ಕಾಂಗ್ರೆಸ್ನ ‘ಪೇಸಿಎಂ’ ಕ್ಯಾಂಪೇನ್ಗೆ ಬಿಜೆಪಿ ಟಕ್ಕರ್: ಸಿದ್ರಾಮುಲ್ಲಾನ ಉಗ್ರಭಾಗ್ಯ ಲೀಲೆಗಾಗಿ ಸ್ಕ್ಯಾನ್ ಪೋಸ್ಟರ್
ಸಿದ್ದರಾಮಯ್ಯ ಟಿಪ್ಪು ಪೇಟ ಧರಿಸಿ ತಲ್ವಾರ್ ಹಿಡಿದ ಫೋಟೋ ಇರುವ ಪೋಸ್ಟರ್ಗಳನ್ನು ಬಿಜೆಪಿ ಕಾರ್ಯಕರ್ತರು ಚಳ್ಳಕೆರೆ ಪಟ್ಟಣದಲ್ಲಿ ಅಂಟಿಸಿದ್ದಾರೆ.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ರಾಜ್ಯದಲ್ಲಿ 10ನೇ ದಿನದ ಪಾದಯಾತ್ರೆ ಇದಾಗಿದ್ದು ಹಿರಿಯೂರು ಬಳಿಯ ಹರ್ತಿಕೋಟೆಯಿಂದ ಪಾದಯಾತ್ರೆ ಶುರುವಾಗಿದೆ. ಇದರ ನಡುವೆ ಮತ್ತೊಂದು ಕಡೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪೋಸ್ಟರ್ ಪಾಲಿಟಿಕ್ಸ್ ಆರಂಭವಾಗಿದೆ.
ಈ ಹಿಂದೆ ಕಾಂಗ್ರೆಸ್ ಕೈಗೊಂಡಿದ್ದ ‘ಪೇಸಿಎಂ’ ಕ್ಯಾಂಪೇನ್ಗೆ ಇಂದು ಬಿಜೆಪಿ ಟಕ್ಕರ್ ಕೊಟ್ಟಿದೆ. ಚಳ್ಳಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪಿಎಫ್ಐ ಭಾಗ್ಯ ಎಂದು ಪೋಸ್ಟರ್ ಅಂಟಿಸಿದ್ದಾರೆ. ಸಿದ್ರಾಮುಲ್ಲಾನ ಉಗ್ರಭಾಗ್ಯ ಲೀಲೆಗಾಗಿ ಸ್ಕ್ಯಾನ್ ಮಾಡಿ. ಸಿದ್ದರಾಮಯ್ಯ ಟಿಪ್ಪು ಪೇಟ ಧರಿಸಿ ತಲ್ವಾರ್ ಹಿಡಿದ ಫೋಟೋ ಇರುವ ಪೋಸ್ಟರ್ಗಳನ್ನು ಬಿಜೆಪಿ ಕಾರ್ಯಕರ್ತರು ಚಳ್ಳಕೆರೆ ಪಟ್ಟಣದಲ್ಲಿ ಅಂಟಿಸಿದ್ದಾರೆ. ‘ಜೋಡೋ’ ಯಾತ್ರೆ ಎಂಟ್ರಿ ವೇಳೆ ಪೋಸ್ಟರ್ ಅಂಟಿಸಲಾಗಿದೆ. ಪಾದಯಾತ್ರೆ ಚಳ್ಳಕೆರೆಗೆ ಬರುವ ಮುನ್ನವೇ ಬಿಜೆಪಿ ಪೋಸ್ಟ್ ಅಂಟಿಸಿದೆ. ಈ ಹಿಂದೆ ಕೂಡ ಚಿಕ್ಕನಾಯಕನಹಳ್ಳಿಯಲ್ಲಿ ಇದೇ ರೀತಿ ಬಿಜೆಪಿ ಫೋಸ್ಟರ್ ಅಂಟಿಸಿತ್ತು. ಇದನ್ನೂ ಓದಿ: ಕೈವ್ನಲ್ಲಿ ರಷ್ಯಾದಿಂದ ವೈಮಾನಿಕ ದಾಳಿ; ಉಕ್ರೇನ್ನ ಭಾರತೀಯ ನಿವಾಸಿಗಳಿಗೆ ಎಚ್ಚರದಿಂದಿರಲು ರಾಯಭಾರ ಕಚೇರಿ ಸೂಚನೆ
ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದ ಪೋಸ್ಟರ್ಗಳ ತೆರವು
ಚಳ್ಳಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದ ಪೋಸ್ಟರ್ಗಳನ್ನು ತೆರವು ಮಾಡಲಾಗಿದೆ. ಬಳ್ಳಾರಿ ರಸ್ತೆಯ ಸೇತುವೆ ಬಳಿ ಅಂಟಿಸಿದ್ದ ಹಾಗೂ ಚಳ್ಳಕೆರೆ ಪಟ್ಟಣದ ಹಲವೆಡೆ ಅಂಟಿಸಿದ್ದ ‘ಪಿಎಫ್ಐ ಭಾಗ್ಯ’ ಪೋಸ್ಟರ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಚಿತ್ರದುರ್ಗ ಹಲವೆಡೆ ‘ಪಿಎಫ್ ಐ ಭಾಗ್ಯ’ ಪೋಸ್ಟರ್
ಇಷ್ಟೇ ಅಲ್ಲದೆ ಚಿತ್ರದುರ್ಗ, ಮೊಳಕಾಲ್ಮೂರಲ್ಲಿ ‘ಪಿಎಫ್ ಐ ಭಾಗ್ಯ’ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗದ ವಿವಿದೆಡೆ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಬದಿಯ ಗೋಡೆಗೆ ಪೋಸ್ಟರ್ ಅಂಟಿಸಿ ಕಿಡಿಕಾರಿದ್ದಾರೆ. ಮೊಳಕಾಲ್ಮೂರು ಪಟ್ಟಣದಲ್ಲೂ ಪಿಎಫ್ ಐ ಪೋಸ್ಟರ್ ಅಂಟಿಸಲಾಗಿದೆ.
ಮಕ್ಕಳಿಗೆ ಕಾಂಪಿಟಿಷನ್ ಹಚ್ಚಿದ ರಾಹುಲ್
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಪಾದಯಾತ್ರೆ ನಡೆಸುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಕ್ಕಳಿಗೆ ಸ್ಪರ್ಧೆ ಮಾಡಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳೊಂದಿಗೆ ರಾಹುಲ್ ಗಾಂಧಿ ಮಾತನಾಡಿ ಅವರೊಂದಿಗೆ ಎರಡೆಜ್ಜೆ ಹಾಕಿ ಅವರಿಗೆ ಓಟದ ಸ್ಪರ್ಧೆ ಇಟ್ಟು ಅವರಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಜೊತೆಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:03 am, Tue, 11 October 22