AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

POCSO: ಮುರುಘಾ ಶ್ರೀ ವಿರುದ್ಧ ಪೊಲೀಸ್​​ ಲುಕ್‌ಔಟ್‌ ನೋಟಿಸ್ ಜಾರಿ, ಯಾವುದೇ ಕ್ಷಣ ಮುರುಘಾ ಶ್ರೀ ಬಂಧನ ಸಾಧ್ಯತೆ

ಮುರುಘಾಶ್ರೀಗಳಿಗೆ ಇದೀಗ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ. ಡಿವೈಎಸ್ಪಿ ಅನಿಲ್ ರಿಂದ ಮುರುಘಾಶ್ರೀಗೆ ನೋಟಿಸ್ ಜಾರಿಯಾಗಿದೆ. ದೇಶ ಬಿಟ್ಟು ತೆರಳದಂತೆ ಪೊಲೀಸರಿಂದ ನೋಟಿಸ್ ಹೊರಬಿದ್ದಿದೆ.

POCSO: ಮುರುಘಾ ಶ್ರೀ ವಿರುದ್ಧ ಪೊಲೀಸ್​​ ಲುಕ್‌ಔಟ್‌ ನೋಟಿಸ್ ಜಾರಿ, ಯಾವುದೇ ಕ್ಷಣ ಮುರುಘಾ ಶ್ರೀ ಬಂಧನ ಸಾಧ್ಯತೆ
ಪೋಕ್ಸೋ ಪ್ರಕರಣ: ಮುರುಘಾಶ್ರೀ ವಿರುದ್ಧ ಪೊಲೀಸರಿಂದ ಲುಕ್‌ಔಟ್‌ ನೋಟಿಸ್ ಜಾರಿ
TV9 Web
| Edited By: ಸಾಧು ಶ್ರೀನಾಥ್​|

Updated on:Sep 01, 2022 | 9:09 PM

Share

ಚಿತ್ರದುರ್ಗದ ಮುರುಘಾ ಮಠದ (Sri Murugha Matha) ಮುರುಘಾಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ (POCSO case) ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಶ್ರೀಗಳ ವಿರುದ್ಧ ಇದೀಗ ಪೊಲೀಸರಿಂದ ಲುಕ್‌ಔಟ್‌ ನೋಟಿಸ್ ಜಾರಿ ಮಾಡಿದ್ದಾರೆ. ಮುರುಘಾ ಮಠದ ಲೈಂಗಿಕ ಪ್ರಕರಣಗಳ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳು (Murugha Shree) ಆಗಸ್​​ 29ರಂದು ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಬಳಿಕ ಮಾಧ್ಯಮಗಳಲ್ಲಿ ಕಾಡ್ಕಿಚ್ಚಿನಂತೆ ಸುದ್ದಿ ಹಬ್ಬಿದಾಗ ತಕ್ಷಣ ಅವರು ಮಠಕ್ಕೆ ವಾಪಸಾಗಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುರುಘಾಶ್ರೀಗಳಿಗೆ ಇದೀಗ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ. ಡಿವೈಎಸ್ಪಿ ಅನಿಲ್ ರಿಂದ ಮುರುಘಾಶ್ರೀಗೆ ನೋಟಿಸ್ ಜಾರಿಯಾಗಿದೆ. ದೇಶ ಬಿಟ್ಟು ತೆರಳದಂತೆ ಪೊಲೀಸರಿಂದ ನೋಟಿಸ್ ಹೊರಬಿದ್ದಿದೆ.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.

A-3 ಮಠದ ಉತ್ತರಾಧಿಕಾರಿ (ಬಸವಾದಿತ್ಯ) , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ, A-5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ

A-1 ಮುರುಘಾ ಶ್ರೀ ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದಾರೆ.

A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದು,  ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಪೋಕ್ಸೋ ಕೇಸ್​ ತನಿಖೆ ಚುರುಕಾದ ಬೆನ್ನಲ್ಲೇ ಶ್ರೀಗಳಿಗೆ ಬಂಧನದ ಭೀತಿ? ಪೋಕ್ಸೋ ಕೇಸ್​ ತನಿಖೆ ಚುರುಕಾದ ಬೆನ್ನಲ್ಲೇ ಮುರುಘಾ ಶ್ರೀಳಿಗೆ ಬಂಧನದ ಭೀತಿ ತೀವ್ರವಾಗಿದೆ. ಯಾವುದೇ ಕ್ಷಣದಲ್ಲಿ ಮುರುಘಾಶ್ರೀಗಳ ಬಂಧನ ಸಾಧ್ಯತೆಯಿದೆ. ತಡರಾತ್ರಿ ಅಥವಾ ನಾಳೆ ಶುಕ್ರವಾರದೊಳಗೆ ಮುರುಘಾ ಶ್ರೀ ಬಂಧನ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

Published On - 6:14 pm, Thu, 1 September 22

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ