ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿಕೆ ಶಿವಕುಮಾರ್, ಜತೆಗೊಂದು ಕಿವಿಮಾತು

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್   ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಕನಕನಪುರ ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ನೀಡಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ವಿರೋಧ ಪಕ್ಷದವರ ಜೊತೆ ಜಗಳ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್​ ನವರಿಗೆ ಕಾಂಗ್ರೆಸ್​​​​ ಆಹ್ವಾನ ಕೊಟ್ಟು ಗಮನಸೆಳೆದಿದ್ದಾರೆ.

ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿಕೆ ಶಿವಕುಮಾರ್, ಜತೆಗೊಂದು ಕಿವಿಮಾತು
Dk Shivakumar

Updated on: Jun 07, 2026 | 9:47 PM

ರಾಮನಗರ, (ಜೂನ್ 07): “ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ” ಹೀಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸ್ವಕ್ಷೇತ್ರ ಕನಕನಪುರ (Kanakapura) ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ನೀಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್   ಅವರು ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಿಕೆಶಿ, ಕ್ಷೇತ್ರ ಅಭಿವೃದ್ಧಿ ಜೊತೆಗೆ ಜನರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು.

“ನನ್ನ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ಸೇವೆಗೆ ಇರುವವನು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇ‌‌ನೆ. ನನ್ನ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದ ನಾನು ಜನರ ಸೇವಕ. ಜಿಲ್ಲಾ ಪಂಚಾಯತಿ, ಟಿಎಪಿಸಿಎಂಎಸ್ ಮೂಲಕ ನನ್ನ ರಾಜಕೀಯ ಪ್ರಾರಂಭ ಮಾಡಿದೆ. ಪಕ್ಷಬೇಧ ಮರೆತು ನನ್ನನ್ನು ಬೆಳೆಸಿದ್ದೀರಿ” ಎಂದರು.

ಇದನ್ನೂ ಓದಿ: ಸ್ವಕ್ಷೇತ್ರ ಕನಕಪುರಕ್ಕೆ ಡಿಕೆ ಶಿವಕುಮಾರ್ ಭೇಟಿ: ನಿಮ್ಮೊಂದಿಗೆ ಸದಾ ಇರ್ತೆನೆ ಎಂಬ ಸಂದೇಶ ರವಾನಿಸಿದ ಸಿಎಂ

ಮೆಡಿಕಲ್ ಕಾಲೇಜು ನನ್ನ ಕನಸಾಗಿತ್ತು

ತುಂಗಣಿ ಗ್ರಾಮದಲ್ಲಿ ಮಾತನಾಡಿದ ಅವರು, “ಅಕ್ಷರ, ಆಶ್ರಯ, ಆರೋಗ್ಯ ಹುಡುಕಿಕೊಂಡು ವಲಸೆ ಹೋಗಬೇಡಿ. ಅದೆಲ್ಲವೂ ಇಲ್ಲಿಯೇ ದೊರೆಯಲಿದೆ. ಕನಕಪುರದಲ್ಲಿ ದೊಡ್ಡ ಮೆಡಿಕಲ್ ಕಾಲೇಜು ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಇಡೀ ರಾಜ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಇದ್ದರೆ ಅದು ಈ ಕ್ಷೇತ್ರದಲ್ಲಿ ಮಾತ್ರ. ಯಡಿಯೂರಪ್ಪ ಅವರು ನಮಗೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದರು. ನಾನು ಛಲಬಿಡದೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದೇನೆ” ಎಂದು ತಿಳಿಸಿದರು.

ನಿಮ್ಮ ಪಾದಗಳಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದ್ದೇನೆ

ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಇದೊಂದು ಇತಿಹಾಸಕ್ಕೆ ಸಾಕ್ಷಿ ದಿನ. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಪ್ರಮಾಣ ವಚನ ಮಾಡಿದ್ದೇನೆ.ಇದು ನಿಮ್ಮ ಗ್ರಾಮಕ್ಕೆ ಗೌರವ ಸಲ್ಲಬೇಕು. ನಾನು 1985ರಿಂದ ಚುನಾವಣೆ ನಿಂತಾಗಲಿಂದಲೂ ನನ್ನ ಜೊತೆ ಇದ್ದೀರಿ. ಸಾಕಷ್ಟು ಹಿರಿಯರು ಬೆನ್ನಾಲಬಾಗಿ ನಿಂತು ಆರ್ಶಿವಾದ ಮಾಡಿದ್ದಾರೆ. ನಾನು ಸಿಎಂ ಅಂತಾ ಹೇಳಿಕೊಳ್ಳಲು ಬಂದಿಲ್ಲ.ನಾನು ಎಂದಿಗೂ ಊರಿನ ಮಗ. ನನ್ನನ್ನ ಬಿಜೆಪಿಯವರು ಜೈಲಿಗೆ ಕಳುಹಿಸಿದರು. ನಾನು ಎಂದಿಗೂ ಅಗೌರವ ತಂದಿಲ್ಲ. ರಾಜಕೀಯವಾಗಿ ಷ್ಯಡ್ಯಂತ್ರ ನಡೆಯಿತು. ಆದರೂ ನೀವು ನನಗೆ ದೊಡ್ಡ ಶಕ್ತಿ ನೀಡಿದ್ರಿ. ಆದರೂ ಕೊನೆಗೂ ಅಧಿಕಾರ ನನಗೆ ಕೊಟ್ಟಿದ್ದಾರೆ. ಅಧಿಕಾರ ಹಂಚಿಕೆ ಪ್ರಕಾರ ನೀಡಿದ್ದಾರೆ. ನಿಮ್ಮ ಪಾದಗಳಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ

“ಕ್ಷೇತ್ರದಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು.‌ ನನ್ನ ಕ್ಷೇತ್ರದ ಜನ ವಲಸೆ ಹೋಗುವುದನ್ನು ತಪ್ಪಿಸಲು ಕೆಲಸ ಮಾಡಲಾಗುತ್ತಿದೆ. ದೊಡ್ಡಆಲಳ್ಳಿ, ಹೊಸದುರ್ಗಗಳಲ್ಲಿ ಸಿಎಸ್ ಆರ್ ಅನುದಾನ ಬಳಸಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ದೊರೆಯುವ ಶಿಕ್ಷಣ ಇಲ್ಲಿಯೇ ದೊರೆಯಬೇಕು. ನಿಮಗೆ ಆಶ್ರಯ, ಆರೋಗ್ಯ, ಅಕ್ಷರ ನೀಡುವುದು ನನ್ನ ಮೊದಲ ಆದ್ಯತೆ.‌ ಇದೇ ವೇಳೆ ಭೂಮಿ ಮಾರಬೇಡಿ- ವ್ಯವಸಾಯ ಬಿಡಬೇಡಿ” ಎಂದು ಕಿವಿಮಾತು ಹೇಳಿದರು.

ಜೆಡಿಎಸ್-ಬಿಜೆಪಿಗರಿಗೆ ಆಹ್ವಾನ ಕೊಟ್ಟ ಡಿಕೆಶಿ

ನನ್ನ ಕಷ್ಟಕಾಲದಲ್ಲಿ ನನ್ನ ಜೊತೆ ಇದ್ದೀರಿ. ಯಾವ ಕುತಂತ್ರಕ್ಕೂ ನೀವು ಬಗ್ಗಲಿಲ್ಲ. ನಾನು ನಿಮ್ಮ ಋಣವನ್ನ ತೀರಿಸಬೇಕಿದೆ. ಗ್ರಾಮಕ್ಕೆ ಏನೆಲ್ಲ ಅಭಿವೃದ್ಧಿ ಮಾಡಬೇಕೋ ಮಾಡಿದ್ದೇನೆ. ನಾವು ಬೆಂಗಳೂರು ಜಿಲ್ಲೆಯವರು ಎಂದು ಹೇಳಿಕೊಳ್ಳಲು ಗೌರವ ಬರುತ್ತದೆ. ನನಗೆ ಸಿಕ್ಕಿರೋ ಬಿರುದು ನನ್ನದಲ್ಲ ಅದು ನಿಮ್ಮದು. ಯಾರು ಕೂಡ ಬಿಜೆಪಿ ಜೆಡಿಎಸ್ ನವರ ಜೊತೆ ಜಗಳ ಮಾಡಬಾರದು. ಓಟ್ ಹಾಕುವುದು ಬಿಡುವುದು ಅವರ ಆತ್ಮಸಾಕ್ಷಿಗೆ ಬಿಟ್ಟಿದ್ದು. ಯುವಕರಿಗೆ ರಾಜಕೀಯ ಪ್ರಜ್ಞೆ ಇದೆ. ಯುವಕರು ಯಾವುದೇ ಗಲಾಟೆ ಮಾಡಿಕೊಳ್ಳಬಾರದು. ಮುಂದೆ ಏನು ಕೆಲಸ ಆಗಬೇಕು ಅದನ್ನ ಮಾಡುತ್ತೇನೆ . ತಾಲೂಕಿನ ಸ್ವಾಭಿಮಾನ ಉಳಿಸಿದ್ದೇನೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರಿಗೆ ನನ್ನ ಮನೆ ಬಾಗಿಲು ತೆಗೆದಿದೆ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾಂಗ್ರೆಸ್​​​ಗೆ ಆಹ್ವಾನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us