Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಪರಿಷತ್​ನಲ್ಲಿ ಕ್ಲಬ್ ಕಾರ್ಯವೈಖರಿ ವರದಿ ಪ್ರಸ್ತಾಪ: ದುಬಾರಿ ದರಕ್ಕೆ ಕಡಿವಾಣ ಹಾಕುವಂತೆ ಬಿಜೆಪಿ ಒತ್ತಾಯ

ವಿಧಾನಪರಿಷತ್​ನಲ್ಲಿ ಇಂದು ಕ್ಲಬ್ ಕಾರ್ಯವೈಖರಿ ಸಂಬಂಧ ವರದಿ ಪ್ರಸ್ತಾಪ ಮಾಡಲಾಗಿದೆ. ಈ ಕುರಿತಾಗಿ 23 ಅಂಶಗಳ ವರದಿ ಮಂಡಿಸಿ ಜಾರಿಗೆ ತರಬೇಕೆಂದು ಬಿಜೆಪಿ ಒತ್ತಾಯಿಸಿದೆ. ಕ್ಲಬ್​ಗಳ ಸದಸ್ಯತ್ವ ದುಬಾರಿ ದರಕ್ಕೆ ಕಡಿವಾಣ ಹಾಕುವಂತೆ ವಿಧಾನಪರಿಷತ್​ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸುವ ಕೆಲಸ ಮಾಡಿದೆ ಎಂದು ಕಿಡಿಕಾರಿದ್ದಾರೆ.

ವಿಧಾನಪರಿಷತ್​ನಲ್ಲಿ ಕ್ಲಬ್ ಕಾರ್ಯವೈಖರಿ ವರದಿ ಪ್ರಸ್ತಾಪ: ದುಬಾರಿ ದರಕ್ಕೆ ಕಡಿವಾಣ ಹಾಕುವಂತೆ ಬಿಜೆಪಿ ಒತ್ತಾಯ
ಬಿಜೆಪಿ ಸದಸ್ಯ ಎನ್.ರವಿಕುಮಾರ್
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2024 | 7:58 PM

ವಿಧಾನಪರಿಷತ್, ಫೆಬ್ರವರಿ 15: ವಿಧಾನಪರಿಷತ್​ನಲ್ಲಿ ಕ್ಲಬ್ (Club) ಕಾರ್ಯವೈಖರಿ ಸಂಬಂಧ ವರದಿ ಪ್ರಸ್ತಾಪಿಸಲಾಗಿದ್ದು, ಕ್ಲಬ್​ಗಳ ಸದಸ್ಯತ್ವ ದುಬಾರಿ ದರಕ್ಕೆ ಕಡಿವಾಣ ಹಾಕುವಂತೆ 23 ಅಂಶಗಳ ವರದಿ ಮಂಡಿಸಿ ಜಾರಿಗೆ ತರಬೇಕೆಂದು ವಿಧಾನಪರಿಷತ್​ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ರಾಜ್ಯಪಾಲರ ಭಾಷಣವನ್ನು ಪ್ರಸ್ತಾಪಿಸಿದ್ದು, ರಾಜ್ಯ ಸರ್ಕಾರವು ರಾಜ್ಯಪಾಲರ ಬಾಯಿ ಮೂಲಕ ಸುಳ್ಳು ಹೇಳಿಸುವ ಕೆಲಸ ಮಾಡಿದೆ. ನಮ್ಮ ಹಿಂದಿನ ಸರ್ಕಾರ ನೀಡಿದ ಕೊಡುಗೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವರಾದ ಶಿವರಾಜ ತಂಗಡಗಿ, ಡಾ.ಜಿ.ಪರಮೇಶ್ವರ್ ಸರ್ಕಾರದ ವಿರುದ್ಧ ಸುಳ್ಳು ಆಪಾದನೆ ಮಾಡಬೇಡಿ ಎಂದು ಪಟ್ಟುಹಿಡಿದರು.

ಪರಮೇಶ್ವರ್ ಮೂರು ಬಾರಿ ಗೃಹ ಸಚಿವರು, ನಾನು ಒಂದೇ ಬಾರಿ ಅಷ್ಟೇ: ಆರ್​. ಅಶೋಕ್

ವಿಪಕ್ಷ ನಾಯಕ ಆರ್​. ಅಶೋಕ್​ ಮಾತನಾಡಿ, ನಾನು ಗೃಹ ಸಚಿವ ಇದ್ದಾಗ ಮಂಗಳೂರಲ್ಲಿ ಪಬ್ ಮೇಲೆ ದಾಳಿ ಆಯ್ತು. ಆಗ ನಾನು ಗೂಂಡಾ ಕಾಯ್ದೆ ಹಾಕಿದ್ದೆ. ದಿ. ಅರುಣ್ ಜೇಟ್ಲಿ ಕರೆ ಮಾಡಿ ಕ್ರಮ ಆಗಬೇಕು ಎಂದು ಹೇಳಿದ್ದರು. ಪರಮೇಶ್ವರ್ ಅವರಿಗೆ ಬಂದಿರುವ ಕರೆಗಳೆಲ್ಲಾ ನೋ ಆಕ್ಷನ್ ಅಂತ ಬಂದಿದೆ ಎಂದರು.

ಇದನ್ನೂ ಓದಿ: ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?

ಪರಮೇಶ್ವರ್ ಮೂರು ಬಾರಿ ಗೃಹ ಸಚಿವರು, ನಾನು ಒಂದೇ ಬಾರಿ ಗೃಹ ಸಚಿವ ಆದವನು. ನಾನು ಸಿಂಗಲ್ ಸ್ಟಾರ್ ಅಷ್ಟೇ. ಎಎಸ್​ಐ ತರಹ ನಾನು ನೀವು ಮೂರು ಬಾರಿ ಗೃಹ ಸಚಿವ, ನಿಮಗೆ ಸ್ಟಾರ್ ಹೆಚ್ಚಿದೆ. ನೀವು ಇಲ್ಲಿಂದಲೇ ಆಕ್ಷನ್ ಎಂದು ಹೇಳಿ ಎಂದಿದ್ದಾರೆ.

ಈ ದರಿದ್ರ ಸರ್ಕಾರದಿಂದ ನಮಗೆ ಏನೂ ನಿರೀಕ್ಷೆ ಇಲ್ಲ

ನಳೆ ಸಿದ್ದರಾಮಯ್ಯ ಬಜೆಟ್ ವಿಚಾರವಾಗಿ ಮಾತನಾಡಿದ ಅವರು,​ ಈ ಬಗ್ಗೆ ನಮಗೆ ಯಾವ ನಿರೀಕ್ಷೆಯೂ ಇಲ್ಲ. ಆ ಇಲಾಖೆಯಿಂದ ಈ ಇಲಾಖೆಗೆ ಹುಡುಕುವ ಕೆಲಸ ಮಾಡುತ್ತಾರೆ. ನೀರಾವರಿ, ಕೃಷಿ, ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದಾಗ ಸಚಿವರು ಮುಗಿಬಿದ್ದರು

ಹಿಂದಿನ ಬಜೆಟ್​​ನಲ್ಲಿಯೇ ಎಲ್ಲದಕ್ಕೂ ಹಣ ಕಡಿತ ಮಾಡಿದ್ದಾರೆ. ಹೀಗಾದರೆ ಏನು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ. ಈ ದರಿದ್ರ ಸರ್ಕಾರದಿಂದ ನಮಗೆ ಏನೂ ನಿರೀಕ್ಷೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್