ನಿಘಂಟುಗಳಿಂದ ಶೂದ್ರ ಪದ ತೆಗೆದುಹಾಕಬೇಕು: ಶೂದ್ರ ಹೋಗಿ ಶುದ್ಧವಾಗಬೇಕು; ಹಂಸಲೇಖ
ನನ್ನ ಡಾರ್ಜಿಲಿಂಗ್ ಚಿತ್ರದುರ್ಗ, ನಾನು ಪ್ರೇಮಿಸುತ್ತಿದ್ದ ವೇಳೆ ದುರ್ಗಕ್ಕೆ ಬರುತ್ತಿದೆನು. ಬೆಳಗ್ಗೆಯಿಂದ ಸಂಜೆವರೆಗೆ ಕೋಟೆಯಲ್ಲೇ ಇರುತ್ತಿದ್ದೆವು. ನಮ್ಮ ಪ್ರೇಮದ ಘಟನೆಗಳು ದುರ್ಗದಲ್ಲೇ ನಡೆದಿವೆ.
ಚಿತ್ರದುರ್ಗ: ಶೂದ್ರ ಪದವನ್ನು ಎಲ್ಲ ನಿಘಂಟು (Dictionary) ಗಳಿಂದ ನಿವಾರಿಸಿ ಎಂದು ನಗರದಲ್ಲಿಂದು ತ.ರಾ.ಸು ರಂಗಮಂದಿರದಲ್ಲಿ ಮಾನವ ಬಂಧತ್ವ ವೇದಿಕೆ ಆಯೋಜಿಸಿದ್ದ ಬಂಧುತ್ವ ಅಧಿವೇಶನ ಸಮಾರೋಪ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ನಿಘಂಟುಗಳಿಂದ ಶೂದ್ರ ಪದ ತೆಗೆದುಹಾಕಬೇಕು. ಶೂದ್ರ ಹೋಗಿ ಶುದ್ಧವಾಗಬೇಕು. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ ಮೇಲಿರಬೇಕು. ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ. ಶೂದ್ರ ಹೋಗಿ ಶುದ್ಧವಾಗಬೇಕೆಂಬುದರ ಬಗ್ಗೆ ಎಪ್ರಿಲ್ 14 ಅಂಬೇಡ್ಕರ್ ಜಯಂತಿ ವೇಳೆ ಹಾಡು ಬರೆದು ಹಾಕುತ್ತೇನೆಂದರು. ಬಂಧುತ್ವ ಹೆಸರಿನಲ್ಲಿ ಇಷ್ಟೆಲ್ಲ ಜನ ಸೇರಿದ್ದು ಖುಷಿ. ನೀವು ಸಮಾಜಕ್ಕೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ಭೂಮಿಗೆ ಗೊಬ್ಬರ ಕೊಡುವ ಕಾಮಧೇನು ಆಗಬೇಕು. ನೀವ್ಯಾರೂ ಅಶಿಕ್ಷಿತರಲ್ಲ, ಯುದ್ಧದ ಬಗ್ಗೆ ವಂಶಪಾರಂಪರ್ಯವಾಗಿ ಗೊತ್ತಿದೆ. ಯುದ್ಧದಲ್ಲಿ ನಾವು ಯಾವತ್ತೂ ಸೋತಿಲ್ಲ. ರಂಗಭೂಮಿಯ ಮೇಲೆ ಕಲಾವಿದ ಸಾಯುತ್ತಾನೆಯೆ ಹೊರತು ಸುಳ್ಳು ಹೇಳಲ್ಲ ಎಂದು ಹೇಳಿದರು.
ನನ್ನ ಡಾರ್ಜಿಲಿಂಗ್ ಚಿತ್ರದುರ್ಗ, ನಾನು ಪ್ರೇಮಿಸುತ್ತಿದ್ದ ವೇಳೆ ದುರ್ಗಕ್ಕೆ ಬರುತ್ತಿದೆನು. ಬೆಳಗ್ಗೆಯಿಂದ ಸಂಜೆವರೆಗೆ ಕೋಟೆಯಲ್ಲೇ ಇರುತ್ತಿದ್ದೆವು. ನಮ್ಮ ಪ್ರೇಮದ ಘಟನೆಗಳು ದುರ್ಗದಲ್ಲೇ ನಡೆದಿವೆ. ನಾನು ಕಂಡ ಮೇರುನಟ ರಾಜ್ ಕುಮಾರ್, ಅವರು ರಾಜಕೀಯಕ್ಕೆ ಬರದೆ ಕನ್ನಡ ನುಡಿನಾಡಿಯಾಗಿ ಬಂದರು. ರಾಜ್ ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಚಿತ್ರದುರ್ಗದಿಂದ. ನಾನು ವಿವೇಕ ವೇದಿಕೆ ಕಟ್ಟಿದ್ದು ಚಳ್ಳಕೆರೆಯಲ್ಲಿ, ಯಶಸ್ಸು ಗಳಿಸಿದ್ದು ಚಿತ್ರದುರ್ಗದಲ್ಲಿ. ಇಂದು ಯಾವ ಭಾರತೀಯನೂ ಏಕಾಂಗಿಯಲ್ಲ; ಎಲ್ಲರೂ ಸಾಲಗಾರರು. ಶಸ್ತ್ರಾಸ್ತ್ರಗಳ ಸಾಲದ ಭಾರ ಭಾರತೀಯರ ಮೇಲಿದೆ. ನಾಡಿನ ಸಮಸ್ಯೆ ಪರಿಹರಿಸಿ ಉಪಾಯ ಕಂಡುಹಿಡಿಯಲು ಇದೊಂದು ಅವಕಾಶ. ನೀವೆಲ್ಲ ಎಚ್ಚರವಾಗಿರಬೇಕು. ನಮ್ಮನ್ನು ಯುದ್ಧಕ್ಕೆ ಕೆಣಕಿ ಅವರು ಬಲಿಹಾಕಲು ಯತ್ನಿಸುತ್ತಿಸಿದ್ದಾರೆ. ಸೋಲದ ಯೋಧರಿಗೆ ವಿಷಭರಿತ ಸೇಬು ಹಂಚಲಾಗುತ್ತಿದೆ. ನೀವು ಬುದ್ಧ ಆಗಬೇಡಿ, ಶುದ್ಧರಾಗಿ ಸಾಕು. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳು ಯುದ್ಧದಲ್ಲಿ ತೊಡಗಿದ್ದವು. ಸಂವಿಧಾನ ಬಂತು ಯುದ್ಧ ನಿಂತಿತು ಎಂದರು.
ಇದನ್ನೂ ಓದಿ:
‘ಎರಡು ದೊಡ್ಡ ಕನಸುಗಳ ಸಮ್ಮಿಲನ’; ಮತ್ತೊಂದು ದೊಡ್ಡ ಹೆಜ್ಜೆ ಇಡಲು ಹೊಂಬಾಳೆ ಫಿಲ್ಮ್ಸ್ ರೆಡಿ
Ram Navami 2022: ಶ್ರೀ ರಾಮನನ್ನು ರಾಮಚಂದ್ರ ಎಂಬ ಅನ್ವರ್ಥ ನಾಮದಿಂದ ಕರೆದವರು ಯಾರು, ಯಾಕೆ?