Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಬಾರಿ IPL ಬಂದೋಬಸ್ತ್ ಮಾಡಿದ್ದ ‘ಹನಿ’ ಸಾವು!

ಚಿಕ್ಕಮಗಳೂರು: ರಾಜ್ಯ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಿಎಂ ಭದ್ರತೆಯಲ್ಲೂ ಭಾಗಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಡಾಗ್ ಮೃತಪಟ್ಟಿದೆ. 12 ವರ್ಷದ ಹನಿ ಹೆಸರಿನ ಶ್ವಾನ ವಯೋಸಹಜವಾಗಿ ಸಾವನ್ನಪ್ಪಿದೆ. ಆರೋಗ್ಯ ಸಮಸ್ಯೆಯಿಂದ ಕಳೆದೊಂದು ವಾರದಿಂದ ಅನ್ನ-ಆಹಾರ ಬಿಟ್ಟಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಶ್ವಾನ ಇಂದು ಬೆಳಗ್ಗೆ ನಿಧನ ಹೊಂದಿದೆ. ಸ್ಫೋಟಕ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಹನಿ ಸಾಕ್ಷಿಯಾಗಿತ್ತು. ಹನಿ ಶ್ವಾನ ಹೆಚ್ಚಾಗಿ ಸ್ಫೋಟಕಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿತ್ತು. ಭದ್ರತೆಗೆಂದು […]

2 ಬಾರಿ IPL ಬಂದೋಬಸ್ತ್ ಮಾಡಿದ್ದ ‘ಹನಿ’ ಸಾವು!
Follow us
ಸಾಧು ಶ್ರೀನಾಥ್​
| Updated By:

Updated on: May 31, 2020 | 5:36 PM

ಚಿಕ್ಕಮಗಳೂರು: ರಾಜ್ಯ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಿಎಂ ಭದ್ರತೆಯಲ್ಲೂ ಭಾಗಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಡಾಗ್ ಮೃತಪಟ್ಟಿದೆ. 12 ವರ್ಷದ ಹನಿ ಹೆಸರಿನ ಶ್ವಾನ ವಯೋಸಹಜವಾಗಿ ಸಾವನ್ನಪ್ಪಿದೆ. ಆರೋಗ್ಯ ಸಮಸ್ಯೆಯಿಂದ ಕಳೆದೊಂದು ವಾರದಿಂದ ಅನ್ನ-ಆಹಾರ ಬಿಟ್ಟಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಶ್ವಾನ ಇಂದು ಬೆಳಗ್ಗೆ ನಿಧನ ಹೊಂದಿದೆ.

ಸ್ಫೋಟಕ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಹನಿ ಸಾಕ್ಷಿಯಾಗಿತ್ತು. ಹನಿ ಶ್ವಾನ ಹೆಚ್ಚಾಗಿ ಸ್ಫೋಟಕಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿತ್ತು. ಭದ್ರತೆಗೆಂದು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಚಿಕ್ಕಮಗಳೂರು ಪೊಲೀಸ್ ಇಲಾಖೆಯ ಹನಿ ಸಂಚರಿಸಿದೆ. ಅಷ್ಟೆ ಅಲ್ಲದೆ, ಎಡಪಂಥೀಯ ಉಗ್ರಗಾಮಿಗಳ ವಿರುದ್ಧದ ಕಾರ್ಯಚರಣೆಯಲ್ಲೂ ಭಾಗಿಯಾಗಿದೆ.

ವಿಶೇಷವೆಂದ್ರೆ ಎರಡು ಬಾರಿ ಬೆಂಗಳೂರಿನಲ್ಲಿ ನಡೆದು ಐಪಿಎಲ್ ಪಂದ್ಯಾವಳಿಯ ಭದ್ರತೆಯಲ್ಲೂ ಹನಿ ಭಾಗಿಯಾಗಿತ್ತು. ಇನ್ನೂ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗಳಿಸಿದ್ರೆ, ಒಂದು ಬಾರಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲೋದ್ರ ಜೊತೆ, ಅಖಿಲ ಭಾರತ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿತ್ತು.

ಇಂದು ಬೆಳಗ್ಗೆ ಸಾವನ್ನಪ್ಪಿದ ಹನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ನಗರದ ರಾಮನಹಳ್ಳಿಯಲ್ಲಿರುವ ಜಿಲ್ಲಾ ರಿಸರ್ವ್ ಪೊಲೀಸ್ ಗ್ರೌಂಡ್‍ನಲ್ಲಿ ಪೊಲೀಸ್ ಡಾಗ್ ಹನಿಯ ಅಂತಿಮ ದರ್ಶನದ ಬಳಿಕ ಅಂತ್ಯ ಸಂಸ್ಕಾರ ನಡೆದಿದೆ.