
ಚಿತ್ರದುರ್ಗ, (ಜೂನ್ 30): ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Pocso Case) ಎದುರಿಸುತ್ತಿರುವ ಚಿತ್ರದುರ್ಗದ ಡಾ ಶಿವಮೂರ್ತಿ ಮುರುಘಾ ಶರಣರ (Muruga Shree) ವಿರುದ್ಧದ ಫೋಕ್ಸೋ ಪ್ರಕರಣ ವಿಚಾರಣೆ ಕೊನೆ ಹಂತಕ್ಕೆ ಬಂದಿದೆ. ಈ ಫೋಕ್ಸೋ ಪ್ರಕರಣ ಸಂಬಂಧ ಇಂದು (ಜೂನ್ 30) ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಶಿವಮೂರ್ತಿ ಮುರುಘಾ ಶರಣರ ಹೇಳಿಕೆಗೆ ಜುಲೈ 3ರಂದು ದಿನಾಂಕ ನಿಗದಿ ಮಾಡಿದ್ದು, ಮುರುಘಾಶ್ರೀ ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಗೆ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮುರುಘಾಶ್ರೀಗೆ ಶ್ರವಣದೋಷ ಹಿನ್ನೆಲೆಯಲ್ಲಿ ವಿಸಿ ಬದಲು ಖುದ್ದಾಗಿ ಬರಲು ಕೋರ್ಟ್ ಆದೇಶಿಸಿದೆ.
ಫೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುರುಘಾಶ್ರೀಗೆ ಕರ್ನಾಟಕ ಹೈಕೋರ್ಟ್, ಈಗಾಗಲೇ ಷರತ್ತುಬದ್ಧ ಜಾಮೀನು ನೀಡಿದೆ. ಆದ್ರೆ, ಮುರುಘಾಶ್ರೀಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದಂತೆ ಷರತ್ತು ವಿಧಿಸಿದೆ. ಇದೀಗ ವಿಡಿಯೋ ಕಾನ್ಫರೆನ್ಸ್ ಬದಲು ಬದಲು ಖುದ್ದಾಗಿ ಬಂದು ಹೇಳಿಕೆ ದಾಖಲಿಸಲು ಕೋರ್ಟ್ ಜುಲೈ 3 ದಿನಾಂಕ ನಿಗದಿಪಡಿಸಿದೆ.
ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಜಾಮೀನು ನೀಡಿತ್ತು. ಆದರೆ, ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ, ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಜೈಲಿನಿಂದ ಬಿಡುಗಡೆಯಾಗಿದ್ದರು.