‘CM ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ, ದೆಹಲಿಯಲ್ಲಿ ದಾಖಲೆ ಬಿಡುಗಡೆ’

ಮೈಸೂರು: ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ 5,000 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪವಿದೆ. ಈ ಬಗ್ಗೆ ಬಿಜೆಪಿಯವರೇ ನನಗೆ ದಾಖಲೆಗಳನ್ನು ಕೊಟ್ಟಿದ್ದಾರೆ. ಆದರೆ ದಾಖಲೆ ಕೊಟ್ಟವರು ಯಾರೆಂದು ನಾನು ಹೇಳುವುದಿಲ್ಲ ಎಂದು ಮೈಸೂರು ನಗರದಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ. ಸಿಎಂ ಪುತ್ರನ ವಿರುದ್ಧ ಸಹಿ ಹಾಕಿದ್ದಾರಾ ಬಿಜೆಪಿ ಶಾಸಕರು? ನಾವು ದಾಖಲೆಗಳನ್ನು ಕಂತುಗಳ ಪ್ರಕಾರ ಬಿಡುಗಡೆ ಮಾಡ್ತೇವೆ. ಬಿಜೆಪಿ ಶಾಸಕರು ಸಹಿ ಸುಳ್ಳು ಎಂದು ಅವರು ಹೇಳಬಹುದು. ಆದ್ರೆ ಸಿಎಂ ಪುತ್ರ […]

‘CM ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ, ದೆಹಲಿಯಲ್ಲಿ ದಾಖಲೆ ಬಿಡುಗಡೆ’
Edited By:

Updated on: Aug 26, 2020 | 1:09 PM

ಮೈಸೂರು: ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ 5,000 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪವಿದೆ. ಈ ಬಗ್ಗೆ ಬಿಜೆಪಿಯವರೇ ನನಗೆ ದಾಖಲೆಗಳನ್ನು ಕೊಟ್ಟಿದ್ದಾರೆ. ಆದರೆ ದಾಖಲೆ ಕೊಟ್ಟವರು ಯಾರೆಂದು ನಾನು ಹೇಳುವುದಿಲ್ಲ ಎಂದು ಮೈಸೂರು ನಗರದಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ.

ಸಿಎಂ ಪುತ್ರನ ವಿರುದ್ಧ ಸಹಿ ಹಾಕಿದ್ದಾರಾ ಬಿಜೆಪಿ ಶಾಸಕರು?
ನಾವು ದಾಖಲೆಗಳನ್ನು ಕಂತುಗಳ ಪ್ರಕಾರ ಬಿಡುಗಡೆ ಮಾಡ್ತೇವೆ. ಬಿಜೆಪಿ ಶಾಸಕರು ಸಹಿ ಸುಳ್ಳು ಎಂದು ಅವರು ಹೇಳಬಹುದು. ಆದ್ರೆ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಸಂಪೂರ್ಣ ದಾಖಲೆ ಮುಂದಿನ ದಿನಗಳಲ್ಲಿ‌ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಈ ಬಗ್ಗೆ 10 ದಿನದೊಳಗೆ ಸಿಬಿಐ ತನಿಖೆಯಾದ್ರೂ ನಡೆಸಬೇಕು. ಇಲ್ಲದಿದ್ದರೆ ಸಾಂವಿಧಾನಿಕ ಪೀಠ ರಚಿಸಿ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಬಿಜೆಪಿಯ 7 ಶಾಸಕರು ಬಿಜೆಪಿ ಉಳಿಸಿ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಆದರೆ ಆ ಏಳು ಶಾಸಕರು ಯಾರೆಂಬುದು ನನಗೆ ಗೊತ್ತಿಲ್ಲ.

ದೆಹಲಿಯಲ್ಲಿ ಸಿಡಿಯಲಿದ್ಯಾ ದಾಖಲೆಯ ಸಿಡಿ?
ಇನ್ನು ಈ ಆರೋಪದ ಕುರಿತು ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ‘ಸಿಎಂ, ಸೂಪರ್ ಸಿಎಂ’-‘ಜಿಎಸ್‌ಟಿ v/s ವಿಎಸ್‌ಟಿ. ಸೂಪರ್ ಸಿಎಂ ವಿಜಯೇಂದ್ರ ದರ್ಬಾರ್ ಹೆಸರಿನಲ್ಲಿ ಬೇನಾಮಿ ಸಂಪತ್ತು ಮಾಡಿದ್ದಾರೆಂದು ಗಂಭೀರವಾಗಿ ಆರೋಪ ಮಾಡಲಾಗಿದೆ. ವಿಜಯೇಂದ್ರ ಎಲ್ಲ ಇಲಾಖೆಗಳಲ್ಲೂ ಉಸ್ತುವಾರಿಗಳನ್ನ ಇಟ್ಟುಕೊಂಡಿದ್ದಾರೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದಾರೆ. ಬಿ.ವೈ.ವಿಜಯೇಂದ್ರ ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದೂ ಲಕ್ಷ್ಮಣ್​ ಆರೋಪಿಸಿದ್ದಾರೆ.

ಜೊತೆಗೆ ಟ್ರಾನ್ಸ್​ಫರ್​ ದಂಧೆಯಲ್ಲಿ ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ ಎಂದಿದ್ದಾರೆ. ಸೆಪ್ಟೆಂಬರ್ 2 ಅಥವಾ 3ನೇ ವಾರದಲ್ಲಿ ದಾಖಲೆ ಬಿಡುಗಡೆ ಮಾಡ್ತೇವೆ. ದೆಹಲಿಯಲ್ಲಿ ನಾವು ಸಮಗ್ರ ದಾಖಲೆ ಬಿಡುಗಡೆ ಮಾಡುತ್ತೇವೆ. ಆಡಿಯೋ, ವಿಡಿಯೋ ಕ್ಲಿಪ್‌ಗಳನ್ನ ನಾವು ಕ್ರೋಡೀಕರಿಸಿದ್ದೇವೆ. ಬಿಜೆಪಿಯವರ ಎಲ್ಲ ಅಕ್ರಮಗಳನ್ನು ಬಯಲು ಮಾಡುತ್ತೇವೆ. ನಿಮ್ಮ ಅಕ್ರಮಗಳ ಬಗ್ಗೆ ನಿಮ್ಮವರೇ ಪತ್ರ ಬರೆದಿದ್ದಾರೆ. ರಾಜ್ಯದ 7 ಬಿಜೆಪಿ ಶಾಸಕರು ಸಹಿ ಹಾಕಿರುವ ಪತ್ರವೂ ಇದೆ. ಬಿಜೆಪಿ ಉಳಿಸಿ ಎಂದು ಬಿಜೆಪಿ ಹೈಕಮಾಂಡ್​ಗೆ ಬಿಜೆಪಿ ಶಾಸಕರೇ ಪತ್ರ ಬರೆದಿದ್ದಾರೆ. ಆ ಪತ್ರದ ಬಗ್ಗೆ ನೀವೇ ತನಿಖೆ ನಡೆಸಿ ಎಂದು ಲಕ್ಷ್ಮಣ್​ ಒತ್ತಾಯಿಸಿದ್ದಾರೆ.