AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಾಜ್ ಮುಗಿಸಿ ಬರುವಾಗ ವ್ಯಕ್ತಿ ಮೇಲೆ ಚಾಕು ಇರಿತ; ಘಟನೆ ಹಿಂದೆ ಕೋಮುದ್ವೇಷ ಇಲ್ಲ ಎಂದು ಸ್ಪಷ್ಟ ಪಡಿಸಿದ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ

ದಾವಣಗೆರೆ ಬಳಿಯ ಹೆಬ್ಬಾಳ ಗೇಟ್ ಬಳಿ ಹಿರಿಯೂರು ಠಾಣೆ ಪೊಲೀಸರು ಆರೋಪಿ ನೂತನ್ನನ್ನು ಬಂಧಿಸಿದ್ದಾರೆ. ಆರೋಪಿ ನೂತನ್ ಹಿಂದೆ ಹಿಂದೂಪರ ಸಂಘಟನೆ, ಬಿಜೆಪಿ ಇದೆ. ಗಲಾಟೆ ಹಿಂದೆ ಬಿಜೆಪಿ ಶಾಸಕರು ಇದ್ದಾರೆಂದು SDPI ಜಿಲ್ಲಾ ಘಟಕದ ಅಧ್ಯಕ್ಷ ಬಾಳೇಕಾಯಿ ಶ್ರೀನಿವಾಸ್ ಆರೋಪ ಮಾಡಿದ್ದಾರೆ.

ನಮಾಜ್ ಮುಗಿಸಿ ಬರುವಾಗ ವ್ಯಕ್ತಿ ಮೇಲೆ ಚಾಕು ಇರಿತ; ಘಟನೆ ಹಿಂದೆ ಕೋಮುದ್ವೇಷ ಇಲ್ಲ ಎಂದು ಸ್ಪಷ್ಟ ಪಡಿಸಿದ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ
ಆರೋಪಿ ನೂತನ್
TV9 Web
| Edited By: |

Updated on:Jul 03, 2022 | 4:51 PM

Share

ಚಿತ್ರದುರ್ಗ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಕೊಲೆ ಹಿನ್ನೆಲೆ ಕೋಮು ದ್ವೇಷದಿಂದ ಸಮೀವುಲ್ಲಾ ಹತ್ಯೆಗೆ ಯತ್ನ(Murder Attempt) ನಡೆದಿರುವ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರಿನಲ್ಲಿ ಚಾಕುವಿನಿಂದ ಇರಿದು(Stab) ಸಮೀವುಲ್ಲಾ ಹತ್ಯೆಗೆ ಯತ್ನ ನಡೆದಿದ್ದು ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಮೀವುಲ್ಲಾಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ದಾವಣಗೆರೆ ಬಳಿಯ ಹೆಬ್ಬಾಳ ಗೇಟ್ ಬಳಿ ಹಿರಿಯೂರು ಠಾಣೆ ಪೊಲೀಸರು ಆರೋಪಿ ನೂತನ್ನನ್ನು ಬಂಧಿಸಿದ್ದಾರೆ. ಆರೋಪಿ ನೂತನ್ ಹಿಂದೆ ಹಿಂದೂಪರ ಸಂಘಟನೆ, ಬಿಜೆಪಿ ಇದೆ. ಗಲಾಟೆ ಹಿಂದೆ ಬಿಜೆಪಿ ಶಾಸಕರು ಇದ್ದಾರೆಂದು SDPI ಜಿಲ್ಲಾ ಘಟಕದ ಅಧ್ಯಕ್ಷ ಬಾಳೇಕಾಯಿ ಶ್ರೀನಿವಾಸ್ ಆರೋಪ ಮಾಡಿದ್ದಾರೆ.

ಆಸ್ಪತ್ರೆ ಬಳಿ ಗಾಯಾಳು ಸಂಬಂಧಿಗಳು, ಎಸ್ ಡಿಪಿಐ ಸಂಘಟನೆ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದಾರೆ. ಆರೋಪಿ ನೂತನ್ ಹಿಂದೂ‌ಮಹಾಗಣಪತಿ‌ ಉತ್ಸವದಲ್ಲಿ ಭಾಗಿ ಆಗುತ್ತಿದ್ದನು. ಆರೋಪಿ ನೂತನ್ ಭಜರಂಗದಳದ ಕಾರ್ಯಕರ್ತ ಆಗಿದ್ದನು. ಕೋಮು ದ್ವೇಷ ಹಿನ್ನೆಲೆ ಸಮಿವುಲ್ಲಾ ಕೊಲೆಗೆ ಯತ್ನಿಸಿದ್ದಾನೆ. ನೂತನ್ ಹಿಂದೆ ಹಿಂದೂಪರ ಸಂಘಟನೆ, ಬಿಜೆಪಿ ಇದೆ. ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿಯಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ‌ ಸರ್ಕಾರವಿದ್ದು ಮುಸ್ಲಿಂ ಮೇಲೆ ದೌರ್ಜನ್ಯ ಎಸಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆ ನಡೆಯಬೇಕು ಎಂದು ಬಾಳೇಕಾಯಿ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Virat Kohli vs Bairstow: ಬಾಯಿ ಮುಚ್ಕೊಂಡು ಆಡುವಂತೆ ಖಡಕ್ ವಾರ್ನಿಂಕ್ ಕೊಟ್ಟ ಕಿಂಗ್ ಕೊಹ್ಲಿ

ನಮಾಜ್ ಮುಗಿಸಿ ಬರುವಾಗ ಚಾಕು ಇರಿತ ನಿನ್ನೆ ಸಂಜೆ ನಮಾಜ್ ಮುಗಿಸಿ ಬರುವಾಗ ಚಾಕು ಹಾಕಿದ್ದಾರೆ ಎಂದು ಸಮೀವುಲ್ಲಾ ಸಹೋದರ ಕಾಶೀಂಸಾಬ್ ಹೇಳಿಕೆ ನೀಡಿದ್ದಾರೆ. ಸಮೀವುಲ್ಲಾ ಮುಸ್ಲಿಂ ಸಮುದಾಯದ ಮುಖಂಡರಾಗಿದ್ದರು. ಆಲೂರಿನ ಯುವಕ ನೂತನ್ 3-4 ಬಾರಿ ಚಾಕು ಇರಿದಿದ್ದಾನೆ. ಸಮೀವುಲ್ಲಾ, ನೂತನ್ ನಡುವೆ ಯಾವುದೇ ದ್ವೇಷ ಇರಲಿಲ್ಲ. ಉದ್ದೇಶಪೂರ್ವಕವಾಗಿ ಸಮೀವುಲ್ಲಾ ಮೇಲೆ ದಾಳಿ ನಡೆಸಿದ್ದಾನೆ. ಆರೋಪಿ ನೂತನ್ ತಂದೆ, ತಾಯಿ ಇಲ್ಲದ ಅನಾಥ ಹುಡುಗ. ನೂತನ್ ಊರಿನಲ್ಲಿ ಇರುತ್ತಿರಲಿಲ್ಲ, ಅಪರೂಪಕ್ಕೆ ಬರುತ್ತಿದ್ದ. ಹಿಂದೆ ಪಟಾಕಿ ವಿಚಾರಕ್ಕೆ ನಡೆದಿದ್ದ ಗಲಾಟೆ ಅಂತ್ಯವಾಗಿತ್ತು. ನೂತನ್ ದುರುಗುಟ್ಟಿ ನೋಡಿದ್ದನ್ನು ಸಮೀವುಲ್ಲಾ ಪ್ರಶ್ನಿಸಿದ್ದರು. ಸಂಜೆ 4 ಗಂಟೆಗೆ ಪ್ರಶ್ನಿಸಿದ್ದಕ್ಕೆ ಸಂಜೆ 6 ಗಂಟೆ ಸುಮಾರಿಗೆ ಚಾಕು ಇರಿದಿದ್ದಾನೆ. ಚಾಕು ಇರಿತ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಚಿತ್ರದುರ್ಗದಲ್ಲಿ ಸಮೀವುಲ್ಲಾ ಸಹೋದರ ಕಾಶೀಂಸಾಬ್ ಮಾಹಿತಿ ನೀಡಿದ್ದಾರೆ.

ಈವರೆಗಿನ ತನಿಖೆಯಿಂದ ಕೋಮುದ್ವೇಷ ಬಗ್ಗೆ ಮಾಹಿತಿ ಸಿಕ್ಕಿಲ್ಲ ಇನ್ನು ಘಟನೆ ಸಂಬಂಧ ಮಾತನಾಡಿರುವ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಕೋಮುದ್ವೇಷ ಹಿನ್ನೆಲೆಯಲ್ಲಿ ಸಮೀವುಲ್ಲಾಗೆ ಚಾಕು ಇರಿದಿಲ್ಲ. ಈವರೆಗಿನ ತನಿಖೆಯಿಂದ ಕೋಮುದ್ವೇಷ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆರೋಪಿ ನೂತನ್‌ ಬಿಜೆಪಿ, ಬಜರಂಗದಳದ ಕಾರ್ಯಕರ್ತನಲ್ಲ. ಗ್ರಾ.ಪಂ ಚುನಾವಣೆಯಲ್ಲಿ ಗಾಯಾಳು ಸಮೀವುಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದ್ದಾನೆ. ಪ್ರಕರಣದಲ್ಲಿ ಯಾವುದೇ ಪಕ್ಷ ರಾಜಕಾರಣ ಕಂಡು ಬಂದಿಲ್ಲ. ಈಗಾಗಲೇ ಆರೋಪಿ ಯುವಕ ನೂತನ್‌ನನ್ನು ಬಂಧಿಸಿದ್ದೇವೆ. ಇದನ್ನೂ ಓದಿ: Viral Video: ಅಪರಿಚಿತ ವಿಶಿಷ್ಟಚೇತನ ವ್ಯಕ್ತಿಯೊಂದಿಗೆ ಜನ್ಮದಿನವನ್ನು ಆಚರಿಸಿದ ವಿದ್ಯಾರ್ಥಿ, ನೆಟ್ಟಿಗರ ಮನಗೆದ್ದ ವಿಡಿಯೋ ಇಲ್ಲಿದೆ

ಮದ್ಯದ ಅಮಲಿನಲ್ಲಿ ಸಮೀವುಲ್ಲಾಗೆ, ನೂತನ್‌ ಗುರಾಯಿಸಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಮನೆಗೆ ಹೋಗಿ ಚಾಕು ತಂದು ಇರಿದಿದ್ದಾನೆ. ಸಮೀವುಲ್ಲಾ, ನೂತನ್ ನಡುವೆ ಯಾವುದೇ ದ್ವೇಷ ಇರಲಿಲ್ಲ. ನೂತನ್ ಚಿಕ್ಕಪ್ಪನ ಆಶ್ರಯದಲ್ಲಿದ್ದು ಕೂಲಿ ಕೆಲಸ ಮಾಡುತ್ತಾನೆ. ಸಮೀವುಲ್ಲಾಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಗಾಯಾಳು ಸಮೀವುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

Published On - 4:50 pm, Sun, 3 July 22

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ