ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ; DRFO ಸಸ್ಪೆಂಡ್

ಕಳಸ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್ ಲೈನ್ ಟಿಕೆಟ್ ನಕಲು ಮಾಡಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ; DRFO ಸಸ್ಪೆಂಡ್
ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ; DRFO ಸಸ್ಪೆಂಡ್
Follow us
| Updated By: ಆಯೇಷಾ ಬಾನು

Updated on:Aug 27, 2024 | 9:18 AM

ಚಿಕ್ಕಮಗಳೂರು, ಆಗಸ್ಟ್​.27: ಕಾಫಿನಾಡಿನಲ್ಲಿ ಟ್ರೆಕ್ಕಿಂಗ್ ನಕಲಿ ಟಿಕೆಟ್ ಮಾರಾಟ ( Trekking Ticket)  ಜಾಲ ಪತ್ತೆಯಾಗಿದೆ. ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ DRFOರನ್ನು ಸಸ್ಪೆಂಡ್ (DRFO suspend) ಮಾಡಲಾಗಿದೆ. ನಕಲಿ ಟಿಕೆಟ್ ಸೃಷ್ಟಿಸಿ ಸಾವಿರಾರು ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತಿತ್ತು. ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್ ಲೈನ್ ಟಿಕೆಟ್ ನಕಲು ಮಾಡಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಚಂದನ್ ಅವರು ಈಗಾಗಲೇ ಸಾವಿರಾರು ಟ್ರೆಕ್ಕಿಂಗ್ ಟಿಕೆಟ್ ನಕಲು ಮಾಡಿ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಚಾರಣಕ್ಕೆ ಅವಕಾಶ ನೀಡದೆ, ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಅನ್ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿದೆ. ಅನ್ಲೈನ್ ಬುಕ್ಕಿಂಗ್ ಮಾಡಿಕೊಂಡು ಬಂದರೂ ಅವಕಾಶ ನೀಡುತ್ತಿಲ್ಲ ಎಂದು DRFO ಚಂದನ್ ವಿರುದ್ಧ ಪ್ರವಾಸಿಗರು ನಿರಂತರ ದೂರು ನೀಡಿದ್ದು ವಿಡಿಯೋ ಸಮೇತ ದೂರು ನೀಡಿದ್ದರು.

ಕಳಸ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಾಜೆ, ಬಲ್ಲಾಳರಾಯನ ದುರ್ಗಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರವಾಸಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದರು. ಸದ್ಯ ಇದೀಗ ಮೂಡಿಗೆರೆ ತಾಲೂಕಿನ ಜಾವಳಿ ಅರಣ್ಯ ಇಲಾಖೆ ಶಾಖೆಯ DRFO ಆಗಿದ್ದ ಚಂದನ್ ಅವರನ್ನು ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ CCF ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಕಲಿ ಟಿಕೆಟ್ ಜಾಲದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ ನವೋದಯ ವಿದ್ಯಾಲಯದಲ್ಲಿ ರ‍್ಯಾಗಿಂಗ್‌: ಕಟ್ಟಿಗೆ, ಬೆಲ್ಟ್​​ನಿಂದ ಹಲ್ಲೆ ಮಾಡಿ ವಿಕೃತಿ ಮೆರೆದ ಸೀನಿಯರ್ ವಿದ್ಯಾರ್ಥಿಗಳು

ಜಿಲ್ಲಾ ಪಂಚಾಯಿತಿ AEE, AE ಲೋಕಾಯುಕ್ತ ಬಲೆಗೆ

ತುಮಕೂರು ಜಿಲ್ಲಾ ಪಂಚಾಯಿತಿ ಎಇಇ, ಇಬ್ಬರು ಎಇಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1.5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳೂ ದಾಳಿ ಮಾಡಿದ್ದಾರೆ. ಇನ್ನು ಚಿಕ್ಕನಾಯಕನಹಳ್ಳಿ ಕಚೇರಿಯಲ್ಲಿ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗದ ಎಇಇ ಉಮಾಮಹೇಶ್, ಶಶಿಕುಮಾರ್ ಹಾಗೂ ಕಿರಣ್ ಕುಮಾರ್ ಬಲೆಗೆ ಬಿದ್ದಿದ್ದಾರೆ. ಜಲಜೀವನ್ ಮಿಷನ್ ಕಾಮಗಾರಿ ಬಿಲ್ ಮಂಜೂರಾತಿಗಾಗಿ ಗುತ್ತಿಗೆದಾರ ಚಿಕ್ಕೇಗೌಡ ಅನ್ನೋರಿದಂದ 1.5 ಲಕ್ಷ ಲಂಚ ಸ್ವೀಕರಿಸುತ್ತಿದ್ರು. ಕಚೇರಿಯಲ್ಲಿ ಲಂಚ ಪಡೆವಾಗ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ಉಮಾಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:17 am, Tue, 27 August 24

ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್