ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧ ಬಹುಕೋಟಿ ಭ್ರಷ್ಟಾಚಾರ ಆರೋಪ; ದೂರು ದಾಖಲು
ರೈತರಿಗೆ ನೀಡುವ ಯಂತ್ರಗಳ ಖರೀದಿ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ದೂರಿರುವ ಕೃಷ್ಣಮೂರ್ತಿ ದೂರಿನ ಜತೆ ಕೆಲವು ದಾಖಲೆಗಳನ್ನೂ ಆಧಾರವಾಗಿ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕದ ಕೃಷಿ ಇಲಾಖೆಯಲ್ಲಿ ₹210 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು ಸಲ್ಲಿಸಲಾಗಿದೆ. ‘ಎಸಿಎಫ್ ಕರ್ನಾಟಕ’ ಸಂಘಟನೆಯ ಕೃಷ್ಣಮೂರ್ತಿ ಎಂಬುವವರು ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ಮತ್ತು ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ದಿವಾಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ರೈತರಿಗೆ ನೀಡುವ ಯಂತ್ರಗಳ ಖರೀದಿ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ದೂರಿರುವ ಕೃಷ್ಣಮೂರ್ತಿ ದೂರಿನ ಜತೆ ಕೆಲವು ದಾಖಲೆಗಳನ್ನೂ ಆಧಾರವಾಗಿ ನೀಡಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ, ಕಲಬುರಗಿಗೆ ಪ್ರತ್ಯೇಕ ರೈಲ್ವೆ ವಿಭಾಗದ ಕುರಿತು ಕೇಂದ್ರ ಸಚಿವರ ಜತೆ ಚರ್ಚಿಸಿದ ಸಿಎಂ ಬೊಮ್ಮಾಯಿ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವೈಷ್ಣವ್ ಜತೆ ಚರ್ಚಿಸಿದ್ದೇನೆ. ಕಲಬುರಗಿಗೆ ರೈಲ್ವೆ ವಿಭಾಗ ನೀಡುವಂತೆ ಮನವಿ ಮಾಡಿದ್ದೇವೆ. ಹುಬ್ಬಳ್ಳಿ-ಅಂಕೋಲಾ ಮಾರ್ಗ ಬಗ್ಗೆಯೂ ಚರ್ಚಿಸಲಾಗಿದೆ. ಬೆಂಗಳೂರು ಸಬ್ಅರ್ಬನ್ ಯೋಜನೆ ಆರಂಭಿಸಲು ಮನವಿ ಸಲ್ಲಿಸಿದ್ದೇನೆ ಎಂದು ದೆಹಲಿಯ ರೈಲ್ವೆ ಭವನದ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಬ್ರಾಡ್ಬ್ಯಾಂಡ್ಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಿದ್ದೇವೆ. ಅಲ್ಲದೇ ರಾಜ್ಯದಲ್ಲಿ ಒಟ್ಟು ₹4,300 ಕೋಟಿ ವೆಚ್ಚದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಜತೆಗೆ ಬಿ.ಎಲ್.ಸಂತೋಷ್ ಜತೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದಾಗಿಯೂ ಅವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ:
ಅಫ್ಘಾನಿಸ್ತಾನದಲ್ಲಿ ಕಾಲೇಜುಗಳ ತರಗತಿ ಆರಂಭ; ಗಂಡು- ಹೆಣ್ಣು ಮಕ್ಕಳ ನಡುವೆ ಪರದೆ ಹಾಕಿ ಪಾಠ
ಅಸ್ಪೃಶ್ಯತೆಗೆ ಕಡಿವಾಣ ಹಾಕುವುದು ನಮ್ಮ ಗುರಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
(Complaint registration against Karnataka Agriculture Minister BC Patil on corruption charges)
Published On - 5:18 pm, Tue, 7 September 21