Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿ ನಮ್ಮ ಸಂಸ್ಕೃತಿ ಅಲ್ಲ, ಮತ್ತೆ ಪುನರುಚ್ಚರಿಸಿ ಟೀಕಾಕಾರರಿಗೆ ಉತ್ತರ ಕೊಟ್ಟ ಸಾಣೇಹಳ್ಳಿ ಸ್ವಾಮೀಜಿ

ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗಳು ಆಗುತ್ತಿವೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಇದೀಗ ಸ್ವತಃ ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಇದಕ್ಕೆ ಪ್ರತಿಕ್ರಿಯಿಸಿ, ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

ಗಣಪತಿ ನಮ್ಮ ಸಂಸ್ಕೃತಿ ಅಲ್ಲ, ಮತ್ತೆ ಪುನರುಚ್ಚರಿಸಿ ಟೀಕಾಕಾರರಿಗೆ ಉತ್ತರ ಕೊಟ್ಟ ಸಾಣೇಹಳ್ಳಿ ಸ್ವಾಮೀಜಿ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2023 | 11:37 AM

ಚಿತ್ರದುರ್ಗ, (ನವೆಂಬರ್ 04): ಗಣಪತಿ ಪೂಜೆ (ganapati Puja) ಮಾಡುವುದು ನಮ್ಮ ಸಂಸ್ಕೃತಿ(culture) ಅಲ್ಲ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿ ಜಾಲತಾಣಗಳಲ್ಲಿ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇದೀಗ ಇದಕ್ಕೆ ಸ್ವತಃ ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ(sanehalli panditaradhya shivacharya swamiji) ಪ್ರತಿಕ್ರಿಯಿಸಿ, ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೇ ಟೀಕಾಕಾರರ ವಿರುದ್ಧ ಗುಡುಗಿದ್ದಾರೆ.

ಚಿತ್ರದುರ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ನಾವು ಹೇಳಿದ್ದೆವು. ನಮ್ಮ ಸಂಸ್ಕೃತಿ ಅಂದರೆ ಲಿಂಗಾಯತ, ಶರಣ ಸಂಸ್ಕೃತಿ. ಕೆಲ ಮಹಾನುಭಾವರು ದೊಡ್ಡ ಲೇಖನ ಬರೆದಿದ್ದಾರೆ. ಈ ರೀತಿ ಹೇಳಿಕೆ ನೀಡಿ ನಿಜಗುಣಾನಂದಶ್ರೀ ರಾಜ್ಯೋತ್ಸವ ಪ್ರಶಸ್ತಿ ಪಡೆದರು ಎಂದು ಬರೆದಿದ್ದಾರೆ. ಪಂಡಿತಾರಾಧ್ಯಶ್ರೀಗೆ ಮೊಟ್ಟ ಮೊದಲ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಅವರಿಗೆ ಗೊತ್ತಿಲ್ಲ ಎಂದು ಟೀಕೆಗಳಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಗಣೇಶೋತ್ಸವ ಆಚರಣೆ ನಮ್ಮ ಸಂಸ್ಕೃತಿ ಅಲ್ಲ-ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ

ಪ್ರಚಾರಕ್ಕೆ ಬರಲು ಈ ರೀತಿ ಹೇಳಿಕೆ ನೀಡುತ್ತಾರೆಂದು ಬರೆಯುತ್ತಾರೆ. ವಿದ್ಯಾರ್ಥಿ ದೆಸೆಯಿಂದ ಸ್ವಾಮಿಗಳಾದಾಗಲೂ ಈ ರೀತಿ ಹೇಳಿದ್ದೇವೆ, ನಾವು ಗಣಪತಿ ಉತ್ಸವಕ್ಕೆ ಹೋಗಲ್ಲ, ಗಣಪತಿ ಪೂಜೆ ಮಾಡಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ನಂಬಿದ್ದೇವೆ. ಅರ್ಥ ಮಾಡಿಕೊಳ್ಳದ ಅವಿವೇಕಿಗಳು ನಮ್ಮ ವಿರುದ್ಧ ಬರೆಯುತ್ತಾರೆ. ನಾವು ಸಮಾಧಾನ ಕಳೆದುಕೊಂಡರೆ ಗತಿಯೇನು. ಸರಿಯಾದ ಉತ್ತರ ನೀಡುವ ವಿವೇಕ ಬೇಕಾಗುತ್ತದೆ ಎಂದು ಕಿಡಿಕಾರಿದರು.

ಶರಣರ ವಚನಗಳಲ್ಲಿ ಗಣಪತಿ ವಿರೋಧ ನಾಡಿದ ನಿದರ್ಶನವಿದೆ. ಲೇಖನ ಬರೆದ ಮಹಾನುಭಾವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಂದಾಚಾರದ ಕೂಪದಲ್ಲಿ ಮುಳುಗಿಸುವ ಪುರೋಹಿತಶಾಹಿ ಪರಂಪರೆ ಈ ನಾಡಲ್ಲಿದೆ. ದೇವಸ್ಥಾನ ನಿರ್ಮಿಸಿದಾಕ್ಷಣ ಜನ ಅಲ್ಲಿ ಸುತ್ತುವರೆಯುತ್ತಾರೆ. ಪೂಜೆ ಮಾಡಿಸಿ ಪುಣ್ಯ ಸಿಗುತ್ತದೆ ಎಂದು ಹೇಳುತ್ತಾರೆ. ನಿಜವಾಗಿಯೂ ಯಾರಿಗಾದರೂ ಪುಣ್ಯ ಲಭ್ಯ ಆಗಿದೆಯೇ? ಎಂದು ಪ್ರಶ್ನಿಸಿದರು.

ಯಾವ ದೇವರು ಈವರೆಗೆ ಯಾರಿಗೂ ವರ, ಶಾಪ ನೀಡಿಲ್ಲ. ಈ ಸತ್ಯದ ಅರಿವು ಮೌಢ್ಯದಲ್ಲಿ ಮುಳುಗಿದವರಿಗೆ ಅರ್ಥ ಆಗುವುದು ಕಷ್ಟ. ಸದಾ ಇನ್ನೊಬ್ಬರ ತಲೆ ಬೋಳಿಸುವ ಕೆಲಸ ಮಾಡುತ್ತಿರುತ್ತಾರೆ. ಇನ್ನೊಬ್ಬರ ವಿಚಾರ ಅರ್ಥ ಮಾಡಿಕೊಂಡು ಒಪ್ಪುವ ಮನಸ್ಥಿತಿ ಇಲ್ಲ, ಶರಣರ ವಚನ ಸಾಹಿತ್ಯದ ಪರಿಚಯ, ವೈಚಾರಿಕ ಪ್ರಜ್ಞೆ ಇದ್ದರೆ ಆ ರೀತಿ ಪದ ಬಳಕೆ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ