ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರು ಅಂತಿಮ; ಹಲವರಿಂದ ವಿರೋಧ

ಮುರುಘಾಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರು ಅಂತಿಮ ಮಾಡಲಾಗಿದೆ. ಆದ್ರೆ ಬಸವಪ್ರಭು ಶ್ರೀಗೆ ಪ್ರಭಾರ ಪೀಠಾದ್ಯಕ್ಷರಾಗಿ ನೇಮಕಕ್ಕೆ ಅಪಸ್ವರ ಕೇಳಿ ಬಂದಿದೆ. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಅಪಸ್ವರ ಹಾಡಿದ್ದಾರೆ.

ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರು ಅಂತಿಮ; ಹಲವರಿಂದ ವಿರೋಧ
ಮುರುಘಾ ಶ್ರೀಗಳ ಜೊತೆ ಬಸವಪ್ರಭುಶ್ರೀ
Follow us
TV9 Web
| Updated By: ಆಯೇಷಾ ಬಾನು

Updated on:Oct 16, 2022 | 10:49 AM

ಚಿತ್ರದುರ್ಗ: ಗಂಭೀರ ಆರೋಪ ಹೊತ್ತುಕೊಂಡಿರುವ ಮುರುಘಾ ಶ್ರೀಗಳು ಜಾಮೀನು ಪಡೆದು ಮತ್ತೆ ಪೀಠಕ್ಕೆ ಬಂದು ಕೂರುತ್ತಾರೆ ಎಂದುಕೊಂಡಿದ್ದ ಅವರ ಭಕ್ತರ ಕನಸು ಫಲಿಸುವ ಲಕ್ಷಣಗಳೇ ಕಾಣುತ್ತಿಲ್ಲ. ನಿನ್ನೆ ಅಡುಗೆ ಸಹಾಯಕಿ ಮಾಡಿರುವ ಆರೋಪ ಈ ಕೇಸನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ಹೀಗಾಗಿ ಮಠದ ಎಸ್​.ಜೆ.ಎಮ್​ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಿವೃತ್ತ ನ್ಯಾಯಾಧೀಶ ಎಸ್.ಬಿ.ವಸ್ತ್ರದಮಠ ಅವರಿಗೆ ಪವರ್ ಆಫ್ ಅಟರ್ನಿ ನೀಡಿದ್ದಾರೆ. ಇದರ ನಡುವೆ ಈಗ ಮುರುಘಾಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ನಿರ್ಧಾರ ಮಾಡಲಾಗಿದ್ದು ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರು ಅಂತಿಮ ಮಾಡಲಾಗಿದೆ.

ಮಠದ ಆಡಳಿತ ಮಂಡಳಿ ಸದಸ್ಯರು, ಮುಖಂಡರಿಂದ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಹಾಗೂ ಕಾನೂನು ಸಲಹೆ ಪಡೆದು ಮುಂದಿನ ಪ್ರಕ್ರಿಯೆಗೆ ನಿರ್ಧಾರ ಮಾಡಿದ್ದಾರೆ. ಕೋರ್ಟ್​​​ಗೆ ಮನವಿ ಸಲ್ಲಿಸಿ ಅನುಮತಿ ಪಡೆಯುವ ಚಿಂತನೆ ನಡೆಸಿದ್ದಾರೆ. ಇನ್ನು ಮಠದ ಮುಖಂಡರು ಜಿಲ್ಲಾ ಕಾರಾಗೃಹಕ್ಕೆ ತೆರಳಿ ಮುರುಘಾಶ್ರೀಗಳ ಒಪ್ಪಿಗೆ ಪಡೆದಿದ್ದು ಪ್ರಭಾರ ಪೀಠಾಧ್ಯಕ್ಷರ ನೇಮಕಕ್ಕೆ ಮುರುಘಾಶ್ರೀಗಳೂ ಸಮ್ಮತಿ ನೀಡಿದ್ದಾರೆ ಎಂದು ಚಿತ್ರದುರ್ಗ ಮುರುಘಾಮಠದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಪ್ರಭಾರ ಪೀಠಾದ್ಯಕ್ಷರ ನೇಮಕ ಕಗ್ಗಂಟು

ಇನ್ನು ಮತ್ತೊಂದು ಕಡೆ ಬಸವಪ್ರಭು ಶ್ರೀಗೆ ಪ್ರಭಾರ ಪೀಠಾದ್ಯಕ್ಷರಾಗಿ ನೇಮಕಕ್ಕೆ ಅಪಸ್ವರ ಕೇಳಿ ಬಂದಿದೆ. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಅಪಸ್ವರ ಹಾಡಿದ್ದಾರೆ. ಮುರುಘಾಶ್ರೀ ರಕ್ಷಣೆಗಾಗಿ ಬಸವಪ್ರಭು ಶ್ರೀ ನೇಮಕ ಎಂದು ಕಿಡಿ ಕಾರಿದ್ದಾರೆ. ಬಸವಪ್ರಭು ಶ್ರೀ ನೇಮಕ ನ್ಯಾಯಸಮ್ಮತವಲ್ಲ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮಠದಲ್ಲಿ ದೀಕ್ಷೆ ಪಡೆದ ಕೆಲ ಮಠಾಧೀಶರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಮುರುಘಾಮಠದಲ್ಲಿ ಪತ್ತೆಯಾದ ಆ ಮಗು ಯಾರದ್ದು? DNA ಟೆಸ್ಟ್​ಗೆ ಸಾಮಾಜಿಕ ಕಾರ್ಯಕರ್ತ ಆಗ್ರಹ

ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾಶ್ರೀ ಪೀಠತ್ಯಾಗಕ್ಕೆ ಆಗ್ರಹಿಸಿ ಚಿತ್ರದುರ್ಗ ವೀರಶೈವ ಮಹಾಸಭಾ ಜಿಲ್ಲಾ ಘಟಕ ಅಖಿಲಭಾರತ ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದಿದೆ. ಮುರುಘಾ ಸ್ವಾಮೀಜಿಗೆ ನ್ಯಾಯಾಂಗ ಬಂಧನ ಹಿನ್ನೆಲೆ ಮುರುಘಾಮಠದ ಆಡಳಿತ, ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ. ಮಠದ ಪೂಜಾಕೈಂಕರ್ಯಕ್ಕಾಗಿ ಸ್ವಾಮೀಜಿಗಳ ನೇಮಕ ಆಗಬೇಕು. ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ ಮೌಖಿಕವಾಗಿ ಮಾತ್ರ ಸೂಚಿಸಿದ್ದಾರೆ. ಆದ್ರೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಮುರುಘಾ ಶ್ರೀಗಳು ಕೂಡಲೇ ಪೀಠ ತ್ಯಾಗ ಮಾಡಬೇಕು

ಈ ಬಗ್ಗೆ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಮುರುಘಾ ಮಠದ ಶ್ರೀಗಳ ವಿರುದ್ಧ ಗಂಭೀರ ಆರೋಪವಿದೆ. ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀಗಳ ಬಂಧನ ಆಗಿದೆ. ಮುರುಘಾ ಶ್ರೀಗಳು ಕೂಡಲೇ ಪೀಠ ತ್ಯಾಗ ಮಾಡಬೇಕು. ಮಠದ ಆಡಳಿತ, ಧಾರ್ಮಿಕ ಆಚರಣೆಗೆ ತೊಂದರೆ ಆಗಿದೆ. ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ಆಯ್ಕೆ ಆಗಬೇಕು. ಈ ಬಗ್ಗೆ ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಸಿಎಂ ಬೊಮ್ಮಾಯಿ, ಬಿಎಸ್​​ವೈ ಭೇಟಿಯಾಗಿ ಮನವರಿಕೆ ಮಾಡಿದ್ದೇವೆ. ಬೊಮ್ಮಾಯಿ, ಬಿಎಸ್​ವೈ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.

ಪ್ರಭಾರ ಪೀಠಾಧ್ಯಕ್ಷರಾಗಿ ಬಸವಪ್ರಭುಶ್ರೀ ನೇಮಿಸುವ ವಿಚಾರಕ್ಕೆ ಮಾತನಾಡಿದ ಅವರು, ಬಸವಪ್ರಭುಶ್ರೀ ನೇಮಿಸುವ ಬಗ್ಗೆ ಮಠದಿಂದ ಘೋಷಣೆ ಆಗಿಲ್ಲ. ಅಧಿಕೃತ ಘೋಷಣೆ ಮಾಡಿದರೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: Hassan Accident: ಯಾವ ದೇವರಿಗೂ ಕಣ್ಣಿಲ್ಲ, ಎಲ್ರೂ ಹೋಗ್​ಬಿಟ್ರು; ನಿಲ್ಲುತ್ತಿಲ್ಲ ಮಕ್ಕಳ ಶವ ಕಂಡವರ ಕಣ್ಣೀರು

ಪ್ರಭಾರ ಪೀಠಾದ್ಯಕ್ಷರ ನೇಮಕ ಖಂಡಿಸುತ್ತೇವೆ

ಚಿತ್ರದುರ್ಗದಲ್ಲಿ ವೀರಶೈವ ಮಹಾಸಭಾದ ರಾಜ್ಯ ಪ್ರತಿನಿಧಿ ಶಾಮಲಾ ಶಿವಪ್ರಕಾಶ್ ಮಾತನಾಡಿದ್ದು, ಮುರುಘಾಶ್ರೀ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುರುಘಾಶ್ರೀಗಳಿಂದ ಪ್ರಭಾರ ಪೀಠಾದ್ಯಕ್ಷರ ನೇಮಕ ಖಂಡಿಸುತ್ತೇವೆ. ಮುರುಘಾಶ್ರೀ ಮೊದಲು ಪೀಠ ತ್ಯಾಗ ಮಾಡಬೇಕು. ವೀರಶೈವ ಲಿಂಗಾಯತ ಸಮಾಜ ಹೊಸ ಪೀಠಾಧ್ಯಕ್ಷರನ್ನು ನೇಮಿಸುತ್ತದೆ. ರಾಜಕೀಯ ನಾಯಕರೇ ಆರೋಪ ಬಂದಾಗ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. ಮುರುಘಾಶ್ರೀಗಳು ಬಂಧನವಾಗಿ ಒಂದೂವರೆ ತಿಂಗಳು ಕಳೆದರೂ ಪೀಠತ್ಯಾಗ ಮಾಡಿಲ್ಲ. ಮುರುಘಾಶ್ರೀ ಆರೋಪ ಮುಕ್ತರಾಗಿ ಬಂದರೆ ಮುಂದಿನ ವಿಚಾರ ನೊಡೋಣ ಎಂದು ಶಾಮಲಾ ಶಿವಪ್ರಕಾಶ್ ಹೇಳಿದರು.

Published On - 10:39 am, Sun, 16 October 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ