ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸುವ ಶಕ್ತಿ ಸಿರಿಮನೆ ಜಲಪಾತಕ್ಕಿದೆ
ಸಿರಿಮನೆ ಫಾಲ್ಸ್ ಶೃಂಗೇರಿಯಿಂದ18 ಕಿ.ಮೀ ದೂರವಿದೆ. ಒಮ್ಮೆ ಈ ಸ್ಥಳಕ್ಕೆ ತೆರಳಿದರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತದೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸುವ ಶಕ್ತಿ ಈ ಜಲಪಾತಕ್ಕಿದೆ.
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಣಸಿಗುವ ರಮಣೀಯ ಜಲಪಾತಗಳಿಗೇ ಲೆಕ್ಕವೇ ಇಲ್ಲ. ಹಿಡಿದ ದಾರಿಯಲ್ಲೆಲ್ಲಾ ಒಂದೊಂದು ಸುಮಧುರ- ಮನಮೋಹಕ ಫಾಲ್ಸ್ಗಳು, ಮಲೆನಾಡಿನ ಸುತ್ತಮುತ್ತಲಿರುವ ಝರಿ, ಜಲಪಾತಗಳಂತೂ ನೋಡುಗನ ಮನಸ್ಸಿನ ಭಾವನೆಗಳಿಗೆ ಜೀವ ತುಂಬುತ್ತವೆ. ಅಕ್ಟೋಬರ್ ತಿಂಗಳಾದರೂ ಮಳೆಯ ಪ್ರತಾಪ ಚಿಕ್ಕಮಗಳೂರಿನಲ್ಲಿ ಕಡಿಮೆಯಾಗದ ಹಿನ್ನೆಲೆ ಜಲಪಾತಗಳ ಭೋರ್ಗರೆತ ಜೋರಾಗಿದೆ.
ಜಿಲ್ಲೆಯಲ್ಲಿರುವ ಸಿರಿಮನೆ ಫಾಲ್ಸ್ ಶೃಂಗೇರಿಯಿಂದ18 ಕಿ.ಮೀ ದೂರವಿದೆ. ಒಮ್ಮೆ ಈ ಸ್ಥಳಕ್ಕೆ ತೆರಳಿದರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತದೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸುವ ಶಕ್ತಿ ಈ ಜಲಪಾತಕ್ಕಿದೆ. ಕಪ್ಪು ಬಂಡೆಗಳ ನಡುವೆ ಹಾಲು ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನು ವರ್ಣಿಸಲು ಅಸಾಧ್ಯ. ಅಕ್ಟೋಬರ್ ಬಂದರೂ ಮಲೆನಾಡಿನಲ್ಲಿ ಮಳೆಯ ಪ್ರತಾಪ ಕಡಿಮೆಯಾಗಿಲ್ಲ. ವರುಣನ ಅಬ್ಬರ ಜಾಸ್ತಿಯಾಗಿರುವುದರಿಂದ ಜಲಪಾತದ ಭೋರ್ಗರೆತ ಕೂಡ ಜೋರಾಗಿದೆ. ಹಾಗೆಯೇ ತನ್ಮಯರಾಗಿ ಈ ಸುಂದರ ಸಿರಿಮನೆ ಜಲಪಾತವನ್ನ ನೋಡಲು ಎರಡು ಕಣ್ಣು ಸಾಲದು ಅನ್ನೋ ಭಾವ ಮೂಡುತ್ತದೆ.
ಜೂನ್-ಜುಲೈನಲ್ಲಿ ಈ ಫಾಲ್ಸ್ ಹತ್ತಿರಕ್ಕೆ ಸುಳಿಯಲು ಸಾಧ್ಯವಾಗಲ್ಲ. ಆದರೆ ಸೆಪ್ಟೆಂಬರ್-ಅಕ್ಟೋಬರ್ ಬಳಿಕ ತುಂಬಾ ಹತ್ತಿರದಿಂದಲೇ ಈ ಜಲಪಾತದ ಸಿರಿಯನ್ನ ಕಣ್ತುಂಬಿಸಿಕೊಳ್ಳಬಹುದು. ಹೀಗೆ ಫಾಲ್ಸ್ ಬ್ಯೂಟಿ ಸವಿಯುವಾಗ ಸಿಗುವ ಆನಂದ ವರ್ಣಿಸಲು ಅಸಾಧ್ಯ.
100 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾದ ಸಿರಿಮನೆ ಫಾಲ್ಸ್ ಹೊರ ಜಗತ್ತಿಗೆ ಎಲೆಮರೆಕಾಯಂತಾಗಿದೆ. ಈ ನಡುವೆಯೂ ವೀಕೆಂಟ್ಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಜಲಪಾತಕ್ಕೆ ಆಗಮಿಸಿ ಎಂಜಾಯ್ ಮಾಡ್ತಾರೆ. ಒಮ್ಮೆ ಮೇಲಿಂದ ಧುಮ್ಮಿಕ್ಕೋ ನೀರಿಗೆ ಮೈಯೊಡ್ಡಿ ನಿಂತರೆ ಮೇಲೇ ಬರಲು ಮನಸ್ಸೇ ಆಗಲ್ಲ. ಅಂತಹ ಆಹ್ಲಾದಕರ ಅನುಭವ ಜಲಪಾತದ ನೀರಲ್ಲಿ ಮಿಂದೇಳುವ ಮಂದಿಯನ್ನ ಗೊತ್ತಿಲ್ಲದಂತೆ ಆವರಿಸಿ ಬಿಡುತ್ತದೆ. ಸಿರಿಮನೆ ಫಾಲ್ಸ್ನ ಅಸುಪಾಸಿನಲ್ಲಿರುವ ಮಂದಿಯೂ ಆಗಾಗ ಫಾಲ್ಸ್ ಬಳಿ ಬಂದು ಮನಸ್ಸನ್ನ ಹಗುರ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ಈ ಸುಂದರ ಜಲಪಾತಕ್ಕೆ ಹೋಗಲು ಸದ್ಯ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿಲ್ಲ. ಇತ್ತೀಚಿಗಷ್ಟೇ ಹೊರ ಜಗತ್ತಿಗೆ ಪರಿಚಯವಾಗಿದ್ದ ಈ ನಯನಮನೋಹರ ಫಾಲ್ಸ್ಗೆ ಕಳೆದ ಕೆಲ ತಿಂಗಳಿನಿಂದ ಪ್ರವಾಸಿಗರನ್ನ ನಿರ್ಬಂಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದತೂ ಕೂಡ ಸಿರಿಮನೆ ಫಾಲ್ಸ್ಗೆ ಹೋಗುವ ರಸ್ತೆ ದುರಸ್ತಿಗೊಳಿಸುವ ಕೆಲಸಕ್ಕೆ ಜಿಲ್ಲಾಡಳಿತ ಮನಸ್ಸು ಮಾಡಿರಲಿಲ್ಲ. ರಸ್ತೆ ದುರಸ್ತಿ ಮಾಡದ ಕಾರಣ ಹಾಗೂ ಕೆಲ ಕಾರಣಗಳಿಂದ ಸಿರಿಮನೆ ಫಾಲ್ಸ್ನ ಕಣ್ತುಂಬಿಸಿಕೊಳ್ಳಲು ಸದ್ಯದ ಮಟ್ಟಿಗೆ ಪ್ರವಾಸಿಗರಿಗೆ ಅವಕಾಶ ಇಲ್ಲ.
ವರದಿ: ಪ್ರಶಾಂತ್
ಇದನ್ನೂ ಓದಿ
ಜಲಾವೃತವಾದ ರಸ್ತೆ, ಟ್ರಾಫಿಕ್ ಜಾಮ್ನಿಂದಾಗಿ ಪುಣೆ ವಿಮಾನ ನಿಲ್ದಾಣದಿಂದ ಹೊರಹೋಗಲಾರದೆ ಸಿಲುಕಿದ ಜನ
ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ? ದೆಹಲಿಯಲ್ಲೇ ಬೀಡುಬಿಟ್ಟ ರಮೇಶ್ ಜಾರಕಿಹೊಳಿ