಿದ್ದಾರೆ.

ಈ ಹಿಂದೆಯೂ ಕೂಡ ಇಂತಹದ್ದೇ ಘಟನೆಯೊಂದು ಕೋಲಾರದಲ್ಲಿ ನಡೆದಿತ್ತು.

ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ!

ವ್ಯಕ್ತಿ ಸತ್ತ ಮೇಲೆ ನೀಡುವ ಮರಣ ಪ್ರಮಾಣಪತ್ರ ಅಧಿಕಾರಿಗಳ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬನಿಗೆ ಜೀವಂತ ಇದ್ದಾಗಲೇ ಸಿಕ್ಕಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕು ಕಚೇರಿಯಲ್ಲಿ ನಡೆಯಬಾರದ್ದೊಂದು ಘಟನೆ ನಡೆದು ಹೋಗಿದೆ. ಇದರಲ್ಲಿ ಅಧಿಕಾರಿಗಳ ಎಡವಟ್ಟು ಅನ್ನೋದು ಒಂದು ಅಂಶವಾದರೆ, ತಾಲ್ಲೂಕು ಕಚೇರಿಯಲ್ಲಿ ಹಣ ಕೊಟ್ಟರೆ ಯಾರನ್ನು ಬೇಕಾದರೂ ಸಾಯಿಸಬಹುದು, ಯಾರನ್ನು ಬೇಕಾದ್ರು ಬದುಕಿಸಬಹುದು ಅನ್ನೋದು ಸಾಬೀತಾಗಿದೆ. ಹೌದು. ಮುಳಬಾಗಿಲು ತಾಲೂಕಿನ ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಇನ್ನೂ ಜೀವಂತವಾಗಿ ಇರುವಾಗಲೇ ಅವರನ್ನು ದಾಖಲೆಗಳಲ್ಲಿ ಸಾಯಿಸಲಾಗಿತ್ತು.

ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್​ ಎಂಬುವವರು ತಮಗಿರುವ ಒಂದಷ್ಟು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಅದರ ಜೊತೆಗೆ ಸಣ್ಣದೊಂದು ಅಂಗಡಿ ಹಾಕಿಕೊಂಡು ಜೀವನ ಮಾಡಿಕೊಂಡು ಬದುಕುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಕಳೆದ 2021 ನೇ ಜುಲೈ 7 ರಂದು ರೈತ ಶಿವರಾಜ್​ ಮರಣ ಹೊಂದಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಅದು ಶಿವರಾಜ್​ ಅವರಿಗೆ ಗೊತ್ತಾಗಿಲ್ಲ, ಶಿವರಾಜ್ ಕುಟುಂಬ ಎಂ.ಹೊಸಹಳ್ಳಿ ಗ್ರಾಮದ ಹೊರಗೆ ಸಣ್ಣದೊಂದು ಚಿಲ್ಲರೆ ಅಂಗಡಿ‌ ಹಾಕಿಕೊಂಡು‌ ಜೀವನ ಮಾಡುತ್ತಿದ್ದಾರೆ. ಜೊತೆಗೆ ಗ್ರಾಮದ ಯಾರ ವಿಷಯಕ್ಕೂ ಹೋಗದೆ ತಾವಾಯಿತು ತಮ್ಮ ಬದುಕುಯಾಯಿತೆಂದು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿದೆ. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿದೆ. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ:
ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಪ್ರಕರಣ; ಭೈರತಿ ಬಸವರಾಜ್​, ಶಂಕರ್ ವಿರುದ್ಧದ ಸಮನ್ಸ್‌ಗೆ ತಡೆ ಮುಂದುವರಿಕೆ

ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?

Published On - 8:51 am, Fri, 4 February 22