ಶಿವಮೊಗ್ಗದಲ್ಲಿ ಆದಷ್ಟು ಬೇಗ ವಿಮಾನಯಾನ ಆರಂಭಿಸುವ ಅಪೇಕ್ಷೆಯಿದೆ, ಹಾಸನದಲ್ಲೂ ಏರ್​ಪೋರ್ಟ್ ಕಾಮಗಾರಿ ಆರಂಭವಾಗಲಿದೆ: ಸಿಎಂ ಯಡಿಯೂರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನಿಗದಿತ ಅವಧಿಗೆ ಮುಂಚಿತವಾಗಿ ಕಾಮಗಾರಿ ಮುಗಿಯಬೇಕು. ಉತ್ತಮ ದರ್ಜೆಯ ಕಾಮಗಾರಿ ಆಗಬೇಕು. ಸಿಎಂ ಯಡಿಯೂರಪ್ಪಗೆ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಭೈರತಿ ಬಸವರಾಜ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು.

ಶಿವಮೊಗ್ಗದಲ್ಲಿ ಆದಷ್ಟು ಬೇಗ ವಿಮಾನಯಾನ ಆರಂಭಿಸುವ ಅಪೇಕ್ಷೆಯಿದೆ, ಹಾಸನದಲ್ಲೂ ಏರ್​ಪೋರ್ಟ್ ಕಾಮಗಾರಿ ಆರಂಭವಾಗಲಿದೆ: ಸಿಎಂ ಯಡಿಯೂರಪ್ಪ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: guruganesh bhat

Updated on:Jun 21, 2021 | 11:19 PM

ಶಿವಮೊಗ್ಗ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ​ ಆಗುವುದರಿಂದ ಕೈಗಾರಿಕೆಗಳ  ಅಭಿವೃದ್ಧಿ ಆಗಲಿದೆ. 384 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ​ ಕಾಮಗಾರಿ ನಡೆಯುತ್ತಿದೆ. ಕೈಗಾರಿಕಾ ಕ್ಷೇತ್ರ ಬೆಳೆದರೆ ಯುವಕರಿಗೆ ಉದ್ಯೋಗ ಸಿಗಲಿದೆ. ಮಧ್ಯ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. 2022ರ ಜೂನ್​ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ನಮಗೂ ಆದಷ್ಟು ಬೇಗ ವಿಮಾನಯಾನ ಆರಂಭಿಸಬೇಕೆಂಬ ಅಪೇಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರದಲ್ಲೇ ಹಾಸನ ಏರ್​ಪೋರ್ಟ್​ ಕಾಮಗಾರಿಯೂ ಆರಂಭವಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನಿಗದಿತ ಅವಧಿಗೆ ಮುಂಚಿತವಾಗಿ ಕಾಮಗಾರಿ ಮುಗಿಯಬೇಕು. ಉತ್ತಮ ದರ್ಜೆಯ ಕಾಮಗಾರಿ ಆಗಬೇಕು. ಸಿಎಂ ಯಡಿಯೂರಪ್ಪಗೆ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಭೈರತಿ ಬಸವರಾಜ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು.

ಎರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ, ನನ್ನ ಜವಾಬ್ದಾರಿ ಈಗ ಜಾಸ್ತಿ ಆಗಿದೆ ಕರ್ನಾಟಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದಿನ ಎರಡು ವರ್ಷ ಕಾಲ ಮುಂದುವರಿಯಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಅವರು  ದೆಹಲಿಯಲ್ಲಿ ಸ್ಪಷ್ಟಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆದಿದ್ದ ಚರ್ಚೆಗಳ ವಿಚಾರದ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಅವಧಿ ಪೂರ್ಣ BSY ಅವರೇ ಇರ್ತಾರೆಂದು ಹೇಳಿದ್ದಾರೆ. ಅವರೇ ಹೀಗೆ ಹೇಳಿದ ಮೇಲೆ ಈ ಪ್ರಶ್ನೆಯೇ ಉದ್ಭವ ಆಗಲ್ಲ. ನಾನು ಭರವಸೆ ಕೊಡ್ತೇನೆ ಇನ್ನೂ 2 ವರ್ಷ ನಾನೇ ಸಿಎಂ ಎಂದು ಹಾಸನದಲ್ಲಿ ಸಭೆಯ ಬಳಿಕ ಸಿಎಂ ಬಿ.ಎಸ್​. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ

ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?

(CM Yediyurappa says have desire to start an airport in Shimoga as soon as possible and hassan also)

Published On - 5:30 pm, Sat, 12 June 21