ಕೊಪ್ಪಳ ನವೋದಯ ವಿದ್ಯಾಲಯದಲ್ಲಿ ರ‍್ಯಾಗಿಂಗ್: ಬೆಲ್ಟ್ನಿಂದ ಹಲ್ಲೆ ಮಾಡಿದ ಸೀನಿಯರುಗಳು – ಸಿಬ್ಬಂದಿ, ಪ್ರಿನ್ಸಿಪಾಲ್ ಮೌನ ಮೌನ
ಕೊಪ್ಪಳದ ಜವಾಹರ ನವೋದಯ ವಿದ್ಯಾಲಯದಲ್ಲಿ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ, ಕಟ್ಟಿಗೆ, ಬೆಲ್ಟ್ನಿಂದ ಹಲ್ಲೆ ನಡೆಸಿದ್ದು ಕೆಲವರಿಗೆ ಮರ್ಮಾಂಗಕ್ಕೆ ಒದ್ದು ವಿಕೃತಿ ಮರೆದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಘಟನೆ ಸಂಬಂಧ ಪೋಷಕರು ಸಂಸದರಿಗೆ ದೂರು ನೀಡಿದ್ದು ಡಿಸಿಗೂ ದೂರು ನೀಡಲಿದ್ದಾರೆ.
ಕೊಪ್ಪಳ, ಆಗಸ್ಟ್.27: ರ‍್ಯಾಗಿಂಗ್ (Raging) ಪಿಡುಗು ಮತ್ತೆ ತಲೆ ಎತ್ತಿದೆಯಾ ಎಂಬ ಅನಮಾನ ಕಾಡುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಕೊಪ್ಪಳದ ನವೋದಯ ರೆಸೆಡೆನ್ಸಿಷಯಲ್ ಸ್ಕೂಲಿನಲ್ಲಿ (Jawahar Navodaya Vidyalaya) ಇಂತಹ ಪೈಷಾಚಿಕ ಕೃತ್ಯವೊಂದು ನಡೆದಿದೆ. 80-90ರ ದಶಕದಲ್ಲಿ ಅಮಾನುಷವಾಗಿ ನಡೆಯುತ್ತಿದ್ದ ಈ ಕುಕೃತ್ಯಗಳು ಇತ್ತೀಚೆಗೆ ಕಡಿಮೆಯಾಗಿದ್ದವು. ಕಾನೂನುಕ್ರಮಗಳು ಬಿಗಿಗೊಂಡಿದ್ದವು. ಆದರೆ ಪ್ರತಿಷ್ಠಿತ ನವೋದಯ ಸ್ಕೂಲಿನಲ್ಲಿ ಸಾಮೂಹಿಕ ರ‍್ಯಾಗಿಂಗ್ ನಡೆದಿರುವುದು ಆತಂಕ ತಂದೊಡ್ಡಿದೆ.
ಜಿಲ್ಲೆಯ ಕುಕನೂರು ಪಟ್ಟಣದ ಬಳಿಯಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ರ‍್ಯಾಗಿಂಗ್ ನಡೆದಿರುವ ಆರೋಪ ಕೇಳಿ ಬಂದಿದೆ. ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. PU ವಿದ್ಯಾರ್ಥಿಗಳು 60ಕ್ಕೂ ಅಧಿಕ ಹೈಸ್ಕೂಲ್ ವಿದ್ಯಾರ್ಥಿಗಳ (Students) ಮೇಲೆ ಹಲ್ಲೆ (Assault) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಟ್ಟಿಗೆ, ಬೆಲ್ಟ್ನಿಂದ ಹಲ್ಲೆ ನಡೆಸಿದ್ದು ಕೆಲವರಿಗೆ ಮರ್ಮಾಂಗಕ್ಕೆ ಒದ್ದು ವಿಕೃತಿ ಮರೆದಿದ್ದಾರೆ ಎನ್ನಲಾಗುತ್ತಿದೆ. ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ವಿಚಾರ ತಿಳಿಸಿದರೆ ಸುಮ್ಮನೆ ಬಿಡಲ್ಲ ಎಂದು ಬೆದರಿಕೆ
ಆಗಸ್ಟ್ 20 ರಂದು ಕ್ಷುಲ್ಲಕ ಕಾರಣಕ್ಕೆ ಜೂನಿಯರ್ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಸೀನಿಯರ್ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಪಾಲಕರಿಗೆ, ಶಿಕ್ಷಕರಿಗೆ ಹೇಳಿದ್ರೆ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲಾ ಅಂತ ಬೆದರಿಕೆ ಕೂಡ ಹಾಕಿದ್ದಾರೆ. ಹಲ್ಲೆಯಿಂದ ನೊಂದ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿಗೆ ಈ ವಿಚಾರ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ಪ್ರಾಂಶುಪಾಲರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ.
ಪಿಯು ವಿದ್ಯಾರ್ಥಿಗಳ ಪುಂಡಾಟಕ್ಕೆ ಕಡಿವಾಣ ಹಾಕಿಲ್ಲ. ಹೀಗಾಗಿ ಪ್ರಾಂಶುಪಾಲರು, ಸಿಬ್ಬಂದಿಯನ್ನು ಬದಲಾಯಿಸುವಂತೆ ಹಾಗೂ ಹಲ್ಲೆ ನಡೆಸಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲದಿದ್ದರೆ ಶಾಲೆ ಮುಂದೆ ಧರಣಿ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಘಟನೆ ಬಗ್ಗೆ ಪೋಷಕರು ಸಂಸದ ರಾಜಶೇಖರ್ ಹಿಟ್ನಾಳ್ಗೆ ದೂರು ನೀಡಿದ್ದು ಇದೀಗ ಕೊಪ್ಪಳ ಜಿಲ್ಲಾಧಿಕಾರಿಗೆ ದೂರು ನೀಡಲು ಪೋಷಕರು ಮುಂದಾಗಿದ್ದಾರೆ.
ಇದನ್ನೂ ಓದಿ: ತುಮಕೂರು: ಬುಳಸಂದ್ರ ಗ್ರಾಮದಲ್ಲಿ ವಾಂತಿ ಭೇದಿಯಿಂದ ಮೂವರು ಸಾವು
ನಡುರೋಡಲ್ಲೇ ಪುಂಡರ ಮಾರಾಮಾರಿ
ಬೆಂಗಳೂರಿನ ಬಾಣಸವಾಡಿಯಲ್ಲಿ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ನಡುರಸ್ತೆಯಲ್ಲಿ ಶೋಯಬ್ ಅನ್ನೋನ ಮೇಲೆ ಉಲ್ಟಾ ಲಾಂಗ್ ಬೀಸಿ ಹಲ್ಲೆ ನಡೆಸಲಾಗಿದೆ. ದಾವೂದ್ಗೆ ಶೋಯಬ್ 1.7 ಲಕ್ಷ ರೂಪಾಯಿ ನೀಡದೆಯೆ ಸತಾಯಿಸುತ್ತಿದ್ನಂತೆ. ಪೀಡಿಸುತ್ತಿದ್ದ ದಾವೂದ್ ಮೇಲೆ ಲಾಂಗ್ನಿಂದ ಅಟ್ಯಾಕ್ ಮಾಡಲು ಶೋಯಬ್ ಬಂದಿದ್ದ. ಈ ವೇಳೆ ಶೋಯಬ್ನಿಂದ ಲಾಂಗ್ ಕಸಿದು ದಾವೂದ್ & ಗ್ಯಾಂಗ್ ದಾಳಿ ಮಾಡಿದೆ. ಬಾಣಸವಾಡಿ ಪೊಲೀಸರು 6 ಜನರನ್ನ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:39 am, Tue, 27 August 24