ಯುವತಿ ರಕ್ಷಿತಾಳ ಅಂಗಾಂಗ ದಾನ: ವೈದ್ಯ ಚಂದ್ರಶೇಖರ್ ಸಾಲಿಮಠ್ ಹೇಳಿದ್ದೇನು?

ಬಸ್ಸಿನಿಂದ ಬಿದ್ದ ರಕ್ಷಿತಾಳ ಆರ್ಗನ್ಸ್​ಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರ ತಂಡದಲ್ಲಿದ್ದ ಚಂದ್ರಶೇಖರ್ ಸಾಲಿಮಠ್ ಟಿವಿ9ಗೆ ಎಕ್ಸ್ ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.

ಯುವತಿ ರಕ್ಷಿತಾಳ ಅಂಗಾಂಗ ದಾನ: ವೈದ್ಯ ಚಂದ್ರಶೇಖರ್ ಸಾಲಿಮಠ್ ಹೇಳಿದ್ದೇನು?
ವೈದ್ಯ ಚಂದ್ರಶೇಖರ್ ಸಾಲಿಮಠ್, ಮೃತ ಯುವತಿ ರಕ್ಷಿತಾ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2022 | 7:31 PM

ಚಿಕ್ಕಮಗಳೂರು: ಈ ದಿನ ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮೆಯ ದಿನ. ಹಿಂದೆಂದೂ ನಡೆಯದ ಕಾರ್ಯ ಈ ದಿನ ನಡೆದಿದೆ. ರಕ್ಷಿತಾಳ ಅಂಗಾಂಗಗಳನ್ನು ದಾನ (organ donation) ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ ಎಂದು ಬಸ್ಸಿನಿಂದ ಬಿದ್ದ ರಕ್ಷಿತಾಳ ಆರ್ಗನ್ಸ್​ಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರ ತಂಡದಲ್ಲಿದ್ದ ಚಂದ್ರಶೇಖರ್ ಸಾಲಿಮಠ್ ಟಿವಿ9ಗೆ ಎಕ್ಸ್ ಕ್ಲೂಸಿವ್ ಹೇಳಿಕೆ ನೀಡಿದರು. ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದೇವೆ. 9 ವರ್ಷದ ಬಾಲಕನಿಗೆ ಈಗಾಗಲೇ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಲಿವರನ್ನ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕಣ್ಣು, ಕಿಡ್ನಿಗಳನ್ನು ಮಣಿಪಾಲಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹಾರ್ಟನ್ನ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 3 ಗಂಟೆ ಒಳಗೆ ತಲುಪಿಸಬೇಕಿತ್ತು.

ನಿಗದಿತ ಸಮಯದಲ್ಲಿ ಹೃದಯ ಜೋಡಣೆ ನಮಗೆ ಸವಾಲಾಗಿತ್ತು. ಹಾಗಾಗಿ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಹಾರ್ಟನ್ನ ಏರ್ಲಿಫ್ಟ್ ಮಾಡಿದ್ದೆವು. ಉಳಿದ ಅಂಗಾಂಗಗಳನ್ನು ಜೀರೋ ಟ್ರಾಫಿಕ್ ಮೂಲಕ ಮಂಗಳೂರಿಗೆ ತಲುಪಿಸಿದ್ದೇವೆ. 30ಕ್ಕೂ ಹೆಚ್ಚು ವೈದ್ಯರ ತಂಡದಿಂದ ಯಶಸ್ವಿ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು.

ರಕ್ಷಿತಾಳಿಗೆ ಕಾಲೇಜು ವಿದ್ಯಾರ್ಥಿನಿಯರಿಂದ ಭಾವಪೂರ್ಣ ವಿದಾಯ: 

ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ವಿದ್ಯಾರ್ಥಿನಿ ರಕ್ಷಿತಾಗೆ ಸಾವಿರಾರು ವಿದ್ಯಾರ್ಥಿನಿಯರಿಂದ ಕಣ್ಣೀರಿನ ವಿದಾಯ ನೀಡಲಾಯಿತು. ಸ್ನೇಹಿತೆಯನ್ನು ಕಳೆದುಕೊಂಡು ಬಿಕ್ಕಳಿಸಿ ಬಿಕ್ಕಳಿಸಿ ಅಂತ ವಿದ್ಯಾರ್ಥಿನಿಯರು. ರಕ್ಷಿತಾಳ ಮೃತದೇಹ ನೋಡಿ ಶಿಕ್ಷಕರು, ಸಾರ್ವಜನಿಕರು ಕಣ್ಣೀರಿಟ್ಟರು. ಚಿಕ್ಕಮಗಳೂರು ನಗರದಿಂದ ಸ್ವಗ್ರಾಮಕ್ಕೆ ರಕ್ಷಿತಾ ಮೃತದೇಹ ರವಾನೆ ಮಾಡಲಾಯಿತು.

ತಂಗಿಗಾಗಿ ಅಣ್ಣನ ಭಾವುಕ ಹಾಡು:

ಒಂದು ಮುತ್ತಿನ ಕಥೆಯ ಹೇಳಿತು ಈ ಗೊಂಬೆ ಎಂದು ನನ್ನ ತಂಗಿಗಾಗಿ ಕೊನೆಯದಾಗಿ ಅಣ್ಣ ಹಾಡು ಹೇಳಿದ್ದು, ಅಣ್ಣನ ಈ ಒಂದು ಮಾತಿಗೆ ಇಡೀ ಕಾಲೇಜು ಭಾವುಕವಾಗಿತ್ತು. ಪುನೀತ್ ರಾಜಕುಮಾರ ಹಾಡನ್ನು ವಿದ್ಯಾರ್ಥಿನಿಯರು ಗುನುಗಿದ್ದು, ಕಣ್ಣೀರಿಡುತ್ತಲೇ ರಕ್ಷಿತಾಳನ್ನ ಕಳುಹಿಸಿಕೊಟ್ಟರು. ಹೋಗ್ಬೇಡ, ಬಿಟ್ಹೋಗ್ಬೇಡ ಅಂತಾ ರಕ್ಷಿತಾ ಸಹಪಾಠಿಗಳು ಕಣ್ಣೀರಿಟ್ಟಿದ್ದು, ಕಾಲೇಜಿನಲ್ಲಿ ಕಣ್ಣೀರಧಾರೆ ಹರಿದಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.

ಹಿನ್ನೆಲೆ:

ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ರಕ್ಷಿತಾ ಬಲಿಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿರುವಂತಹ ಘಟನೆ ನಡೆದಿದೆ. ತಾಲೂಕಿನ ಸೋಮನಹಳ್ಳಿ ತಾಂಡ್ಯದ ರಕ್ಷಿತಾ ಮೃತ ಯುವತಿ. ಬಸ್​ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಮಗಳ ಅಂಗಾಂಗ ದಾನಕ್ಕೆ ಪೋಷಕರಾದ ತಾಯಿ ಲಕ್ಷ್ಮಿ ಬಾಯಿ, ತಂದೆ ಸುರೇಶ್ ನಾಯಕ್​ ಒಪ್ಪಿಗೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್