ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಭಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಬಂದಿದೆ. ಮೋದಿ ಸರ್ಕಾರದಿಂದ ಬಂದಿರುವ ಆತಂಕವನ್ನು ಜನರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ. ಸಂವಿಧಾನವನ್ನು ಬಿಜೆಪಿ, ಆರ್ಎಸ್ಎಸ್ ಗೌರವಿಸುವುದಿಲ್ಲ. ಸಂವಿಧಾನ ಜಾರಿಯಾದ ದಿನದಿಂದ ಆಂತರಿಕವಾಗಿ ಬಿಜೆಪಿ ವಿರೋಧಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಫೆಬ್ರವರಿ 25: ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಏನು ಆತಂಕ ಬಂದಿದೆ ಎಂಬುವುದನ್ನು ಜನರಿಗೆ ತಿಳಿಸುವ ಕೆಲಸ ಮಾಡಿದ್ದೇವೆ. ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದ್ದಾರೆ. ಸಂವಿಧಾನ ಜಾರಿಯಾಗಿ 75ನೇ ವರ್ಷ ಹಿನ್ನೆಲೆಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ನಗರದ ಅರಮನೆ ಮೈದಾನದಲ್ಲಿ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಭಾಗಿ ಮಾತನಾಡಿದ ಅವರು, ಮೋದಿ ಸರ್ಕಾರದಿಂದ ಬಂದಿರುವ ಆತಂಕವನ್ನು ಜನರಿಗೆ ತಿಳಿಸಿದ್ದೇವೆ. ಡಾ.ಬಿ.ಅರ್.ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನ ಜಾರಿಯಾದ ದಿನದಿಂದ ಆಂತರಿಕವಾಗಿ ಬಿಜೆಪಿ ವಿರೋಧಿಸುತ್ತಿದೆ ಎಂದು ಕಿಡಿಕಾರಿದಾರೆ.
ಸಂವಿಧಾನವನ್ನು ಬಿಜೆಪಿ, ಆರ್ಎಸ್ಎಸ್ ಗೌರವಿಸುವುದಿಲ್ಲ
ಸಂವಿಧಾನವನ್ನು ಬಿಜೆಪಿ, ಆರ್ಎಸ್ಎಸ್ ಗೌರವಿಸುವುದಿಲ್ಲ. ಮಹಿಳೆಯರು, ಕಾರ್ಮಿಕರು, ಹಿಂದುಳಿದವರ ವಿರುದ್ಧ ಬಿಜೆಪಿ ಪಕ್ಷ ಇರುವುದು. ನರೇಂದ್ರ ಮೋದಿ ಸಂಪುಟದಲ್ಲಿ ಅನಂತಕುಮಾರ್ ಹೆಗಡೆ ಮಂತ್ರಿಯಾಗಿದ್ದರು. ಹೆಗಡೆ ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಿಸಲು ಎಂದು ಹೇಳಿದ್ದರು. ಅನಂತಕುಮಾರ್ ಹೆಗಡೆ ವಿರುದ್ಧ ಮೋದಿ, ಅಮಿತ್ ಶಾ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂವಿಧಾನ ಬದಲಾವಣೆ ಮಾಡಬೇಕೆಂದು ಸಾಕಷ್ಟು ಜನರಿಂದ ಸಂಚು ನಡೀತಿದೆ: ಮಲ್ಲಿಕಾರ್ಜುನ ಖರ್ಗೆ ಕಿಡಿ
ಸಂವಿಧಾನ ಬದಲಿಸಿದರೆ ರಕ್ತಪಾತ ಆಗುತ್ತೆ ಎಂದು ಹೆದರಿ ಸುಮ್ಮನಿದ್ದಾರೆ. ನಮ್ಮ ಸಂವಿಧಾನ ಬದಲಾವಣೆಯಾದರೆ ನಾವು ಬದುಕಲು ಸಾಧ್ಯವಿಲ್ಲ. ಪರೋಕ್ಷವಾಗಿ ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎಂಪಿ ಚುನಾವಣೆಯಲ್ಲಿ ಸಂವಿಧಾನಕ್ಕೆ ವಿರುದ್ಧ ಇರುವ ಬಿಜೆಪಿ ಸೋಲಿಸಿ ಎಂದಿದ್ದಾರೆ.
ಅಸಮಾನತೆ ಹೋಗಲಾಡಿಸುವುದು ಸರ್ಕಾರದ ಕರ್ತವ್ಯ
ವೈವಿಧ್ಯ ಇರುವ ಸಮಾಜಕ್ಕೆ ನಾವು ಕಾಲಿಟ್ಟದ್ದೇವೆ. ಒಂದು ಓಟು ಒಂದು ಮೌಲ್ಯ. ಸಮಾಜದಲ್ಲಿ ಅಸಮಾನತೆ ಇದೆ. ಈ ಅಸಮಾನತೆ ಹೋಗಲಾಡಿಸುವುದು ಪ್ರತಿಯೊಂದು ಸರ್ಕಾರದ ಕರ್ತವ್ಯ. ಸಂವಿಧಾನದ ಆಶಯಗಳನ್ನ ಈಡೇರಿಸಬೇಕು. ಆಗ ಮಾತ್ರ ಆರ್ಥಿಕ ಸಮಾನತೆ ಹೋಗಲಾಡಿಸಬಹುದು. ಬಹು ಸಂಖ್ಯಾತ ಜನರ ವಿದ್ಯೆ ಕಲಿಯದ ಕಾರಣ ಅಸಮಾನತೆ ಇದೆ. ಸಂವಿಧಾನದಿಂದ ಮಾತ್ರ ಅಸಮಾನತೆ ಹೋಗಲಾಡಿಸಬಹುದು.
ಇದನ್ನೂ ಓದಿ: ನನ್ನ ಸೋಲಿಗೆ ‘ಕೈ’ ಮುಖಂಡರೇ ಕಾರಣ, ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು: ಅನ್ಸಾರಿ ಬಾಂಬ್
ಯಾವ ಜನ ಅವಶ್ಯಕತೆ ವಂಚಿತರಾಗಿದ್ದಾರೆ ಅವರು ಸ್ವಾಭಿಮಾನದಿಂದ ಬದುಕವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಈ ಬಾರಿ ಆರ್ಥಿಕ, ಸಾಮಾಜಿಕ ಶಕ್ತಿ ಇಲ್ಲದವರಿಗೆ ಶಕ್ತಿ ನೀಡಲು ಅಧಿಕಾರಕ್ಕೆ ಬಂದ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಬಿಜೆಪಿಯವರು ನುಡಿದಂತೆ ನಡೆದಿಲ್ಲ. 1 ಕೋಟಿ 20 ಲಕ್ಷ ಜನ ಗ್ಯಾರಂಟಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಯಾರು ಅವಕಾಶ ವಂಚಿತರಾದರಾಗಿದ್ದಾರೆ ಅವರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ.
ವಿರೋಧಿಗಳು ಗ್ಯಾರಂಟಿ ಯೋಜನೆ ದಿವಾಳಿ ಆಗುತ್ತೆ ಎಂದಿದ್ದರು. ನರೇಂದ್ರ ಮೋದಿ ಅವರೇ ಹೇಳಿದ್ದರು. ಆದರೆ ಈಗ ಮೋದಿ ಗ್ಯಾರಂಟಿ ಅಂತಾರೆ. ಬಿಜೆಪಿವರು ಮನೆ ದೇವರು ಸುಳ್ಳು. ಮೋದಿ, ರಾಜ್ಯದ ಬಿಜೆಪಿ ನಾಯಕರು ಸುಳ್ಳು ಹೇಳಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಮನುಸ್ಮೃತಿಗೆ ಹತ್ತಿರವಾದವರು ಬಿಜೆಪಿ. ಸಂವಿಧಾನ ರದ್ದು ಮಾಡಿದರೆ ರಕ್ತ ಪಾತ ಆಗುತ್ತೆ ದುರ್ಬಲ ಮಾಡುತ್ತಿದ್ದಾರೆ. ವಿರೋಧಿಗಳನ್ನು ಕಿತ್ತು ಹಾಕಿದರೆ ಸಂವಿಧಾನ ಉಳಿಯುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:59 pm, Sun, 25 February 24