AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆನ್​ಡ್ರೈವ್​ ಕೇಸ್​: ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋ ಅಪ್ಲೋಡ್ ಮಾಡಿದ್ದ ಪ್ರಜ್ವಲ್​ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಬೆಳಕಿಗೆ ಬಂದಿದ್ದು, ಇದೀಗ ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗಿ ಎಲ್ಲೆಡೆ ವೈರಲ್ ಆಗುತ್ತಿವೆ. ಹೌದು ಸರ್ಕಾರಿ ಅಧಿಕಾರಿಗಳ ವಿಡಿಯೋ, ಫೋಟೋಸ್​ಗಳು ಸಹ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೆನ್​ಡ್ರೈವ್​ ಕೇಸ್​: ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋ ಅಪ್ಲೋಡ್ ಮಾಡಿದ್ದ ಪ್ರಜ್ವಲ್​ ಬಂಧನ
ಸಾಂದರ್ಭಿಕ ಚಿತ್ರ (ಎಡಚಿತ್ರ), ಪ್ರಜ್ವಲ್​ ರೇವಣ್ಣ (ಬಲ ಚಿತ್ರ)
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:May 10, 2024 | 4:23 PM

Share

ಚಿಕ್ಕಮಗಳೂರು, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ ಆರೋಪಿ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದಾನೆ.

ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಪ್ರಕರಣವನ್ನು ಎಸ್​ಐಟಿಗೆ ನೀಡಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಪ್ರಜ್ವಲ್​ ರೇವಣ್ಣ ಅವರಿಗೆ ಸಂಬಂಧಿಸಿದ ವಿಡಿಯೋಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ​ ವಿಡಿಯೋಗಳು ಹರಿದಾಡುತ್ತಿವೆ. ವಿಡಿಯೋದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್‌ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್‌ ಮತ್ತಷ್ಟು ಜಟಿಲವಾಗಿದೆ.

ಇದನ್ನೂ ಓದಿ: ತಂದೆ ಜೈಲಿಗೆ ಹೋದ ಕೇಸ್​ನಲ್ಲೇ ಪುತ್ರ ಪ್ರಜ್ವಲ್‌ ರೇವಣ್ಣಗೂ ಸಂಕಷ್ಟ!

ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೇ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಅಶ್ಲೀಲ ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದರು. ಇದಾದ ಬಳಿಕ ಎಸ್​ಐಟಿ ಅಧಿಕಾರಿಗಳು ಈ ವಿಡಿಯೋಗಳನ್ನು ಹರಿಬಿಟ್ಟ ವ್ಯಕ್ತಿಗಾಗಿ ಬಲೆ ಬೀಸಿದ್ದರು.  ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:10 pm, Fri, 10 May 24

Follow Us
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ